
Lakshmi Nivasa serial update: ಕೆಲ ತಿಂಗಳ ಹಿಂದೆ ನಂಬರ್ ಒನ್ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಸೀರಿಯಲ್ ಟಿಆರ್‌ಪಿ ಕುಸಿಯುತ್ತಿದೆ. ಧಾರಾವಾಹಿಯನ್ನು ಪದೇ ಪದೇ ಎಳೆಯಲಾಗ್ತಿದೆ ಎಂಬುವುದು ವೀಕ್ಷಕರ ಬೇಸರ. ಹಲವು ಕಥೆಗಳನ್ನು ಹೊಂದಿರುವ ಕಾರಣ ಲಕ್ಷ್ಮೀ ನಿವಾಸ ಒಂದು ಗಂಟೆ ಪ್ರಸಾರವಾಗುತ್ತಿತ್ತು. ಕರ್ಣನಿನಗಾವಿ ತನ್ನ 30 ನಿಮಿಷವನ್ನು ಲಕ್ಷ್ಮೀ ನಿವಾಸ ಬಿಟ್ಟುಕೊಡ್ತು. ಹಾಗಾಗಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಲಕ್ಷ್ಮೀ ನಿವಾಸ ಪ್ರಸಾರವಾಗುತ್ತದೆ. ಇಂದು ಬೆಳಗ್ಗೆ ಜಯಂತ್ ಮತ್ತು ಜಾಹ್ನವಿ ಮುಖಾಮುಖಿಯಾಗೋದನ್ನು ತೋರಿಸಲಾಗಿತ್ತು. ಈ ದೃಶ್ಯ ಸುಳ್ಳು ಅಥವಾ ಕನಸು ಆಗದಿರಲಿ ಎಂದು ವೀಕ್ಷಕರು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆದ್ರೆ ಸೀರಿಯಲ್ ನಿರ್ದೇಶಕರು ವೀಕ್ಷಕರ ಪ್ರಾರ್ಥನೆಯನ್ನು ಸುಳ್ಳು ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಜಾಹ್ನವಿ ಮತ್ತು ಜಯಂತ್ ಭೇಟಿ ಆಗುತ್ತಿರೋದನ್ನು ಕಾಯುತ್ತಿದ್ದೇವೆ. ಆದ್ರೆ ನಿರ್ದೇಶಕರು ಇಬ್ಬರ ಭೇಟಿಯನ್ನು ಪದೇ ಪದೇ ಮುಂದೂಡಿಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಚ್ಚರಿ ವಿಷಯ ಏನೆಂದ್ರೆ ಒಂದೇ ಮನೆಯಲ್ಲಿದ್ರೂ ಜಾನುಳನ್ನು ನೋಡಲು ವಿಶ್ವನಿಗೆ ತಿಂಗಳುಗಟ್ಟಲೇ ಸಮಯ ಬೇಕಾಗಿತ್ತು. ಇನ್ನು ಜಾನು ಇರೋ ಮನೆಗೆ ಜಯಂತ್ ಬಂದ್ರೂ ಚಿನ್ನುಮರಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ.
ವಿಶ್ವನ ಮನೆಯಲ್ಲಿಯೇ ಜಾಹ್ನವಿಯನ್ನು ಜಯಂತ್ ನೋಡುತ್ತಾನೆ. ಇನ್ನೇನು ತನ್ನ ಚಿನ್ನುಮರಿ ಸಿಕ್ಕಳು ಅನ್ನೋ ಖುಷಿಯಲ್ಲಿರುವ ಜಯಂತ್‌ಗೆ ಇದು ಸತ್ಯನಾ ಅಥವಾ ಭ್ರಮೆನಾ ಅನ್ನೋ ಗೊಂದಲ ಸೃಷ್ಟಿಯಾಗುತ್ತದೆ. ಜಯಂತ್ ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಾನು ಮತ್ತೆ ಮನೆಯೊಳಗೆ ಸೇರಿಕೊಳ್ಳುತ್ತಾಳೆ. ಜಯಂತ್ ಕಣ್ಣು ತೆರೆದು ನೋಡುವಷ್ಟರಲ್ಲಿ ತನ್ನ ಪ್ರೀತಿಯ ಜಾನು ಮಿಂಚಿನಂತೆ ಕಾಣೆಯಾಗಿರುತ್ತಾಳೆ. ಇಲ್ಲಿಗೆ ಸುಮ್ಮನಾಗದ ಜಯಂತ್, ಮನೆಯಲ್ಲಿ ಜಾಹ್ನವಿಯನ್ನು ಹುಡುಕಾಡಲು ಆರಂಭಿಸುತ್ತಾನೆ. ಇನ್ನೇನು ಜಾನು ಸಿಗ್ತಾಳೆ ಅನ್ನೋಷ್ಟರಲ್ಲಿ ವಿಶ್ವನ ಎಂಟ್ರಿಯಾಗಿದೆ.
ಇಲ್ಲೇನು ಮಾಡ್ತಿದ್ದೀರಿ ಸರ್. ನಿಮ್ಮ ಫೋನ್ ಒಡೆದು ಹಾಕಿದ್ದಕ್ಕೆ ಬೇಸರವಿದೆಯಾ ಕ್ಷಮಿಸಿ ಎಂದು ವಿಶ್ವ ಕೇಳುತ್ತಾನೆ. ಆದ್ರೆ ಈ ಬಾರಿ ಜಯಂತ್, ತಾನು ಏನು ನೋಡಿದೆ ಎಂಬುದನ್ನು ವಿಶ್ವನೊಂದಿಗೆ ಹಂಚಿಕೊಳ್ಳಲ್ಲ. ನಿಮ್ಮ ಫೋನ್ ಕೊಡಿ, ನಾನು ಕಾಲ್ ಮಾಡಬೇಕೆಂದು ಹೇಳಿ ಜಯಂತ್ ಹೊರಗೆ ಹೋಗುತ್ತಾನೆ. ಜಾನು ಬಳಿಗೆ ಬರುವ ವಿಶ್ವ, ಹೊರಗೆ ಬರೋದಕ್ಕೆ ಯಾಕೆ ಹೋಗಿದ್ದೆ? ನಾನು ಹೇಳುವರೆಗೊ ಇಲ್ಲಿಯೇ ಇರಬೇಕೆಂದು ಜಾನುಗೆ ಸೂಚಿಸುತ್ತಾನೆ. ನಾನು ಔಟ್ ಹೌಸ್‌ಗೆ ಹೋಗಬೇಕೆಂದು ಹೊರಡುವಷ್ಟರಲ್ಲಿ ಜಯಂತ್‌ಗೆ ಕಾಣಿಸಿಕೊಂಡೆ ಎಂದು ಜಾನು ಹೇಳುತ್ತಾಳೆ.
ಇದನ್ನೂ ಓದಿ: ಓ ದೇವ್ರೇ ಇದು ಮಾತ್ರ ಸುಳ್ಳಾಗದಿರಲಿ: ಲಕ್ಷ್ಮೀ ನಿವಾಸ ಸೀರಿಯಲ್ ಪ್ರೇಕ್ಷಕರ ಪ್ರಾರ್ಥನೆ
ಇನ್ನು ಹಣದಾಸೆಗಾಗಿ ಪೋಷಕರನ್ನು ಮನೆಯಿಂದ ಹೊರ ಹಾಕಿದ್ದ ಸಂತೋಷ್ ಹಣ ಕಳೆದುಕೊಳ್ಳುತ್ತಿದ್ದಾನೆ. ಹೆಚ್ಚಿನ ಬಡ್ಡಿ ದುರಾಸೆಯಿಂದ ಹಣ ನೀಡಿದ್ದನು. ಆದರೆ ಈಗ ಹಣ ಪಡೆದುಕೊಂಡ ವ್ಯಕ್ತಿ ನಾಪತ್ತೆಯಾಗಿರೋದು ಸಂತೋಷ್‌ನಿಗೆ ಆತಂಕವನ್ನುಂಟು ಮಾಡಿದೆ. ಮತ್ತೊಂದೆಡೆ ಭಾವನಾ, ಅತ್ತೆ ಮತ್ತು ಓರಗಿತ್ತಿಯ ಜಾಲದಿಂದ ಸಿಲುಕಿ ಪೇಚಾಡುತ್ತಿದ್ದಾಳೆ. ತಮ್ಮಿಂದ ಸುಳ್ಳು ಹೇಳಿ ಕಿತ್ತುಕೊಂಡಿದ್ದ ಹಣವನ್ನು ಶ್ರೀನಿವಾಸದ್ ಹಿಂಪಡೆದುಕೊಂಡಿದ್ದು, ಲಕ್ಷ್ಮೀ ನಿವಾಸ ಕಟ್ಟಲು ಮುಂದಾಗಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್ ತನ್ನದೇ ಆದ ವೀಕ್ಷಕರ ಬಳಗವನ್ನು ಹೊಂದಿದೆ. ಭಾವನಾ ಜೀವನ ಸರಿ ಹೋಗಬೇಕು, ರವಿಶಂಕರ್, ನೀಲು ಮುಖವಾಡ ಕಳಚಬೇಕು, ವೆಂಕಿಗೆ ಮಾತು ಬರಬೇಕು, ವಿಶ್ವ-ತನು ಮದುವೆ ನಡೆಯುತ್ತಾ? ಲಕ್ಷ್ಮೀ ನಿವಾಸ ಕಟ್ಟಬೇಕು? ಹರೀಶ್‌ನಿಗೆ ಜವಾಬ್ದಾರಿ ಬರಬೇಕು, ವೆಂಕಿ-ಜಯಂತ್ ಸ್ನೇಹದ ಸೀಕ್ರೆಟ್ ರಿವೀಲ್ ಆಗಬೇಕು, ಚೆಲುವಿ ತಾಯಿಗೆ ದೃಷ್ಟಿ ಬರಬೇಕು, ಶ್ರೀಕಾಂತ್ ಸಾವಿನ ರಹಸ್ಯ ತಿಳಿಬೇಕು. ಹೀಗೆ ಧಾರಾವಾಹಿ ಹಲವು ಅಂತ್ಯಗಳನ್ನು ಕಾಣಬೇಕಿದ್ದು, ಕಥೆಯನ್ನು ರಬ್ಬರ್‌ನಂತೆ ಎಳೆಯಬೇಡಿ. ಈಗಾಗಲೇ ಪಾತ್ರಧಾರಿಗಳು ಸರತಿ ಸಾಲಿನಂತೆ ಬದಲಾಗುತ್ತಿರೋದು ಧಾರಾವಾಹಿ ನೆಗೆಟಿವ್ ಆಗುತ್ತಿದೆ ಎಂದು ವೀಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Amruthadhaare: ಯಾವುದು ಕಾಕತಾಳೀಯ ಅಲ್ಲ, ಎಲ್ಲವೂ ಪ್ರೀ ಪ್ಲಾನ್: ಇದ ಖಂಡಿತ ವಿಧಿಯಾಟ ಅಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.