
ಜೀ ಕನ್ನಡದ ಬಹುನಿರೀಕ್ಷಿತ ಜಗದ್ಧಾತ್ರಿ ಸೀರಿಯಲ್ ಇಂದು ಪ್ರಸಾರವಾಗಿದೆ. ವಿಜಯ್ ಸೂರ್ಯ ಮತ್ತು ಮೋಕ್ಷಿತಾ ಪೈ ಮುಖ್ಯಭೂಮಿಕೆಯಲ್ಲಿರುವ ಜಗದ್ಧಾತ್ರಿ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಬಿಡುಗಡೆಯಾಗಿರುವ ಪ್ರೋಮೋ ಪ್ರಕಾರ, ಜಗದ್ಧಾತ್ರಿ ಸೀರಿಯಲ್ ನಾಯಕಿಯಾಗಿದ್ದು, ವೃತ್ತಿಯಲ್ಲಿ ಏಜೆಂಟ್ ಆಗಿರುತ್ತಾಳೆ. ಮನೆಯಲ್ಲಿ ಮುಗ್ಧೆಯಾಗಿರುವ ಜಗದ್ಧಾತ್ರಿ ಹೊರಗಡೆ ಸಿಕ್ಕಾಪಟ್ಟೆ ರೆಬೆಲ್ ಆಗಿರುತ್ತಾಳೆ. ಪೊಲೀಸರನ್ನೇ ದ್ವೇಷಿಸುವ ಕುಟುಂಬದ ನಡುವೆ ಜಗದ್ಧಾತ್ರಿ ಐಪಿಎಸ್ ಅಧಿಕಾರಿಯಾಗಿರುತ್ತಾಳೆ. ಜಗದ್ಧಾತ್ರಿ ಹೇಗೆ ಐಪಿಎಸ್ ಆಗುತ್ತಾಳೆ? ಕುಟುಂಬಸ್ಥರಿಗೆ ತಿಳಿಯದಂತೆ ಹೇಗೆ ಕರ್ತವ್ಯಕ್ಕೆ ಹಾಜರಾಗುತ್ತಾಳೆ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಕಣ್ಣೀರು ಮೂಲಕ ಜಗದ್ಧಾತ್ರಿ ಸೀರಿಯಲ್ ಆರಂಭವಾಗಿದ್ದು, ಪೋಷಕರ ಫೋಟೋ ಹಿಡಿದು ನಾಯಕಿ ಕಣ್ಣೀರು ಹಾಕುತ್ತಿರುತ್ತಾಳೆ. ನಂತರ ಅಜ್ಜಿ ಸುಬ್ಬಲಕ್ಷ್ಮೀ ಜೊತೆ ಜಗದ್ಧಾತ್ರಿ ಮಾರುಕಟ್ಟೆಗೆ ಹೋಗುತ್ತಾಳೆ. ಮಾರುಕಟ್ಟೆಯಲ್ಲಿ ಇಲಿ ಕಂಡು ಜಗದ್ಧಾತ್ರಿ ಹೆದರಿಕೊಂಡು ಬೀಳುತ್ತಾಳೆ. ಅಲ್ಲಿಂದ ಸೂರ್ಯನ ಪರಿಚಯವಾಗುತ್ತೆ. ಕನಸು ಕಾಣುತ್ತಾ ಜಗದ್ಧಾತ್ರಿ ಮುಂದೆ ಬೀಳುತ್ತಾಳೆ. ಇಲ್ಲಿ ಸೂರ್ಯನದ್ದು ಒನ್ ಸೈಡ್ ಲವ್ ಎಂಬುದನ್ನು ತೋರಿಸಲಾಗಿದೆ.
ಇಲ್ಲಿಂದ ನೇರವಾಗಿ ಜಗದ್ಧಾತ್ರಿಯ ತಂದೆ ಸುರೇಶ್ ಪಾತ್ರ ಬರುತ್ತೆ. ಹೆಂಡತಿ ರೇಖಾಗೆ ಕಾಣದಂತೆ ಸುರೇಶ್ ಮಗಳಿಗೆ ಸೀರೆ ನೀಡುವಾಗ ಮಲತಾಯಿ ಎಂಟ್ರಿ ಆಗುತ್ತದೆ. ಎಂದಿನಂತೆ ಮಲತಾಯಿ ಕಿರಿಕಿರಿ ಶುರುವಾಗುತ್ತದೆ. ನಂತರ ನಿಶಾಳ ಪಾತ್ರ ಬರುತ್ತೆ. ಈ ನಿಶಾಳಿಂದಲೂ ಜಗದ್ಧಾತ್ರಿಗೆ ಕಿರಿಕಿರಿ ತಪ್ಪಿದ್ದಲ್ಲ. ನಂತರ ನಿಖಿಲ್, ಲತಾ ಕಾಣಿಸಿಕೊಳ್ಳುತ್ತಾರೆ.
ಇನ್ನು ಈ ಸೀರಿಯಲ್ ಮತ್ತೊಂದು ಭಾಗ ಅಂದ್ರೆ ಕೌಶಿಕಿ. ಮಾಧ್ಯಮಲೋಕದ ನಿರೂಪಕಿ ಕೌಶಿಕಿ, ಸಚಿವ ಶಿವರಾಜ್ ಅವರ ಸಂದರ್ಶನ ಆರಂಭಿಸುತ್ತಾಳೆ. ನಂತರ ಕೌಶಿಕಿ ಕುಟುಂಬದ ಒಂದೊಂದು ಪಾತ್ರಗಳು ಮುನ್ನಲೆ ಬರಲಾರಂಭಿಸುತ್ತವೆ. ಕಳೆದ 15 ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಎಲ್ಲಾ ಪ್ರೋಮೋಗಳ ತುಣುಕುಗಳನ್ನು ಒಂದೆಡೆಯಾಗಿ ಮೊದಲ ಸಂಚಿಕೆಯಲ್ಲಿ ತೋರಿಸಲಾಗಿದೆ. ಮೊದಲ ಸಂಚಿಕೆಯಲ್ಲಿಯೇ ನಿರ್ದೇಶಕರು ಬಹುತೇಕ ಎಲ್ಲಾ ಪಾತ್ರಗಳನ್ನು ಪರಿಚಯಿಸುವ ಮೂಲಕ ಸೀರಿಯಲ್ ಆರಂಭಕ್ಕೆ ಬುನಾದಿ ಹಾಕಿದ್ದಾರೆ.
ಜಗದ್ಧಾತ್ರಿ ಮತ್ತು ಕುಟುಂಬ
ಜಗದ್ಧಾತ್ರಿ: ಮುಗ್ದೆ, ಐಪಿಎಸ್ ಆಫಿಸರ್
ಸೂರ್ಯ: ಜಗದ್ಧಾತ್ರಿಯನ್ನು ಪ್ರೀತಿಸುವ ಹೃದಯ, ಏಜೆಂಟ್. ದುಷ್ಟರ ಪಾಲಿಗೆ ಸಿಡಿಗುಂಡು ಆಗೋ ಜಗದ್ಧಾತ್ರಿಯ ಜರ್ನಿಗೆ ಸೂರ್ಯನೇ ಕಾವಲು! ಅಸಾಧ್ಯವನ್ನು ಸಾಧ್ಯ ಮಾಡೋ ಜಗತ್ ಕಿಲಾಡಿ, ತಂತ್ರಜ್ಞಾನದಲ್ಲೇ ಇವನ ಮೋಡಿ. ಇವನೇ ಜಗದ್ಧಾತ್ರಿಯ ಬೆಸ್ಟ್ ಫ್ರೆಂಡ್ ಸೂರ್ಯ!
ಸುರೇಶ್: ಜಗದ್ಧಾತ್ರಿಯ ಮುದ್ದಿನ ಅಪ್ಪ, ಆದರೆ ಮಗಳ ಮೇಲಿನ ಪ್ರೀತಿ ತೋರಿಸಿಕೊಳ್ಳಲಾಗದ ಅಸಹಾಯಕ ಸುರೇಶ್!
ರೇಖಾ: ಸುರೇಶ್‌ನ ಎರಡನೇ ಹೆಂಡ್ತಿ, ಜಗದ್ಧಾತ್ರಿಯ ಮಲತಾಯಿ. ಮಾಡೋದು ಚೀಟಿ ವ್ಯವಹಾರ, ದುಡ್ಡು ಅಂದ್ರೆ ಬಾಯಿಬಿಡೋ ರೇಖಾಗೆ ಮಲಮಗಳು ಜಗದ್ಧಾತ್ರಿ ಕಂಡ್ರೆ ಅಷ್ಟಕ್ಕಷ್ಟೆ!
ಸುಬ್ಬಲಕ್ಷ್ಮೀ: ಜಗದ್ಧಾತ್ರಿಗೆ ಬೆಂಬಲವಾಗಿರೋ ಪ್ರೀತಿಯ ಅಜ್ಜಿ. ಮೊಮ್ಮಗಳು ಜಗದ್ಧಾತ್ರಿಯನ್ನು ಅತಿಯಾಗಿ ಪ್ರೀತಿಸೋ ಜೀವ, ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿ ಈ ಸುಬ್ಬುಲಕ್ಷ್ಮಿ!
ಲತಾ: ಒಂದು ಕಾಲದಲ್ಲಿ ಜಗದ್ಧಾತ್ರಿ ಕಂಡ್ರೆ ಪ್ರೀತಿ, ಆದರೆ ಈಗ ತಪ್ಪು ಕಲ್ಪನೆಯಿಂದ ದ್ವೇಷಿಸ್ತಿದ್ದಾರೆ ಅತ್ತೆ ಲತಾ!
ನಿಖಿಲ್: ಜೆನ್ ಜಿ ಕಿಡ್, ಸೋಷಿಯಲ್ ಮೀಡಿಯಾ ನಿಖಿಲ್‌ಗೆ ಜೀವಾಳ. ರೇಖಾ ಮಗ ಆದ್ರೂ ಜಗದ್ಧಾತ್ರಿ ಕಂಡ್ರೆ ಇನ್ನಿಲ್ಲದ ಅಕ್ಕರೆ!
ನಿಶಾ: ಜಗದ್ಧಾತ್ರಿಗೆ ಕಾಟ ಕೊಡೋ ರೇಖಾಳ ಹೆತ್ತ ಮಗಳು ನಿಶಾಗೆ ದುಡ್ಡಿರೋ ಹುಡುಗನೇ ಬೇಕಂತೆ!
ಟೀನಾ, ಮಂಜ, ಚಂದನ್ ಮತ್ತು ಸಂಧ್ಯಾ ಎಂಬ ನಾಲ್ಕು ಏಜೆಂಟ್ ಪಾತ್ರಗಳಿವೆ.
ಕೌಶಿಕಿ: ಮೀಡಿಯಾ ಜಗತ್ತಿನಲ್ಲಿ ಬಾಸ್ ಆಗೋಕೂ ಸೈ, ಮನೆಯಲ್ಲಿ ಅಮ್ಮನಾಗೋಕೂ ಸೈ!
ವಿಷ್ಣು: ಹೆಸರಾಂತ ಪತ್ರಕರ್ತ, ಕೌಶಿಕಿ ಗಂಡ. ಪತ್ನಿ ಮತ್ತು ಮಗಳನ್ನು ಸೇರಲು ಕಾಯುತ್ತಿರೋ ಜೀವ
ಮೀನಾಕ್ಷಿ: ಕೌಶಿಕಿ ಅಮ್ಮ, ಶಾಂತ ಸ್ವಭಾವದವರು. ದೂರವಾಗಿರೋ ಅಳಿಯ ಮತ್ತು ಮಗಳನ್ನು ಒಂದು ಮಾಡೋದು ಇವರ ಗುರಿ!
ಪೃಥ್ವಿರಾಜ್ ಅರಸ್: 'ಜನಧ್ವನಿ'ಯನ್ನ ಜನಪ್ರಿಯ ಮಾಡೋದ್ರಲ್ಲಿ ಕೌಶಿಕಿ ಜೊತೆ ಕೈಜೋಡಿಸಿರೋರೆ ಮೊದಲನೇ ಚಿಕ್ಕಪ್ಪ ಪೃಥ್ವಿರಾಜ್ ಅರಸ್!
ಯುವರಾಜ್ ಅರಸ್: ದುಡ್ಡೇ ದೊಡ್ಡಪ್ಪ, ಜೀವನ ಇರೋದೇ ಎಂಜಾಯ್ ಮಾಡೋಕೆ ಅನ್ನೋ ದುರಹಂಕಾರಿ ಯುವರಾಜ್ ಅರಸ್!
ವೈಜಯಂತಿ ಅರಸ್: ಕೌಶಿಕಿಯ ಜನಪ್ರಿಯತೆಯಿಂದಲೇ ನನಗೆ ಮಹತ್ವ ಕಮ್ಮಿ ಎಂದು ದ್ವೇಷಕ್ಕೆ ಮುನ್ನುಡಿ ಬರೆಯೋ ಜಗದ್ಧಾತ್ರಿಯ ಚಿಕ್ಕಮ್ಮ ವೈಜಯಂತಿ ಅರಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.