ನಮ್ಮನ್ನು ಯಾರೂ ದೂರ ಮಾಡುವುದಕ್ಕೆ ಹೋಗಬೇಡಿ; ಜಗಪ್ಪ-ಸುಶ್ಮಿತಾ ಡಿವೋರ್ಸ್ ಬಗ್ಗೆ ಸ್ಪಷ್ಟನೆ!

By Vaishnavi Chandrashekar  |  First Published Nov 7, 2024, 9:24 AM IST

ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಡಿವೋರ್ಸ್‌ ಬಗ್ಗೆ ಸ್ಪಷ್ಟನೆ ಕೊಟ್ಟ ಜಗ್ಗಪ್ಪ. ನಮ್ಮನ್ನು ದೂರ ಮಾಡುವ ಪ್ರಯತ್ನ ಮಾಡಬೇಡಿ ಎಂದ ಹಾಸ್ಯ ನಟ.....


ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಡ್ಯಾನ್ಸ್‌ ಡ್ಯಾನ್ಸ್‌, ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಕಾರ್ಯಕ್ರಮದಲ್ಲಿ ಮಿಂಚಿರುವ ಜಗ್ಗಪ್ಪ ಮತ್ತು ಸುಶ್ಮಿತಾ ಏಲೆಂಟು ವರ್ಷಗಳ ಕಾಲ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ದಿನ ಬೆಳಗ್ಗೆ ಶೂಟಿಂಗ್‌ ಸೆಟ್‌ನಲ್ಲಿ ಸಮಯ ಕಳೆಯುವ ಈ ಜೋಡಿ ಬಗ್ಗೆ ಹೊಸ ಗಾಸಿಪ್‌ ಒಂದು ಹಬ್ಬಿದೆ. ಸುಶ್ಮಿತಾ ಮತ್ತು ಜಗಪ್ಪ ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು. ಅಯ್ಯೋ ಪ್ರೀತಿಸುವಾಗ ಎಲ್ಲವೂ ಚೆನ್ನಾಗಿತ್ತು ಮದುವೆ ಆದ ಮೇಲೆ ಏನಾಯ್ತು ಎಂದು ಜನರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಹೀಗಾಗಿ ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಕೂಲ್‌ ಸಂದರ್ಶನದಲ್ಲಿ ಜಗ್ಗಪ್ಪ ಈ ವಿಚಾರ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.

ಇತ್ತೀಚಿಗೆ ಜಗ್ಗಪ್ಪ ಮತ್ತು ಸುಶ್ಮಿತಾ ಡಿವೋರ್ಸ್ ಆಗುತ್ತಿದ್ದಾರೆ ಅನ್ನೋ ಸುದ್ದಿ ಇತ್ತು. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಗಾಸಿಪ್ ಮಾಡಿಬಿಟ್ಟಿದ್ದರು ಅಕ್ಕ, ಬಂದಾಗ ಎಲ್ಲರೂ ಕೇಳುತ್ತಿದ್ದರು. ಏನೋ ಜಗ್ಗ ಸ್ಮಾರ್ಟ್ ಆಗು ಖುಷಿಯಾಗಿ ಇದ್ದೀನಿ ಅನಿಸುತ್ತದೆ ಸ್ಮಾರ್ಟ್ ಆಗಿಬಿಟ್ಟಿದ್ದೀಯ ಅಂತ ಹೇಳಿದ್ದರು. ನಾವು ತುಂಬಾ ಚೆನ್ನಾಗಿ ಇದ್ದೀವಿ ಅಕ್ಕ ನಾವೆಲ್ಲ ಬ್ಯಾಚುಲರ್ ಅಗಿದ್ದಾಗ ಎಷ್ಟೋತ್ತಿಗೆ ತಿಂದ್ವಿ ಹುಷಾರಿಲ್ಲ ಅಂದರೂ ನಾವೇ ಎದ್ದು ಬಿಸಿ ನೀರು ಕಾಯಿಸಿಕೊಳ್ಳಬೇಕು ಆದರೆ ಸುಶ್ಮಿತಾ ಬಂದಾಗ ಪಾಪ..ಅವಳು ಅವಳ ಮನೆಯಲ್ಲೇ ಕೆಲಸ ಮಾಡಿಲ್ಲ ಆಂದರೆ ನನ್ನ ಮನೆಗೆ ಬಂದ ಮೇಲೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ಎಂದು ಜಗ್ಗಪ್ಪ ಮಾತನಾಡಿದ್ದಾರೆ.

Tap to resize

Latest Videos

undefined

ಹೊಸ ಅಧ್ಯಾಯ ಆರಂಭ; ತಾಯಿಯಾಗುತ್ತಿರುವ ಸಂಭ್ರಮದಲ್ಲಿ ತಬಲಾ ನಾಣಿ ಪುತ್ರಿ!

'ಆರು ಗಂಟೆಗೆ ಅವಳಿಕೆ ಪಿಕ್‌ಅಪ್‌ ಇದ್ದರೆ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಿಂಡಿ ಎಲ್ಲಾ ರೆಡಿ ಮಾಡಿಟ್ಟು ಹೋಗುತ್ತಾಳೆ. ಮತ್ತೆ ವಾಪಸ್‌ ಬಂದು ಎಲ್ಲಾ ಕೆಲಸ ಮಾಡುತ್ತಾಳೆ. ನಾನು ಏನು ಹೇಳುತ್ತಿದ್ದೇನೆ ಅಂದರೆ ನಾವಿಬ್ಬರೂ ತುಂಬಾ ಚೆನ್ನಾಗಿ ಇದ್ದೀವಿ ತುಂಬಾ ಅನ್ಯೋನ್ಯವಾಗಿದ್ದೇವೆ. ನಮ್ಮ ಮೇಲೆ ಯಾರ ಕಣ್ಣು ಬೀಳುವುದು ಬೇಡ. ನಮ್ಮನ್ನು ಯಾರೂ ದೂರ ಮಾಡುವುದಕ್ಕೆ ಹೋಗಬೇಡಿ. ಐ ಲವ್ ಯು. ನೀನು ನನ್ನ ಎರಡನೆ ತಾಯಿ. ನಾನು ಯಾವತ್ತೂ ನಿನ್ನನ್ನು ನೋವು ಮಾಡುವುದಿಲ್ಲ. ಅವಳು ಅಂದರೆ ನನಗೆ ತುಂಬಾ ಇಷ್ಟ ಎಂದು ಜಗ್ಗಪ್ಪ ಹೇಳಿದ್ದಾರೆ. 

click me!