ಡಿಸೆಂಬರ್‌ನಲ್ಲಿ ಕೊಡವರು ಅದ್ಧೂರಿಯಾಗಿ ಆಚರಿಸುವ 'ಪುತ್ತರಿ' ಹಬ್ಬದಲ್ಲಿ ನಟಿ ಶ್ವೇತಾ ಚೆಂಗಪ್ಪ ಮಗನೊಂದಿಗೆ ಮೊದಲ ಬಾರಿ ಹೆಜ್ಜೆ ಹಾಕಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ...
'ಮಜಾ ಟಾಕೀಸ್' ಮೂಲಕ ಮನೆ ಮಾತಾದವರು ಶ್ವೇತಾ ಚೆಂಗಪ್ಪ. ಸೆಪ್ಟೆಂಬರ್ 9ರಂದು ಮುದ್ದಾಗ ಗಂಡು ಮಗುವಿಗೆ ಜನ್ಮ ನೀಡಿದ್ದರು. ವಿಶೇಷ ದಿನದಂದು ಮಗನ ಫೋಟೋ ರಿವೀಲ್ ಮಾಡಬೇಕೆಂದು ಇದುವರೆಗೂ ಎಲ್ಲಿಯೂ ಮಗನ ಪೋಟೋ ಅಥವಾ ವಿಡಿಯೋ ರಿವೀಲ್ ಮಾಡಿರಲಿಲ್ಲ.
ಕೊಡವ ಜನಾಂಗದವರ ಸಾಂಪ್ರದಾಯಿಕ ಹಬ್ಬವಾದ 'ಪುತ್ತರಿ' (ಹುತ್ತರಿ) ಹಬ್ಬದಂದು ಮಗನೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಇದೀಗ ಶೇರ್ ಮಾಡಿಕೊಂಡಿದ್ದಾರೆ. 'ಕೊಡವ ಹಾಗೂ ಕೊಡವತಿಯರಿಗೆ ಪುತ್ತರಿ ಹಬ್ಬದ ಶುಭಾಶಯಗಳು. ಇಗ್ಗುತ್ತಪ್ಪ ಹಾಗೂ ಕಾವೇರಮ್ಮಾ ತಾಯಿ ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ. ಇದು ನನ್ನ ಮಗನ ಮೊದಲ ಪುತ್ತರಿ ಹಬ್ಬ. ಅವನಿಗೆ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಇರಲಿ. ಅಷ್ಟೇ ಅಲ್ಲದೆ ನನ್ನೊಂದಿಗೆ ಇದು ಅವನ ಮೊದಲ ಕುಣಿತ,' ಎಂದು ಬರೆದುಕೊಂಡಿದ್ದಾರೆ.
ಪುತ್ತರಿ ಎಂದರೆ ಅಕ್ಕಿ ಎಂದರ್ಥ. ಈ ದಿನದಂದು ಭತ್ತ ಕಟಾವಿಗೆ ಅಧಿಕೃತ ಚಾಲನೆ ನೀಡುವ ಮೂಲಕ ಕೃಷಿಕರು ಸಂಭ್ರಮದಿಂದ ಆಚರಿಸುವ ಸಾಂಪ್ರಾದಾಯಿಕ ಹಬ್ಬ.