ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್’ಶಿಪ್ ಉಳಿಯಲ್ಲ ಎಂದ ಸಂಗೀತ ಶೃಂಗೇರಿಗೆ ತಿರುಗೇಟು ಕೊಟ್ಟ ಹನು-ಧನು

Published : Sep 28, 2026, 08:20 PM IST
Bigg boss kannada

ಸಾರಾಂಶ

Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್’ಶಿಪ್ ಉಳಿಯಲ್ಲ ಎನ್ನುವ ಸಂಗೀತ ಶೃಂಗೇರಿ ಮಾತು ವೈರಲ್ ಆಗಿದ್ದು, ಅದು ಸುಳ್ಳು ಎನ್ನುತ್ತಾ, ತಮ್ಮ ಫ್ರೆಂಡ್ ಶಿಪ್ ಯಾವಾಗ್ಲೂ ಶಾಶ್ವತ ಎನ್ನುವಂತೆ ಕಾಲವನ್ನು ತಡೆಯೋರು ಯಾರು ಇಲ್ಲ ಎಂಬ ವಿಡೀಯೋ ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ ಹನುಮಂತ ಮತ್ತು ಧನರಾಜ್ ಆಚಾರ್.

ಬಿಗ್ ಬಾಸ್ ದೋಸ್ತಾಗಳು

ಬಿಗ್ ಬಾಸ್ ಸೀಸನ್ 11ರಲ್ಲಿ ಜೊತೆಯಾದ ಜೋಡಿ ಹನುಮಂತು ಮತ್ತು ಧನರಾಜ್ ಆಚಾರ್. ಇವರಿಬ್ಬರ ಫ್ರೆಂಡ್ ಶಿಪ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ದೋಸ್ತಾ ಎಂದು ಕರೆಯುವ ಆತ್ಮೀಯತೆ, ಇಬ್ಬರ ಒಡನಾಟ, ಆ ಸ್ನೇಹ, ಆ ನಗು, ಪ್ರೀತಿ ಜನರಿಗೆ ತುಂಬಾನೆ ಇಷ್ಟವಾಗಿತ್ತು. ಬಿಗ್ ಬಾಸ್ ಮುಗಿದು ವರ್ಷಗಳು ಎರಡು ಕಳೆದರೂ ಸಹ ಈ ಸ್ನೇಹ ಯಾವಾಗಲೂ ಹಾಗೆಯೇ ಇದೆ. ಇದೀಗ ಇಬ್ಬರು ಜೊತೆಯಾಗಿ ಸೇರಿ ಮಾಡಿರುವ ರೀಲ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಂಗೀತ ಶೃಂಗೇರಿ ಮಾತಿಗೆ ತಿರುಗೇಟು

ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ ಸ್ಪರ್ಧಿಯೊಬ್ಬರನ್ನು ಪ್ರಶ್ನಿಸುತ್ತಾ, ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ಶಿಪ್ ಉಳಿಯುತ್ತಾ ಎಂದು ಕೇಳುತ್ತಾರೆ. ಜೊತೆಗೆ ಈ ಮಾತಿಗೆ ಸಂಗೀತ ಶೃಂಗೇರಿಗೆ ಉತ್ತರ ಸರಿಯಾಗಿಯೇ ಗೊತ್ತಿದೆ ಎನ್ನುತ್ತಾರೆ. ಅದಕ್ಕೆ ಸಂಗೀತಾ ನಗುತ್ತಲೇ ಉತ್ತರಿಸಿ, ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ಶಿಪ್ ಖಂಡಿತವಾಗಿಯೂ ಉಳಿಯೋದಿಲ್ಲ ಇದು 100% ನಿಜಾ ಎಂದಿದ್ದಾರೆ. ಈ ವಿಡೀಯೋವನ್ನು ನೋಡುವ ಹನುಮಂತು ಮತ್ತು ಧನ್ ರಾಜ್, ಇದು ಸುಳ್ಳು ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ ಶಿಪ್ ಉಳಿಯುತ್ತೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಕಾಲವನ್ನು ತಡೆಯೋರು ಯಾರು ಇಲ್ಲ ಎಂದ ದೋಸ್ತಾ ಜೋಡಿ

ದೋಸ್ತಾನೀ ನನ್ನ ಪ್ರಾಣ ಕಣೊ.. ಅಂದಿಗೂ.. ಇಂದಿಗೂ.. ಎಂದೆಂದಿಗೂ ಎನ್ನುವ ಕ್ಯಾಪ್ಶನ್ ಕೊಟ್ಟು ಧನರಾಜ್ ಆಚಾರ್ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಆಪ್ತಮಿತ್ರ ಸಿನಿಮಾದ ಡಾ. ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಎವರ್ ಗ್ರೀನ್ ಫ್ರೆಂಡ್ ಶಿಪ್ ಹಾಡು ಕಾಲವನ್ನು ತಡೆಯೋರು ಯಾರು ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ. ನನ್ನಿಂದ ನಿನ್ನ, ನಿನ್ನಿಂದ ನನ್ನ ದೂರ ಮಾಡಲು ಎಂದೂ ಆಗಲ್ಲ ಎನ್ನುವ ಹಾಡಿಗೆ ಇಬ್ಬರು ಜೊತೆಯಾಗಿ ಹೆಜ್ಜೆ ಹಾಕಿ ರೀಲ್ಸ್ ಮಾಡಿದ್ದು, ಸದ್ಯ ಈ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಅಭಿಮಾನಿಗಳ ಮೆಚ್ಚುಗೆ

ಧನು ಮತ್ತು ಹನು ದೋಸ್ತಾ ಜೋಡಿಗಳನ್ನು ಮತ್ತೆ ಜೊತೆಯಾಗಿ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ನಿಮ್ಮ ಸ್ನೇಹಾ ಯಾವಾಗಲೂ ಹೀಗೆ ಇರಲಿ, ಇಬ್ಬರ ಸ್ನೇಹಕ್ಕೆ ಯಾರ ಕಣ್ಣೂ ಕೂಡ ಬೀಳದೇ ಇರಲಿ ಎಂದು ಹಾರೈಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಯಾಲಿಟಿ ಶೋನಲ್ಲಿ ಬಿಜೆಪಿ ಮಾಜಿ ವಕ್ತಾರ Shehzad Poonawalla ಮೇಲೆ ಹಲ್ಲೆ, ಸಹ ಸ್ಪರ್ಧಿ Siwet Tomar ಶೋನಿಂದ ಎಲಿಮಿನೇಟ್‌
'ಖಂಡಿತ, ಇನ್ಮೇಲೆ ಬಿಗ್ ಬಾಸ್ ನೋಡಲ್ಲ' ಮನೆಯಿಂದ ಹೊರ ಬರ್ತಿದ್ದಂತೆ ಅವಿನಾಶ್ ಅಚ್ಚರಿಯ ಹೇಳಿಕೆ