
ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಎರಡು ವಾರಗಳ ಕಾಲ ಮದುವೆ ಸಂಚಿಕೆ ಪ್ರಸಾರವಾಗುತ್ತಿರುವುದು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಆರ್ಯವರ್ಧನ್ - ಅನು ಸಿರಿಮನೆ ಈಗ ಗುರು ಹಿರಿಯರ ಸಮ್ಮುಖದಲ್ಲಿ ಹಾಗೂ ಪ್ರೇಕ್ಷಕರ ಎದುರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸಂಭ್ರಮದ ಪ್ರತಿ ಎಪಿಸೋಡ್ ಕೂಡ ಅತಿ ಹೆಚ್ಚಿನ ಟಿಆರ್‌ಪಿ ಗಳಿಸಿದೆ ಎನ್ನಲಾಗಿದೆ.
'ಮದುವೆ ಎಪಿಸೋಡ್ ಚಿತ್ರೀಕರಣ ಮಾಡುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿತ್ತು. ಸಖತ್ ಗ್ರ್ಯಾಂಡ್ ಆಗಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಕಥೆಗೆ ತಕ್ಕಂತೆ ಸಣ್ಣ ಪುಟ್ಟ ಭಾವನೆಗಳನ್ನು ಹೈಲೈಟ್ ಮಾಡಲಾಗಿದೆ. ಆರಂಭದಲ್ಲಿ ನಾವು ಮದುವೆಯನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಆದರೆ ಲಾಕ್ ಡೌನ್‌ನಿಂದ, ಬಜೆಟ್ ತೊಂದರೆಯಿಂದ ಇಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಧಾರಾವಾಹಿಯಲ್ಲಿ ಶೀಘ್ರವೇ ರಾಜನಂದಿನಿ ಪಾತ್ರ ಎಂಟ್ರಿ ಆಗಲಿದೆ. ಯಾರು ಪಾತ್ರ ನಿರ್ವಹಿಸುತ್ತಾರೆ ಎಂದು ನಾವೇ ಆದಷ್ಟು ಬೇಗ ತಿಳಿಸುತ್ತೇವೆ,' ಎಂದು ನಿರ್ದೇಶಕ ಆರೂರು ಜಗದೀಶ್ ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಅರಿಶಿಣ ಶಾಸ್ತ್ರ, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮ ಮಾತ್ರವಲ್ಲದೇ ಬಳೆ ತೋಡಿಸುವ ಶಾಸ್ತ್ರ ಕೂಡ ಅದ್ಧೂರಿಯಾಗಿ ತೋರಿಸಿದ್ದಾರೆ. ಹೆಬ್ಬಾಳ ರಸ್ತೆ ಬಳಿ ಇರುವ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಎಪಿಸೋಡ್ ಚಿತ್ರೀಕರಣ ನಡೆಯುತ್ತಿದೆ. ಅನು ಸಿರಿಮನೆಯಲ್ಲಿ ಪ್ರತಿ ಶುಭ ಕಾರ್ಯಕ್ರಮಕ್ಕೂ ಧರಿಸಿರುವ ಡಿಸೈನರ್ ಉಡುಪು ಹಾಗೂ ಕೇಶ ವಿನ್ಯಾಸಕ್ಕೆ ಗೃಹಿಣಿಯರು ಫಿದಾ ಆಗಿದ್ದಾರೆ. ಅದರಲ್ಲೂ ತಂದೆ ಮಗಳ ಸಂಬಂಧದ ಬಗ್ಗೆ ಪ್ರಸಾರ ಮಾಡಲಾಗಿದ್ದ ಎಪಿಸೋಡ್ ಸೂಪರ್ ಹಿಟ್ ಆಗಿದೆ ಎನ್ನಬಹುದು. ಎಲ್ಲಿ ನೋಡಿದರೂ ಅನು ಮತ್ತು ಸುಬ್ಬು ಸಿರಿಮನೆ ವಿಡಿಯೋ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.