Bhavya Gowda: ಆದಷ್ಟು ಬೇಗ 5 ವರ್ಷದ ಕ್ರಶ್‌ ಕಥೆ ರಿವೀಲ್‌ ಮಾಡ್ತೀನಿ: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಸಂದರ್ಶನ

Published : Jun 12, 2025, 11:24 AM ISTUpdated : Jun 12, 2025, 11:59 AM IST
bhavya gowda

ಸಾರಾಂಶ

ಕರ್ಣ ಧಾರಾವಾಹಿಯಲ್ಲಿ ನಾಯಕಿ ನಿಧಿಯಾಗಿ ನಟಿಸುತ್ತಿರುವ ಭವ್ಯಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರಾಜೆಕ್ಟ್ ಆಯ್ಕೆ, ಪಾತ್ರದ ಸವಾಲುಗಳು, ತಮ್ಮ ಕ್ರಶ್ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಸಂದರ್ಶನ-ಪದ್ಮಶ್ರೀ ಭಟ್

ಕರ್ಣ ಧಾರಾವಾಹಿ ನಾಯಕಿ ಭವ್ಯಾ ಗೌಡ ಅವರು Asianet Suvarna News ಜೊತೆಗೆ ಸಾಕಷ್ಟು ವಿಷಯ ಮಾತನಾಡಿದ್ದಾರೆ…

ಕರ್ಣ ಧಾರಾವಾಹಿ ಹೀರೋಯಿನ್ ಯಾರು ಅಂತ ಸಾಕಷ್ಟು ಕುತೂಹಲ ಇತ್ತು..

ಯಾರು ಹೀರೋಯಿನ್ ಆಗ್ತಾರೆ ಅಂತ ನನಗೂ ತುಂಬ ಕುತೂಹಲ ಇತ್ತು. ಇದಕ್ಕೆ ನಾನೇ ಆದಾಗ ತುಂಬಾ ಖುಷಿಯಾಯಿತು. ಪ್ರೋಮೋ ಬಂದಾಗ & ನಾನು ಸೆಲೆಕ್ಟ್ ಆಗಿದ್ದೀನಿ ಅಂತ ಗೊತ್ತಾದಾಗ ಎಲ್ಲರೂ ಫುಲ್ ಖುಷಿಯಿಂದ ಕಂಗ್ರಾಟ್ಸ್ ಮಾಡಿದ್ರು. ಸೋ ಖುಷಿ ಆಯ್ತು.

ಈ ಪ್ರಾಜೆಕ್ಟ್ ನಿಮಗೆ ಆಫರ್ ಬಂದಾಗ ಹೇಗೆ ಅನಿಸ್ತು ನೀವು ಏನು ಯೋಚನೆ ಮಾಡಿದ್ರಿ?

ತುಂಬಾ ಖುಷಿ ಆಯ್ತು. ಈ ತರ ಒಂದು ಒಳ್ಳೆ ಪ್ರಾಜೆಕ್ಟ್ ಸಿಕ್ದಾಗ ಎಲ್ಲರೂ ಫಸ್ಟ್ ಪ್ಲಸ್ ಪಾಯಿಂಟ್ ಯೋಚನೆ ಮಾಡೋದು. ನಾನು ಈಗಲೇ ಪ್ರಾಜೆಕ್ಟ್ ಮಾಡಲಾ? ಬ್ರೇಕ್ ತಗೊಳ್ಳಲಾ ಅಂತ ನಾನು ಯೋಚನೆ ಮಾಡಿದೆ. ನನಗೆ ಸ್ವಲ್ಪ ಬ್ರೇಕ್ ತಗೋಬೇಕು ಅನ್ನೋದೇ ಇತ್ತು. ಅಮ್ಮನ ಬಳಿ ಈ ಬಗ್ಗೆ ಕೇಳಿದಾಗ ಅವರು, ನಿನಗೆ ಸಿಕ್ಕ ಅವಕಾಶ ಬಿಡಬೇಡ ಎಂದರು. ಹಾಗಾಗಿ ಈ ಅವಕಾಶ ಒಪ್ಪಿಕೊಂಡೆ.

ಕರ್ಣನ ಮೇಲೆ ನಿಧಿಗೆ ಲವ್‌ ಆಗತ್ತೆ.

ಒಂದು ಪ್ರೊಫೆಸರ್‌ನ ಎಷ್ಟು ಚಂದ ಲವ್ ಮಾಡಬಹುದು ಅನ್ನೋದನ್ನು ನಿಧಿ ಇಲ್ಲಿ ಹೇಳಿಕೊಡ್ತಾ ಹೋಗ್ತಾಳೆ. ಅದರ ಜೊತೆಗೆ ಅವಳು ನಂಬರ್ ಒನ್ ಸ್ಟೂಡೆಂಟ್. ನಿಧಿ ಓದೋದರಲ್ಲಿ ಆಗಿರಬಹುದು, ಹಿರಿಯರಿಗೆ ಗೌರವ ಕೊಡೋದಾಗಿರಬಹುದು. ಎಲ್ಲದರಲ್ಲೂ ಅವಳು ಸಿಕ್ಕಾಪಟ್ಟೆ ಮುಂದೆ. ನಿಧಿ ಬಬ್ಲಿ ಬಬ್ಲಿ ಆಗಿರ್ತಾಳೆ.

ನಿಧಿಗೆ ಪ್ರೊಫೆಸರ್‌ ಮೇಲೆ ಕ್ರಶ್‌ ಆಗತ್ತೆ, ನಿಮಗೆ ರಿಯಲ್‌ ಲೈಫ್‌ನಲ್ಲಿ ಆಗಿತ್ತಾ?

ನಂಗೆ ಸಿಕ್ಕ ಪ್ರೊಫೆಸರ್‌ ಆಗಿರೋರು ಎಲ್ಲರೂ ಮದುವೆ ಆಗಿರೋರು ಅಥವಾ ವಯಸ್ಸಾಗಿರೋರು ಸಿಕ್ಕಿದ್ರು. ಅಷ್ಟೇ ಅಲ್ಲದೆ ಎಲ್ಲರೂ ಲೇಡಿ ಪ್ರೊಫೆಸರ್ಸ್ ಇದ್ರು.

ಆಗ ಕ್ರಶ್‌ ಆಗೋಕೆ ಚಾನ್ಸ್‌ ಇರಲಿಲ್ಲ, ಆಫ್‌ಸ್ಕ್ರೀನ್‌ ಅಲ್ಲಿ ಚಾನ್ಸ್‌ ಸಿಕ್ಕಿದೆ..

ರಿಯಲ್‌ ಲೈಫ್‌ನಲ್ಲಿ ಚಾನ್ಸ್‌ ಸಿಕ್ಕಿಲ್ಲ, ಆನ್‌ಸ್ಕ್ರೀನ್‌ ಚಾನ್ಸ್‌ ಸಿಕ್ಕಿರೋದು ಖುಷಿ ಆಗಿದೆ. ನಾನಂತೂ ಫುಲ್‌ ಎಂಜಾಯ್‌ ಮಾಡ್ಕೊಂಡು ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.

ಕ್ರಶ್‌ ಆಗಿರೋ ಎಕ್ಸ್‌ಪ್ರೆಶನ್ಸ್‌ ಬೇರೆ ಇರತ್ತೆ?

ಹೌದು, ನನಗೆ ಆ ರೀತಿ ಎಕ್ಸ್‌ಪ್ರೆಶನ್‌ ಕೊಡೋಕೆ ಕಷ್ಟ ಆಯ್ತು, ನಾಚಿಕೊಳ್ಳೋದು ಕಷ್ಟ ಆಯ್ತು. ನನ್ನ ತಾಯಿ, ಅಕ್ಕ ಕೂಡ ಈ ರೀತಿ ದೃಶ್ಯಗಳಿರುವ ಕ್ಲಿಪ್ಪಿಂಗ್ಸ್‌ನನ್ನು ನನಗೆ ಕಳಿಸ್ತಿದ್ರು. ಕನ್ನಡಿ ಮುಂದೆ ನಾಚಿಕೊಳ್ಳೋದೆಲ್ಲ ರೂಢಿ ಮಾಡಿಕೊಂಡೆ.

ನಿಧಿ ಪಾತ್ರದ ತರ ಭವ್ಯ ಅವರಿಗೆ ಯಾರಾದರೂ ಮೇಲೆ ಕ್ರಶ್ ಆಗಿದ್ಯಾ?

ಕ್ರಶ್ ಒಬ್ಬರ ಮೇಲೆ ಆಗಿರೋದು. ಐದು ವರ್ಷದಿಂದ ಅದು ಹಾಗೆ ಇದೆ. ಶೀಘ್ರದಲ್ಲಿ ಯಾರದು ಅಂತ ರಿವೀಲ್‌ ಮಾಡ್ತೀನಿ.

ಕಿರಣ್‌ ರಾಜ್‌, ನಮ್ರತಾ ಗೌಡ ಸೇರಿದಂತೆ ದೊಡ್ಡ ಧಾರಾವಾಹಿ ಬಳಗ ಇದೆ..

ಈ ದೊಡ್ಡ ಧಾರಾವಾಹಿ ಬಳಗದ ಭಾಗ ಆಗಿರೋದು ನಿಜಕ್ಕೂ ಖುಷಿ ಕೊಟ್ಟಿದೆ. ನಾನು ಇಲ್ಲಿಂದ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಈ ಪಾತ್ರ ಕೂಡ ಕೂಡ ನನಗೆ ಹೊಸದು. ಜನರಿಗೆ ಯಾವ ರೀತಿ ಇಷ್ಟ ಆಗುತ್ತೆ ಅಂತ ಗೊತ್ತಾಗಲ್ಲ. ಈ ಕ್ಷಣದಲ್ಲಿ ಜನರಿಗೆ ಇಷ್ಟ ಆಗಿದ್ರೆ, ಮುಂದಿನ ಕ್ಷಣ ಅದು ಇಷ್ಟ ಆಗಿರಲ್ಲ. ಸೋ ಅದನ್ನ ಕರೆಕ್ಟ್ ಮಾಡ್ಕೊಂಡು ಏನಾದ್ರೂ ಮಾಡ್ತಾ ಹೋಗ್ಬೇಕು. ದಿನದಿಂದ ದಿನಕ್ಕೆ ಈ ಪಾತ್ರ ಚಾಲೆಂಜಿಂಗ್‌ ಆಗ್ತಿದೆ.

ಕಾಸ್ಟ್ಯೂಮ್ ತುಂಬಾ ಡಿಫರೆಂಟ್ ಆಗಿದೆ

ವಾಹಿನಿಯವರೇ ಈ ಥರ ಡ್ರೆಸ್‌ ಹಾಕಬೇಕು, ಇದೇ ಥರ ಕಲರ್‌ ಹಾಕಬೇಕು ಅಂತ ಹೇಳಿ ಕಾಸ್ಟ್ಯೂಮ್‌ ರೆಡಿ ಮಾಡಿಸಿದ್ದಾರೆ. ಇದಕ್ಕೆಲ್ಲ ತುಂಬ ಟೈಮ್‌ ಕೊಟ್ಟಿದ್ದಾರೆ.

ಕ್ರಶ್‌ ಇರೋ ನಿಧಿ ಪಾತ್ರವಿದು. ಎಪಿಸೋಡ್‌ ಶೂಟಿಂಗ್‌ ಮುಗಿದ್ಮೇಲೂ ಹ್ಯಾಂಗ್‌ಓವರ್‌ ಇರತ್ತಾ?

ಈ ಪಾತ್ರಕ್ಕೆ ಅತಿಯಾಗಿ ಎಕ್ಸ್‌ಪ್ರೆಶನ್‌ ಕೊಡಬೇಕು, ಒಮ್ಮೊಮ್ಮೆ ಶೂಟಿಂಗ್‌ ಮುಗಿದ್ಮೇಲೂ ಹ್ಯಾಂಗ್‌ಓವರ್ ಇರತ್ತೆ. ಸ್ವಲ್ಪ ಡಿಸೆಂಟ್‌ ಆಗಿ ಮಾತಾಡೋಕೆ ಶುರು ಮಾಡಿದೀನಿ. ಒಂದು ಐಸ್‌ಕ್ರೀಮ್‌ ಸಿಕ್ಕಿದ್ರೂ ನಿಧಿ, ಖುಷಿಯಿಂದ ಕುಣಿಯುತ್ತಾಳೆ. ಆದರೆ ಭವ್ಯಾ ಆಗಿ ನಾನು ಆ ಥರ ಇಲ್ಲ.

ನಿಧಿ ಬಗ್ಗೆ ವೀಕ್ಷಕರು ಏನು ಹೇಳ್ತಾರೆ.

ಅಭಿಮಾನಿಗಳು ಕೊಡೋ ಪ್ರೀತಿಯನ್ನು ನಾವು ಎಷ್ಟೇ ಜನ್ಮ ಎತ್ತಿದ್ರೂ ತೀರಿಸೋದಕ್ಕೆ ಆಗೋದಿಲ್ಲ, ಅಷ್ಟು ಪ್ರೀತಿ ಕೊಡ್ತಾರೆ. ನೀವು ಯಾವಾಗ ಆನ್ ಸ್ಕ್ರೀನ್ ಬರ್ತೀರಾ? ಅಂತ ವೀಕ್ಷಕರು ಕೇಳುತ್ತಲೇ ಇದ್ದರು. ಅವರೇ ಮಾನಿಫೆಸ್ಟ್ ಮಾಡಿ, ಈ ಸೀರಿಯಲ್ ಮಾಡಬೇಕು ಅಂತ ಹೇಳಿದರು.

ಧಾರಾವಾಹಿಯಿರಲೀ, ಸಿನಿಮಾವಿರಲೀ, ಶೋ ಮಾಡಿದರೂ ಕೂಡ ಕಲಾವಿದರನ್ನು ಜೋಡಿ ಮಾಡ್ತಾರೆ.

ನನಗೆ ಸ್ಟಾರ್ಟಿಂಗ್ ಅಲ್ಲಿ ಬಂದಾಗ ಏನಿದು ಅಂತ ಅನಿಸ್ತು. ಆದರೆ ಈಗ ಯಾವುದೇ ಒಂದು ಹುಡುಗನ ಜೊತೆ ಜೋಡಿ ಮಾಡಿದಾಗ ಆ ಧಾರಾವಾಹಿ ಮುಗಿಯುವವರೆಗೆ ಮಾತ್ರ ಇರುತ್ತೆ ಅಂತ ಗೊತ್ತು, ಆಮೇಲೆ ಹೊಸ ಪ್ರಾಜೆಕ್ಟ್‌ ಶುರು ಆದಾಗ ಇನ್ನೊಂದು ಜೋಡಿ ಆಗುತ್ತದೆ. ಎಲ್ಲರ ಬಳಿಯೂ ಹೋಗಿ ಯಾಕೆ ಹೀಗೆ ಅಂತ ನಾನು ಪ್ರಶ್ನೆ ಮಾಡೋಕೆ ಆಗೋದಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!