ಹುಟ್ಟು ಹಬ್ಬ: ದುಬಾರಿ ಕಾರು ಖರೀದಿಸಿದ ಮಾನ್ಸಿ ಜೋಶಿ!

Suvarna News   | Asianet News
Published : Sep 04, 2021, 12:53 PM IST
ಹುಟ್ಟು ಹಬ್ಬ: ದುಬಾರಿ ಕಾರು ಖರೀದಿಸಿದ ಮಾನ್ಸಿ ಜೋಶಿ!

ಸಾರಾಂಶ

ಕಿರುತೆರೆ ನಟಿ ಮಾನ್ಸಿ ಹುಟ್ಟು ಹಬ್ಬಕ್ಕೆ ದುಬಾರಿ ಕಿಯಾ ಟಾಪ್‌ ಎಂಡ್ ಕಾರು ಖರೀದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿ ಕೊಂಡು, ಸಂತಸ ವ್ಯಕ್ತ ಪಡಿಸಿದ್ದಾರೆ. 

'ರಾಧಾ ರಮಣ' ಮತ್ತು 'ಪಾರು' ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದ ನಟಿ ಮಾನ್ಸಿ ಜೋಶಿ ತಮ್ಮ ಹುಟ್ಟು ಹಬ್ಬಕ್ಕೆ ಕಪ್ಪು ಬಣ್ಣದ ಕಿಯಾ ಟಾಪ್‌ ಎಂಡ್ ಕಾರು ಖರೀದಿಸಿದ್ದಾರೆ. ತಾಯಿ ಮತ್ತು ಸಹೋದರಿ ಜೊತೆ ಕಾರಿನ ಮುಂದೆ ನಿಂತು ಪೋಸ್‌ ಕೊಟ್ಟಿದ್ದಾರೆ. ಈ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

'ಕೊನೆಗೂ, ಓಂ ಸಾಯಿ ರಾಮ್. ನನ್ನ ಹುಟ್ಟು ಹಬ್ಬಕ್ಕೆಂದು ನಾನು ಇದನ್ನು ಗಿಫ್ಟ್ ಮಾಡಿಕೊಂಡೆ. ನನ್ನ ಬೇಬಿ ಕಿಯಾ ಕಾರನ್ನು ಮನೆಗೆ ಬರ ಮಾಡಿಕೊಳ್ಳುತ್ತಿರುವೆ. ಇಷ್ಟು ವರ್ಷದ ಶ್ರಮ ಮತ್ತು ಡೆಡಿಕೇಷನ್‌ನಿಂದ ಇದು ಸಾಧ್ಯವಾಗಿದೆ. ತಂದೆ ಮತ್ತು ತಾಯಿ ಆಶೀರ್ವಾದ,' ಎಂದು ಮಾನ್ಸಿ ಬರೆದುಕೊಂಡಿದ್ದಾರೆ. 

'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರಕ್ಕೆ ಅಂತ್ಯ; ಭಾವುಕ ಪತ್ರ ಬರೆದ ಮಾನ್ಸಿ

ಮಾನ್ಸಿ ಪೋಸ್ಟ್‌ಗೆ ನಟ ದಿಲೀಪ್, ಅದ್ವಿತಿ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ್, ಪ್ರಥಮಾ ಪ್ರಸಾದ್ ಸೇರಿ ಕೆಲವು ಅಭಿಮಾನಿಗಳು ಶುಭ ಕೋರಿದ್ದಾರೆ. ಮಾನ್ಸಿ ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಕೆಲವು ಖಾಸಗಿ ಫೋಟೋಶೂಟ್‌ಗಳಲ್ಲಿಯೂ ಭಾಗಿಯಾಗುತ್ತಿದ್ದರು. 

ಕೆಲವು ದಿನಗಳ ಹಿಂದೆ ಪಾರು ಧಾರಾವಾಹಿಯಿಂದ ಹೊರ ಬಂದ ಮಾನ್ಸಿ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದರು. ಅಲ್ಲದೇ ಕೆಲವು ಫ್ಯಾನ್ಸ್ ಮಾನ್ಸಿ ನಂಬರ್ ಪಡೆಯಲು ಪ್ರಯತ್ನಿಸಿದ್ದಾರೆ. ಮಾನ್ಸಿ ನಿರಾಕರಿಸಿದ ಕಾರಣ ಮತ್ತೆ ಇನ್ನೆರಡು ಅಕೌಂಟ್ ತೆರೆದು ನಂಬರ್ ಕೇಳಿದ್ದಾನೆ. ಆತನ ಮಾತಿಗೆ ಬಗ್ಗದ ಕಾರಣ ಮಾನ್ಸಿ ವಿರುದ್ಧ ಕೆಟ್ಟ ಟ್ರೋಲ್‌ಗಳನ್ನು ಶೇರ್ ಮಾಡಲು ಪ್ರಾರಂಭಿಸಿದ್ದ. ಇದನ್ನು ಗಮನಿಸಿ ಮಾನ್ಸಿ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!