
ಬಿಗ್ ಬಾಸ್ ಸೀಸನ್ 8ರ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ನಟಿ ಧನುಶ್ರೀ ಇದೀಗ ಹೊಸ ಕಾರು ಖರೀದಿಸಿದ್ದಾರೆ. ತಮ್ಮ ಸ್ವಂತ ದುಡಿಮೆಯಲ್ಲಿ ಖರೀದಿಸಿರುವ ಕಾರೆಂದು ಫೋಟೋ ಹಂಚಿ ಕೊಂಡು ಬರೆದು ಕೊಂಡಿದ್ದಾರೆ.
ಕಪ್ಪು ಬಣ್ಣದ ಟಾಪ್ಎಂಡ್ ಸ್ವಿಫ್ಟ್ ಕಾರು ಖರೀದಿಸಿದ್ದಾರೆ. ಶೋ ರೂಮ್‌ನಲ್ಲಿ ಕೀ ಪಡೆದುಕೊಳ್ಳುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ಹಾರ್ಡ್‌ವರ್ಕ್ ಪೇಸ್ ಅಪ್. ನನ್ನ ಮೊದಲ ಹೆಜ್ಜೆ. ಯಾರು ಇದೆಲ್ಲಾ ಸುಲಭದ ಕೆಲಸ ಎಂದು ಹೇಳುತ್ತಾರೋ ಅವರಿಗೆ, ಇದು ಸುಲಭವಲ್ಲ. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಅಡಚಣೆ ಇರುತ್ತದೆ. ಹಾಗೂ ಕಷ್ಟ ಖಂಡಿತ ಇರುತ್ತದೆ. ಆದರೆ ಅದು ಎಲ್ಲರಿಗೂ ಗೊತ್ತಾಗುವುದಿಲ್ಲ. ನಾನು ಅನುಭವಿಸಿರುವ ಕಷ್ಟಗಳು ಹಾಗೂ ಶ್ರಮಕ್ಕೆ ನನಗೆ ನಾನು ಥ್ಯಾಂಕ್ಸ್ ಹೇಳಬೇಕು. ನನ್ನ ಜರ್ನಿಯಲ್ಲಿ ಜೊತೆಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಧನುಶ್ರೀ ಬರೆದುಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲೂ ಕಾಣಿಸಿಕೊಳ್ಳವ ಮುನ್ನ ಧನುಶ್ರೀ ಟಿಕ್‌ಟಾಕ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಅನೇಕ ಬ್ರ್ಯಾಂಡ್‌ಗಳ ಜೊತೆ ಕೋಲಾಬೋರೇಟ್ ಮಾಡಿಕೊಂಡು ಫೋಟೋಶೂಟ್ ಮಾಡಿದ್ದಾರೆ, ಜನಪ್ರಿಯ ಬ್ರ್ಯಾಂಡ್‌ಗಳ ಡಿಜಿಟಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಕೆಲವೊಂದು ಶಾರ್ಟ್ ವಿಡಿಯೋಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ 3 ಲಕ್ಷ 60 ಸಾವಿರ ಫಾಲೋವರ್ಸ್ ಇವರಿಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.