ವಾರ ವಾರ ಹೆಚ್ಚಾಗುತ್ತಿದೆ 'ಜೊತೆ ಜೊತೆಯಲಿ' ಜನಪ್ರಿಯತೆ!

By Suvarna NewsFirst Published Dec 13, 2019, 11:25 AM IST
Highlights

ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಹಿಟ್‌ ಧಾರಾವಾಹಿಗಳ ನಡುವ ಪೈಪೋಟಿ ಶುರುವಾಗಿದೆ. ಕಲರ್ಸ್‌ ಕನ್ನಡ ಮಂಗಳ ಗೌರಿ ಮದುವೆ ಹಾಗೂ ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಗಳು ಟಿಆರ್‌ಪಿ ರೇಸ್‌ನಲ್ಲಿವೆ.

'ಮಂಗಳ ಗೌರಿ' ಜೀವನದ ಕೊನೆ ಕ್ಷಣಗಳನ್ನು ಎದುರಿಸುವುದನ್ನು ನೋಡಲಾರದೇ  ಆಕೆಯನ್ನು ಕಾಪಾಡುವ ರಾಜೀವ 49ನೇ ವಾರ ಟಿಆರ್‌ಪಿ ಇಂಪ್ರೆಷನ್‌ನಲ್ಲಿ ಮೊದಲ ಸ್ಥಾನ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರೂ,  ಟಿಆರ್‌ಪಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.   

ಮೊದಲ ಸ್ಥಾನದಲ್ಲಿದ್ದ 'ಜೊತೆ ಜೊತೆಯಲಿ' TRP ಕುಸಿದಿದ್ದು ಹೌದಾ?

ಕಿರುತೆರೆಯ ಹಿಟ್ ಧಾರಾವಾಹಿ ಎಂದೇ ಖ್ಯಾತವಾಗಿರುವ 'ಜೊತೆ ಜೊತೆಯಲಿ'  ದಿನೇ ದಿನೇ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೆ,  BARC ಇಂಪ್ರೆಷನ್‌ ವರದಿ ಪ್ರಕಾರ 49ನೇ ವಾರ ಅಂದ್ರೆ ನವೆಂಬರ್ 30,2019 ರಿಂದ ಡಿಸೆಂಬರ್ 6, 2019ರಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಟಿಆರ್‌ಪಿಯಲ್ಲಿ 15.6 ಪಾಯಿಂಟ್ಸ್ ಪಡೆಯೋ ಮೂಲಕ ಮೊದಲ ಸ್ಥಾನವನ್ನು ಕಾಯ್ದಿರಿಸಿಕೊಳ್ಳುವಲ್ಲಿ ಈ ವಾರವೂ ಯಶಸ್ವಿಯಾಗಿದೆ. ಕಲರ್ಸ್‌ ಕನ್ನಡ ವಾಹಿನಿಯ 'ಮಂಗಳ ಗೌರಿ' ಮದುವೆ ಎರಡನೇ ಸ್ಥಾನದಲ್ಲಿದ್ದು, ಜೀ ಕನ್ನಡದ 'ಗಟ್ಟಿಮೇಳ' ಧಾರಾವಾಹಿ 13.4 ಪಡೆದು ಮೂರನೇ ಸ್ಥಾನ ಪಡೆದುಕೊಂಡಿದೆ. 

ಇಂಪ್ರೆಷನ್‌ ಅಂದ್ರೆ 30 ನಿಮಿಷಗಳ ಅವಧಿಯಲ್ಲಿ ಒಬ್ಬ ವೀಕ್ಷಕನನ್ನು ಹಿಡಿದಿಟ್ಟಿಕೊಳ್ಳುವುದು. ಇದರಲ್ಲಿ ಜೊತೆ ಜೊತೆಯಲಿ 49ನೇ ವಾರದ ವರದಿಯಲ್ಲಿ ವಿಫಲವಾದಂತೆ ಕಾಣಿಸುತ್ತದೆ. TRP ಪ್ರಕಾರ  'ಜೊತೆ ಜೊತೆಯಲಿ' ಧಾರಾವಾಹಿ 15.6 AVG TVR ಪಡೆದುಕೊಂಡಿದೆ ಹಾಗೂ 'ಮಂಗಳ ಗೌರಿ ಮದುವೆ' ಧಾರಾವಾಹಿ 11.6 AVG TVR ಪಡೆದುಕೊಂಡಿದೆ. 

(Source: https://www.barcindia.co.in/statistic.aspx)

click me!