'ಜೊತೆ ಜೊತೆಯಲಿ' ರಾಜನಂದಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಹಾಟ್‌ ನಟಿ?

By Suvarna News  |  First Published Mar 2, 2021, 1:02 PM IST

ಅರ್ಯವರ್ಧನ್ ಬಾಳಲ್ಲಿ ದೊಡ್ಡ ತಿರುವು ತಂದುಕೊಟ್ಟ ರಾಜನಂದಿನಿ ಪಾತ್ರಕ್ಕೆ ಬಾಲಿವುಡ್‌ ನಟಿ ಆಯ್ಕೆ ಆಗಿದ್ದಾರಾ?. ಈ ವಿಚಾರದ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ. 
 


ಅನು ಸಿರಿಮನೆ- ಸಂಪತ್, ಅನು- ಸೂರ್ಯ ಮದುವೆ ಮುರಿದು ಬಿದ್ದಿದ್ದೇ ಇದೀಗ ಅನು- ಆರ್ಯವರ್ಧನ್ ಮದುವೆನೂ ಮುರಿದು ಬೀಳುತ್ತಾ ಎಂಬ ಆತಂಕದಲ್ಲಿ ವೀಕ್ಷಕರಿದ್ದಾರೆ. ಅನು ಮನಸ್ಥತಿ ಅರ್ಥ ಮಾಡಿಕೊಂಡು, ಏನೂ ಮಾಡಲಾಗದೇ ಕೈ ಕಟ್ಟಿ ಕುಳಿತಿರುವ ಪುಷ್ಪಾರನ್ನು ತಾಯಿ ಎಲ್ಲವ್ವನೇ ಕಾಪಾಡಬೇಕು!

ಅನು-ಸೂರ್ಯ ಮದುವೆ ಮುರಿದುಹೋಗಿದೆ, ಸುಬ್ಬು ಒಪ್ಪಿಗೆ ಪಡೆದು ಆರ್ಯ ಮದುವೆ ಆಗ್ತಾರಾ? 

Tap to resize

Latest Videos

ಮನೆ ಪರಿಸ್ಥಿತಿ ಅರ್ಥ ಮಾಡಿಕೊಂಡು, ಮದುವೆ ವಿಚಾರವನ್ನು ಮಾತನಾಡಬೇಕು ಎಂದು ಸೂಕ್ತ ಸಂದರ್ಭಕ್ಕೆ ಕಾಯುತ್ತಿರುವ ಆರ್ಯವರ್ಧನ್‌ ಅವರಿಗೆ ತಮ್ಮ ಮೊದಲ ಪತ್ನಿ ರಾಜನಂದಿನಿ ಬಗ್ಗೆ ಹೇಳಿಕೊಳ್ಳುವ ಸಮಯ ಹತ್ತಿರ ಬಂದಿದೆ. ಇಷ್ಟು ದಿನಗಳು ರಾಜನಂದಿನಿ ಒಂದು ಬ್ರ್ಯಾಂಡ್‌ ಎಂದು ನಂಬಿದ ಜನರಿಗೆ ಅದೊಂದು ವ್ಯಕ್ತಿಯ ಹೆಸರು ಎಂದು ತಿಳಿದ ತಕ್ಷಣ ಕುತೂಹಲ ಹೆಚ್ಚಾಗಿತ್ತು. ರಾಜನಂದಿನಿ ಧಾರಾವಾಹಿಯ ಪ್ರಮುಖ ಹಾಗೂ ಪ್ರಭಾವಿ ಪಾತ್ರವಾಗಿರುವುದರಿಂದ ಯಾರು ಅಭಿನಯಿಸಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ಸ್‌ನಲ್ಲಿ ಕೇಳುತ್ತಲೇ ಇದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಕೆಲವೊಬ್ಬರ ಹೆಸರು ಕೂಡ ಹರಿದಾಡುತ್ತಿವೆ.

ರಾಜನಂದಿನಿ ಪಾತ್ರಕ್ಕೆ ನಟಿ ಎರಿಕಾ ಫರ್ನಾಂಡೀಸ್ ಆಯ್ಕೆ ಆಗಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ. ಪುನೀತ್ ರಾಜ್‌ಕುಮಾರ್ ಜೊತೆ 'ನಿನ್ನಿಂದಲೇ' ಹಾಗೂ ಗಣೇಶ್ ಜೊತೆ 'ಬುಗುರಿ' ಸಿನಿಮಾದಲ್ಲಿ ಅಭಿನಯಿಸಿರುವ ಎರಿಕಾ ಇಷ್ಟು ದಿನಗಳ ಕಾಲ ಹಿಂದಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರು. ಆದರೆ ಎರಿಕಾ ಎಂಟ್ರಿ ಕೊಡುವ ಸುದ್ದಿ ಬಗ್ಗೆ ನಿರ್ದೇಶಕ ಆರೂರು ಸ್ಪಷ್ಟನೆ ನೀಡಿದ್ದಾರೆ.

ಈ ಟಾಪ್ 5 ಸೀರಿಯಲ್‌‌ನಲ್ಲಿ ನಿಮ್ಮ ಫೇವರೆಟ್ ಧಾರವಾಹಿ ಇದೆಯಾ? 

ರಾಜನಂದಿನಿ ಕತೆಗೆ ದೊಡ್ಡ ತಿರುವು ನೀಡುವ ಪಾತ್ರವಾಗಿದೆ. ಒಂದು ಅಥವಾ ಎರಡು ತಿಂಗಳ ನಂತರದಲ್ಲಿ ರಾಜನಂದಿನಿ ತೆರೆ ಮೇಲೆ ನೋಡಬಹುದು. ಆದರೆ ಈ ಧಾರಾವಾಹಿಯ ಪ್ರಭಾವಿ ಪಾತ್ರಕ್ಕೆ ಕಲಾವಿದೆಯನ್ನು ಇನ್ನೂ ಫೈನಲ್ ಮಾಡಿಲ್ಲ.  ಮೂರು ನಟಿಯರನ್ನು ಶಾರ್ಟ್‌ಲಿಸ್ಟ್‌ ಮಾಡಿದ್ದೀವಿ. ಆಯ್ಕೆ ಆದ ನಂತರ ತಿಳಿಸುತ್ತೇವೆ, ಎಂದಿರುವ ನಿರ್ದೇಶಕರು ಜನರಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಈ ಪಾತ್ರದ ಬಗ್ಗೆ ಹಾಗೂ ಕಲಾವಿದೆ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಾಗಿರುವುದು ಸುಳ್ಳಲ್ಲ.

click me!