
ಕಿರುತೆಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-7ರ ಖ್ಯಾತ ಸ್ಪರ್ಧಿ ಚೈತ್ರಾ ಕೊಟ್ಟೂರು ಬಿಗ್ ಬಾಸ್ ಮನೆಯಲ್ಲಿದ್ದಾಗ, ಇದುವರೆಗೂ ಲವ್ ಆಗಿಲ್ಲ, ನಾನು ಸಿಂಗಲ್ ಎಂದು ಹೇಳುತ್ತಿದ್ದರು. ಈಗ ನೋಡಿದರೆ ಇವರ ಜೀವನದಲ್ಲಿ ಹಲವು ಬದಲಾವಣೆಗಳಾದಂತೆ ಕಾಣಿಸುತ್ತವೆ. ತಮಗೆ ಲವ್ ಅಗಿರುವುದರ ಬಗ್ಗೆ ಮಾತನಾಡಿದ್ದಾರೆ.
ರಿಯಾಲಿಟಿ ಶೋನಿಂದ ಎಲಿಮಿನೇಟ್ ಆದ ಚೈತ್ರಾ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಮತ್ತೆ ಅರಮನೆಯಂಥ ಬಿಗ್‌ಬಾಸ್ ಸೆರೆಮನೆಗೆ ರೀ ಎಂಟ್ರಿ ಆಗಿದ್ದರು. ಇದಾದ ಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಶಾಂತಂ ಪಾಪಂ ಶೋ ನಿರೂಪಣೆ ಮಾಡುವ ಮೂಲಕ ಅಲ್ಲೊಮ್ಮೆ, ಇಲ್ಲೊಮೆ ಕಾಣಿಸಿಕೊಳ್ಳುತ್ತಿದ್ದರು.
ಹೌದು! ಜುಲೈ 18ರಂದು ಚೈತ್ರಾ ಅಪ್ಲೋಡ್ ಮಾಡಿದ ಪೋಟೋ ಮತ್ತು ಅದಕ್ಕೆ ಬರೆದ ಸ್ಟೇಟಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'I am in love! ಯಾರ ಜೊತೆಗೆ ಅಂತ ಕೇಳಬೇಡಿ... I can’t disclose it now....!' ಎಂದು ಬರೆದುಕೊಂಡು, ಬ್ಲ್ಯಾಕ್ ಆಂಡ್ ವೈಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹುಡುಗ ಯಾರೆಂದು ಕೇಳಲಾಗದೆ ನೆಟ್ಟಿಗರು ಸುಮ್ಮನಾಗಿದ್ದಾರೆ.
ಯಾರ ಕಾಲೆಳೆದರು?:
ಯುವ ವಿಜ್ಞಾನ ಡ್ರೋನ್ ಪ್ರತಾಪ್ ಇತ್ತೀಚಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೆಚ್ಚಾಗಿ ಬಳಸಿದ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ 'I can’t disclose it now....!' ಎಂಬ ಅವರ ಉತ್ತರ ಜನಪ್ರಿಯತೆ ಪಡೆದುಕೊಂಡಿದೆ. ಅಲ್ಲದೇ ಎಲ್ಲೆಡೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಈ ಸಮಯದಲ್ಲಿ ಚೈತ್ರಾ ಕೊಟ್ಟೂರು ಹೀಗೆ ಬಳಸಿರುವ ಕಾರಣ, ಡ್ರೋನ್ ಪ್ರತಾಪ್ ಕಾಲೆಳೆದರಾ ಎಂಬ ಅನುಮಾನಗಳನ್ನು ಹುಟ್ಚಿ ಹಾಕಿವೆ. ಪ್ರತಾಪ್ ಕಾಲೆಳೆಯುತ್ತಿದ್ದಾರೆ ಎಂದೇ ನೆಟ್ಟಿಗರೂ ಕಾಮೆಂಟ್‌ನಲ್ಲಿ ಹಾಸ್ಯ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.