
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರಾವಾಹಿ'ಜೊತೆ ಜೊತೆಯಲಿ' ನಿರ್ದೇಶಕ ಆರೂರ್ ಜಗದೀಶ್ ಅವರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು ಮಣಿಪಾಲದ ಕಸ್ತೂರಭ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಈ ಬಗ್ಗೆ ಅವರ ಪತ್ನಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಜೊತೆ ಜೊತೆಯಲಿ 'ನೂರು ಜನ್ಮ'ಕ್ಕೂ ಮಾಡಿದ 1 ಕೋಟಿ ರೆಕಾರ್ಡ್!
ಪತ್ನಿಯ ಮಾತು:
ನಿರ್ದೇಶಕ ಆರೂರ್ ಜಗದೀಶ್ ಕೆಲ ದಿನಗಳಿಂದ ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಆತ್ಮೀಯರಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ ಅವರ ಪರವಾಗಿ ಪತ್ನಿ ಸ್ಮಿತಾ ಜಗದೀಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಧನ್ಯ ವಾದಗಳನ್ನು ತಿಳಿಸಿದ್ದಾರೆ.
ಧಾರಾವಾಹಿಗೆ ಎನರ್ಜಿ ಬೂಸ್ಟರ್ ಆಗಿದ್ದ ಜಗದೀಶ್ ಅವರ ಬಗ್ಗೆ ಅಭಿಮಾನಿಗಳು ಮತ್ತು ಕೆಲ ಸಿನಿ ಆಪ್ತರು ಕಾಮೆಂಟ್ ಮಾಡಿದ್ದಾರೆ. ಆರೂರು ಅವರು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಧಾರಾವಾಹಿ:
ಲಾಕ್‌ಡೌನ್ ಇದ್ದ ಕಾರಣ ಸೀರಿಯಲ್ ಚಿತ್ರೀಕರಣ ಅರ್ಧದಲ್ಲೇ ನಿಂತು ಹೋಗಿತ್ತು. ಸಡಿಲಿಕೆ ನಂತರ ಬ್ಯಾಕ್ ಟು ಬ್ಯಾಕ್ ಚಿತ್ರೀಕರಣ ಮಾಡಲಾಗಿತ್ತು. ಟಿವಿ ಯಲ್ಲಿ ಆರ್ಯವರ್ಧನ್ ಮತ್ತು ಅನು ಸಿರಿಮನೆಯನ್ನು ನೋಡಬೇಕೆಂದು ಬಯಸುತ್ತಿದ್ದ ಪ್ರೇಕ್ಷಕರಿಗೆ ಹಬ್ಬವೋ ಹಬ್ಬ. ಅನು-ಆರ್ಯ ಒಂದಾಗುವ ಸಮಯ ಹತ್ತಿರ ಬಂದಿದೆ, ಅರ್ಯನಿಗಿಂತಲೂ ಅವರ ತಾಯಿ ಜೊತೆ ಅನು ಉತ್ತಮ ಸಂಬಂಧ ಬೆಳೆಸಿಕೊಳ್ಳುತ್ತಿದ್ದಾರೆ. ಇತ್ತ ಮೀರಾ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಆರ್ಯ ಕಂಪನಿ ಕೆಲಸವೇ ಮೊದಲು ಎಂದು ಬೋಲ್ಡ್ ಆಗಿ ಜೀವನ ಎದುರಿಸುತ್ತಿದ್ದಾರೆ. ರಾಜನಂದಿನಿ ಫ್ಯಾಬರೀಕ್ಸ್ ಮುಖ್ಯಸ್ಥೆಯಾಗಿ ನೇಮಕವಾಗಿರುವ ಅನು ಸಿರಿಮನೆ ಬೋರ್ಡ್ ಮೀಟಿಂಗ್‌ನಲ್ಲಿ ಏನು ಮಾತನಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.