ಲಕ್ಷ್ಮೀ ನಿವಾಸದ ಚಿನ್ನುಮರಿ ಮತ್ತೊಂದು ಮದುವೆಗೆ ರೆಡಿ! ಸೈಕೋ ಜಯಂತ್ ಸುಮ್ನಿರ್ತಾನ?

By Bhavani Bhat  |  First Published Nov 7, 2024, 9:57 AM IST

 ಲಕ್ಷ್ಮೀ ನಿವಾಸ ಸೀರಿಯಲ್‌ನ ಚಿನ್ನುಮರಿ ಅಂತಲೇ ಫೇಮಸ್ ಆಗಿರೋ ಚಂದನಾ ಅನಂತಕೃಷ್ಣ ರಿಯಲ್ ಲೈಫಲ್ಲಿ ಮದುವೆ ಆಗಲು ಹೊರಟಿದ್ದಾರೆ. ಸೈಕೋ ಜಯಂತ್ ಹೆಸರು ಹೇಳಿ ನೆಟ್ಟಿಗರು ಕಾಲೆಳೀತಿದ್ದಾರೆ.


ಚಂದನಾ ಅನಂತಕೃಷ್ಣ ಬಹುಮುಖ ಪ್ರತಿಭೆ. ಡ್ಯಾನ್ಸು, ನಟನೆ, ನಿರೂಪಣೆ ಹೀಗೆ ಬೇರೆ ಬೇರೆ ಫೀಲ್ಡ್‌ನಲ್ಲಿ ಸಖತ್ ಹೆಸರು ಮಾಡಿರೋ ಪ್ರತಿಭೆ. ಸದ್ಯಕ್ಕಂತೂ ಲಕ್ಷ್ಮೀ ನಿವಾಸದ ಚಿನ್ನುಮರಿ ಅಂತಲೇ ಫೇಮಸ್. ಇವರೀಗ ರಿಯಲ್ಲಾಗಿ ಹಸೆಮಣೆ ಏರುವ ಸಂಭ್ರಮದಲ್ಲಿದ್ದಾರೆ. ಕುಟುಂಬದವರೇ ನೋಡಿ ಒಪ್ಪಿರುವ ಹುಡುಗನ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಹೇಳದಿದ್ದರೂ, ಇದೇ ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಚಂದನಾ ಅವರು ಕೈ ಹಿಡಿಯಲು ಹೊರಟಿರುವ ಹುಡುಗ ಪ್ರತ್ಯಕ್ಷ್ ಉದಯ್. ಇವರ ಬಗ್ಗೆ ಹೆಚ್ಚು ಯಾರಿಗೂ ಗೊತ್ತಿಲ್ಲ. ಉದ್ಯಮಿಯಾಗಿರುವ ಪ್ರತ್ಯಕ್ಷ್ ಅವರ ಪೋಷಕರು ಕೂಡ ಬಣ್ಣದ ಲೋಕದವರೇ ಅನ್ನೋದು ವಿಶೇಷ.

ಡಾ ರಾಜ್ ಕುಮಾರ್ ಅವರ ಜೊತೆಗೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ದಿ.ಉದಯ್ ಹುತ್ತಿನಗದ್ದೆ ಪ್ರತ್ಯಕ್ಷ್ ಅವರ ತಂದೆ. ಇವರು ಆರಂಭ, ಜಯಭೇರಿ, ಅಗ್ನಿಪರ್ವ, ಉದ್ಭವ, ಅಮೃತ ಬಿಂದು, ಶುಭಮಿಲನ, ಕ್ರಮ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಪ್ರತ್ಯಕ್ಷ್ ಅವರ ತಾಯಿ ಲಲಿತಾಂಬ ಅವರು ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರತ್ಯಕ್ಷ್ ಅವರ ತಂದೆ ಸಿನಿಮಾ ಹೊರತುಪಡಿಸಿ, ಕಾಫಿ ಎಸ್ಟೇಟ್ ಅನ್ನು ಹೊಂದಿದ್ದರು. ಭಾಗಶಃ ಪ್ರತ್ಯಕ್ಷ್ ಅವರು ಇದೇ ಉದ್ಯಮವನ್ನು ಮುಂದುವರೆಸಿರಬಹುದು ಎಂದು ಊಹಿಸಲಾಗಿದೆ. ಆದರೆ, ಹೆಚ್ಚಿನ ಮಾಹಿತಿ ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Tap to resize

Latest Videos

undefined

ನಮ್ಮನ್ನು ಯಾರೂ ದೂರ ಮಾಡುವುದಕ್ಕೆ ಹೋಗಬೇಡಿ; ಜಗಪ್ಪ-ಸುಶ್ಮಿತಾ ಡಿವೋರ್ಸ್ ಬಗ್ಗೆ ಸ್ಪಷ್ಟನೆ!

ನಟಿ ಚಂದನಾ ಅವರು ನಟನೆ, ನಿರೂಪಣೆ, ಡ್ಯಾನ್ಸ್ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಈ ಹಿಂದೆ ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದರು. ಸಕಲಕಲಾವಲ್ಲಭೆಯಾಗಿರುವ ಚಂದನಾ ತಮ್ಮಲ್ಲಿರುವ ಯಾವ ಟ್ಯಾಲೆಂಟ್ ಅನ್ನು ಪ್ರದರ್ಶಿಸೋದ್ರಲ್ಲಿ ಹಿಂದೆ ಬಿದ್ದವರಲ್ಲ. ಭರತನಾಟ್ಯದಲ್ಲಿ ಪರ್ಫಾರ್ಮಿಂಗ್ ಆರ್ಟ್ ನಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಇನ್ನು ಜಾಲಿ ಬ್ಯಾಚುಲರ್ಸ್ ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ತತ್ಸಮ ತದ್ಭವ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಈಕೆ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ವಿಭಿನ್ನ ಟಾಸ್ಕ್‌ಗಳಲ್ಲಿ ಗೆಲ್ಲುವ ಮೂಲಕ ಗಮನಸೆಳೆದಿದ್ದರು.

ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ನ ಮುದ್ದು ಹೆಂಡತಿ ಚಿನ್ನುಮರಿಯಾಗಿ ಕಾಣಿಸಿಕೊಂಡಿದ್ದು, ಈ ಪಾತ್ರದ ಮೂಲಕವೇ ಮನೆಮಾತಾಗಿದ್ದಾರೆ.

ಒಂದು ಪಾತ್ರ ಸಿಕ್ಕರೆ ಅದರ ಒಳಹೊಕ್ಕು ನಟಿಸೋದು ಈ ನಟಿಗೆ ಕರತಲಾಮಲಕ. ಹೀಗಾಗಿ ಇವರ ಪಾತ್ರಗಳೆಲ್ಲ ಜನರ ಮನಸ್ಸಿಗೆ ಹತ್ತಿರವಾಗಿದೆ. ಇನ್ನು ಲಕ್ಷ್ಮೀ ನಿವಾಸದ ಸೈಕೋ ಜಯಂತನ ಹೆಂಡತಿ ಚಿನ್ನುಮರಿ ಪಾತ್ರವನ್ನು ಈಕೆ ಜೀವಿಸಿದ್ದಾರೆ. ತನ್ನನ್ನು ಉಸಿರುಗಟ್ಟಿಸುವಂತೆ ಪ್ರೀತಿಸುವ ಜಯಂತ್ ಎಂಬ ಉದ್ಯಮಿ ಜೊತೆ ಬದುಕುವ ಮುಗ್ಧ ಹುಡುಗಿ ಜಾಹ್ನವಿಯಾಗಿ ಇವರ ನಟನೆ ಜನರ ಮನ ಗೆದ್ದಿದೆ.

ಸುದರ್ಶನ್ ಭಂಡಾರಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ

ಸದ್ಯ ಈಕೆ ರಿಯಲ್‌ನಲ್ಲಿ ಪ್ರತ್ಯಕ್ಷ್ ಎಂಬವರ ಜೊತೆ ಮದುವೆ ಆಗ್ತಿದ್ದಾರೆ ಅಂದಾಗ ಸೈಕೋ ಜಯಂತ್ ಸುಮ್ನಿರಲ್ಲ ಚಿನ್ನುಮರಿ, ಹುಷಾರಾಗಿರು' ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 'ಈ ವಿಷಯ ನಿನ್ನ ಗಂಡ ಜಯಂತಂಗೆ ಗೊತ್ತಾದ್ರೆ ಸುಮ್ನಿರಲ್ಲ, ನೋಡು' ಅಂತೆಲ್ಲ ಹೇಳಿ ಚಂದನಾ ಅವರನ್ನು ಗೋಳು ಹೊಯ್ಕೊಳ್ತಿದ್ದಾರೆ. ಸದ್ಯ ಈಕೆಯ ಮದುವೆ ಸುದ್ದಿ ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಆದರ ಆಪ್ತರ ಮೂಲಕ ಈ ಸುದ್ದಿಯಂತೂ ಜನರನ್ನು ತಲುಪಿದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

click me!