ಫಿನಾಲೆ ತಲುಪದ ಅನ್‌ಲಕ್ಕಿ ಸ್ಪರ್ಧಿ: ಬಿಬಿ ಮನೆಯಿಂದ ದಿವ್ಯಾ ಸುರೇಶ್ ಔಟ್!

Suvarna News   | Asianet News
Published : Aug 05, 2021, 11:03 AM ISTUpdated : Aug 05, 2021, 11:12 AM IST
ಫಿನಾಲೆ ತಲುಪದ ಅನ್‌ಲಕ್ಕಿ ಸ್ಪರ್ಧಿ: ಬಿಬಿ ಮನೆಯಿಂದ ದಿವ್ಯಾ ಸುರೇಶ್ ಔಟ್!

ಸಾರಾಂಶ

ಫಿನಾಲೆ ವಾರದಲ್ಲಿ ಮಿಡ್‌ವೀಕ್‌ ಎಲಿಮಿನೇಟ್‌ ಆದ ಸ್ಟ್ರಾಂಗ್ ಸ್ಪರ್ಧಿ ದಿವ್ಯಾ ಸುರೇಶ್. ಮಂಜುಗೆ ಕೊಟ್ಟ ಸರ್ಪ್ರೈಸ್‌ ಮೆಚ್ಚಿದ ನೆಟ್ಟಿಗರು. 

ಬಿಗ್ ಬಾಸ್‌ ಸೀಸನ್‌ 8 ಅಂತ್ಯಕ್ಕೆ ಆಗಮಿಸಿದೆ. 5 ಸ್ಪರ್ಧಿಗಳು ಫಿನಾಲೆ ತಲುಪಿದರೆ ಒಬ್ಬ ಸ್ಪರ್ಧಿ ಹೊರ ಬಂದಿದ್ದಾರೆ. ಅರವಿಂದ್ ಕೆಪಿ, ಮಂಜು ಪಾವಗಡ, ವೈಷ್ಣವಿ ಗೌಡ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ಸೇಫ್ ಆಗಿ ಫಿನಾಲೆ ತಲುಪಿದ್ದಾರೆ, ದಿವ್ಯಾ ಸುರೇಶ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ನಿಮಗೆ ಈಡೇರದ ಒಂದು ಆಸೆಯನ್ನು ಹಂಚಿಕೊಳ್ಳಿ. ಬಿಗ್ ಬಾಸ್ ನೆರವೇರಿಸುತ್ತಾರೆ ಎಂದು ಹೇಳಲಾಗಿತ್ತು. ಸ್ನೇಹಿತರ ದಿನಾಚರಣೆ ಪ್ರಯುಕ್ತ ದಿವ್ಯಾ ಸುರೇಶ್ ಒಂದು ಕ್ಯಾಂಡಲ್‌ ಲೈಟ್, ಕೇಕ್, ಮಂಜು ಜೊತೆಗಿನ ಫೋಟೋ  ಹಾಗೂ ಗಾರ್ಡನ್ ಏರಿಯಾ ಪೂರ್ತಿ ಬಲೂನ್‌ ಕೇಳಿದ್ದರು. ಎಲಿಮಿನೇಷನ್‌ ಮುಂಚೆ ಸಂಪೂರ್ಣ ವ್ಯವಸ್ಥೆ ಮಾಡಿಕೊಟ್ಟ ಬಿಗ್ ಬಾಸ್ ಮಧ್ಯರಾತ್ರಿ 2.30ರ ಸಮಯದಲ್ಲಿ ದಿವ್ಯಾರನ್ನು ಎಲಿಮಿನೇಷನ್ ಮಾಡಿದೆ.

ಪ್ರಶಾಂತ್ ಸಂಬರಗಿ ಕೂಡ ತಮ್ಮ ಫ್ಯಾಮಿಲಿ ಫೋಟೋ ಬಿಬಿ ಮನೆಯಲ್ಲಿ ಬೇಕು ಎಂದು ಆಸೆ ಹೇಳಿಕೊಂಡಿದ್ದರು. ಇಬ್ಬರ ಆಸೆಯನ್ನೂ ಈಡೇರಿಸಲಾಗಿತ್ತು. ಮನೆಯಿಂದ ಯಾರು ಹೋಗಬಹುದು ಎಂದು ಯಾರಿಗೂ ತಿಳಿದಿರಲಿಲ್ಲ. ಪ್ರಶಾಂತ್‌ಗಿಂತ ದಿವ್ಯಾ ಹೆಚ್ಚು ಟಾಸ್ಕ್ ಗೆದ್ದಿರುವ ಕಾರಣ ದಿವ್ಯಾ ಉಳಿಯಬಹುದು ಎಂದು ಕೊಂಡಿದ್ದರು. ಆದರೆ ಹೊರಗಿನ ಜನಪ್ರಿಯತೆ ಪ್ರಕಾರ ಸಂಬರಗಿಗೆ ಹೆಚ್ಚಿನ ಫ್ಯಾನ್ಸ್ ಇದ್ದಾರೆ. 

ಯಾಕಿಷ್ಟೋಂದು ವೈರಲ್ ಆಗುತ್ತಿದೆ ಬಿಗ್ ಬಾಸ್ ದಿವ್ಯಾ ಸುರೇಶ್ ಸ್ಟೈಲಿಶ್ ಔಟ್‌-ಫಿಟ್‌ಗಳು?

ಕೊನೆ ವೀಕೆಂಡ್ ವಿತ್ ಕಿಚ್ಚ ಎಪಿಸೋಡ್‌ನಲ್ಲಿ ಸುದೀಪ್ 'ಫಿನಾಲೆ ಹಂತ ತಲುಪದೆ ಎಲಿಮಿನೇಟ್ ಆಗುವ ಸ್ಪರ್ಧಿ ತುಂಬಾನೇ ಅನ್‌ಲಕ್ಕಿ. ಕೊನೆಯ ಕ್ಷಣದಲ್ಲಿ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಾರೆ,' ಎಂದಿದ್ದರು. ದಿವ್ಯಾ ವೇದಿಕೆಯ ಮೇಲೆ ಬರುತ್ತಾರಾ? ಸುದೀಪ್‌ ಜೊತೆ ಮಾತುಕತೆ ನಡೆಯುತ್ತಾ ಅಥವಾ ನೇರವಾಗಿ ಫಿನಾಲೆ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಕ್ಲಾರಿಟಿ ಲಭ್ಯವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್