
ಶಕ್ತಿ ಧಾರವಾಹಿಯಲ್ಲಿ ಮಂಗಳಮುಖಿ ಪಾತ್ರ ಮಾಡಿ ತೃತೀಯ ಲಿಂಗಿ ಸಮಾಜದ ಚಿತ್ರಣವನ್ನು ತೆರೆಯ ಮೇಲೆ ತೆರೆದಿಟ್ಟ ನಟಿ ಗುಲಾಬೋ ಪಾತ್ರದ ಮೂಲಕ ಫೇಮಸ್ ಆದರು.
ಇದೀಗ ರುಬೀನಾ ಬಿಗ್‌ಬಾಸ್‌ಗೆ ಹೋಗಿ ಸೀಸನ್ 14ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟಿ ಗೆದ್ದ ಖುಷಿಯಲ್ಲಿರುವಾಗಲೇ ಮಂಗಳಮುಖಿಯರು ಬಂದು ಆಶಿರ್ವಾದ ಮಾಡಿದ್ದಾರೆ.
ಬಿಗ್ ಬಾಸ್ 14 ಟ್ರೋಫಿ ಹಿಡಿದ ರುಬೀನಾ ದಿಲೈಕ್; ಸಲ್ಮಾನ್‌ನ ಎದುರಾಕಿ ಕೊಂಡಿದ್ದಕ್ಕೆ ಸಿಕ್ಕ ಜಯ!
ಬಿಗ್ ಬಾಸ್ 14 ಗೆದ್ದ ನಂತರ ರುಬಿನಾ ಪಾರ್ಟಿ ಮೋಡ್‌ನಲ್ಲಿದ್ದಾರೆ. ಮುಂಬೈನ ಕಿನ್ನರ್ ಸಮಾಜದ ಭಾಗವಾಗಿರುವ ಅನ್ನೂಜಿ ಗುರುಮಾ ರುಬೀನಾ ಮತ್ತು ಅವರ ಪತಿ ಅಭಿನವ್ ಶುಕ್ಲಾ ಅವರನ್ನು ಆಶೀರ್ವದಿಸಲು ಬಂದರು. ಮಹಿಳೆ ರುಬಿನಾ ಡಿಲಾಯಕ್ ಅವರ ಮನೆಗೆ ಇತರ ಮಂಗಳ ಮುಖಿಯರೊಂದಿಗೆ ಭೇಟಿಕೊಟ್ಟಿದ್ದಾರೆ.
ಶಕ್ತಿ-ಅಸ್ಟಿತ್ವಾ ಕೆ ಎಹ್ಸಾಸ್ ಕಿ ಧಾರವಾಹಿಯ ಸಂದರ್ಭ ಈ ಮಂಗಳ ಮುಖಿ ರುಬಿನಾ ದಿಲಾಯಕ್ ಅವರೊಂದಿಗೆ ಸಕ್ರಿಯ ಸಂಬಂಧ ಹೊಂದಿದ್ದರು. ಸೀರಿಯಲ್ನಲ್ಲಿ ರುಬಿನಾ ಸೌಮ್ಯಾ ಎಂಬ ತೃತೀಯಿಂಗಿಯಾಗಿ ಪಂಜಾಬಿ ಪುರುಷ ಹರ್ಮನ್ (ವಿವಿಯನ್ ತ್ಸೆನಾ) ಯನ್ನು ಪ್ರೀತಿಸುತ್ತಾಳೆ.
ಅಭಿನವ್ ಪ್ಯಾಂಟ್ ಎಳೆದ ರಾಖಿ: ಪತ್ನಿ ರುಬೀನಾಳಿಂದ ಖಡಕ್ ವಾರ್ನಿಂಗ್
ರುಬಿನಾ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅತಿಥಿಗಳಿಗೆ ಚಹಾ ಮತ್ತು ತಿಂಡಿಗಳನ್ನು ಬಡಿಸುವ ರುಬೀನಾಳನ್ನು ನಾವು ವಿಡಿಯೋದಲ್ಲಿ ನೋಡಬಹುದು. ನಟಿ ಮಂಗಳಮುಖಿಯರಿಗೆ ಸೀರೆ ಉಡುಗೊರೆಯಾಗಿ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.