
ಬಿಗ್ ಬಜೆಟ್ ಸಿನಿಮಾಗಳು ಹಾಗೂ ಹೊಸ ಧಾರಾವಾಹಿಗಳು ಕೊರೋನಾ ಕಾಟದಿಂದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದಾರೆ ಆದರೆ ಇಂಥ ಪರಿಸ್ಥಿತಿಯಲ್ಲೂ ಧಾರಾವಾಹಿ ಬಿಡುಗಡೆ ಮಾಡುವುದಕ್ಕೆ ಸ್ಟಾರ್ ಸುವರ್ಣ ಮುಂದಾಗಿದೆ. ಅದುವೇ ಆಕಾಶ ದೀಪ.
ಬಹಳ ದಿನಗಳ ನಂತರ ನಟ ಜತ್ ಡಿಸೋಜ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಣ್ಣ ಕಾಣದ ಹುಡುಗ ಆಕಾಶನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪನ ಮುದ್ದಿನ ಮಗಳು, ಹಾಲಿನ ಡೈರಿ ಮಾಡಿ ತನ್ನ ಮನೆ ನಡೆಸಿಕೊಂಡು ಹೋಗುತ್ತಿರುವ ಹುಡುಗಿ ದೀಪಾ. ಆಕಾಶ್‌ಗೆ ಹಣ ಮತ್ತು ಪ್ರೀತಿಸುವ ಕುಟುಂಬವಿದೆ ಆದರೆ ಕಣ್ಣಿಲ್ಲ. ಕಣ್ಣಿಲ್ಲದಿದ್ದರೂ ಆಕಾಶ್ ಫೋಟೋಗ್ರಾಫರ್ ಆಗಿರುತ್ತಾನೆ ಅದೇ ಅವನ ವ್ಯಕ್ತಿತ್ವದ ವಿಶೇಷತೆ. ಇದು ಹೇಗೆ ಸಾಧ್ಯ? ಎಂಬುದು ಧಾರಾವಾಹಿ.
'ಮುದ್ದುಲಕ್ಷ್ಮಿ' ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರಕ್ಕೆ ಕಾರ್ತಿಕ್ ಸಮಾಗ್ ಎಂಟ್ರಿ!
ಜೂನ್ 21ರಿಂದ ರಾತ್ರಿ 8 ಗಂಟೆಗೆ ಆಕಾಶ ದೀಪ ಪ್ರಸಾರವಾಗುತ್ತದೆ. ಧಾರಾವಾಹಿಯ ಶೀರ್ಷಿಗೆ ಗೀತೆ ಎಲ್ಲರ ಗಮನ ಸೆಳೆಯುತ್ತಿದೆ. ಮುದ್ದುಲಕ್ಷ್ಮಿ, ಸರಸು ಮತ್ತು ಮನಸೆಲ್ಲಾ ನೀನೆ ಧಾರಾವಾಹಿ ಸಮಯದಲ್ಲಿ ಆಕಾಶದೀಪ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡುವ ಸಾಧ್ಯತೆ ಹೆಚ್ಚಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.