ಒಂದೇ ಬ್ಲೌಸ್‌ಗೆ ಮೂರ್ನಾಲ್ಕು ಸೀರೆಯುಟ್ಟುಕೊಂಡಿದ್ದೆ, ಮೆಹೆಂದಿ ಇಲ್ಲವೇ ಇಲ್ಲ: ಪತಿ ಮಾಡಿದ ಅರ್ಜೆಂಟ್‌ಗೆ ಮಾಲತಿ ಬೇಸರ

Published : Sep 22, 2023, 12:00 PM IST
ಒಂದೇ ಬ್ಲೌಸ್‌ಗೆ ಮೂರ್ನಾಲ್ಕು ಸೀರೆಯುಟ್ಟುಕೊಂಡಿದ್ದೆ, ಮೆಹೆಂದಿ ಇಲ್ಲವೇ ಇಲ್ಲ: ಪತಿ ಮಾಡಿದ ಅರ್ಜೆಂಟ್‌ಗೆ ಮಾಲತಿ ಬೇಸರ

ಸಾರಾಂಶ

ಮಾವನವರಿಗೆ ಮೂರು ದಿನ ಮುನ್ನ ಮದುವೆ ಸುದ್ದಿ ತಿಳಿಸಿದರು. ಕೇವಲ 32 ಮಂದಿ ಜೊತೆ ನಡೆದ ಅದ್ಧೂರಿ ಮದುವೆ ಇದು...... 

ಸತ್ಯ ಧಾರಾವಾಹಿಯಲ್ಲಿ ಖಡಕ್ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಸೀತಮ್ಮ ಉರ್ಫ್‌ ಮಾಲತಿ ಮೊದಲ ಬಾರಿ ರಿಯಾಲಿಟಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಪತಿ ಯಶ್ವಂತ ಸರದೇಶಪಾಂಡೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವೇದಿಕೆ ಮೇಲೆ ಮಧುಮಗಳಂತೆ ಆಗಮಿಸಿದ ನಟಿ ತಮ್ಮ ಮದುವೆ ಸ್ಟೋರಿ ರಿವೀಲ್ ಮಾಡಿದ್ದಾರೆ. 

ಹೌದು! 'ನಮ್ಮ ಮದುವೆ ಅವಸರದಲ್ಲಿ ನಡೆಯಿತ್ತು. ಮುನವಳ್ಳಿ ಗ್ರಾಮದಲ್ಲಿ ನಾವು ಮದುವೆಯಾದದ್ದು. ಸುಮಾರು 32 ಮಂದಿ ಮಾತ್ರವಿದ್ದರು. ಇವತ್ತು ಮದುವೆಗಳಲ್ಲಿ ಎಷ್ಟು ಜನರಿರುತ್ತಾರೆ ನೋಡಿ. ನಮ್ಮ ಮದುವೆಯಲ್ಲಿ ನಾನು ರೆಡಿಯಾಗಿರಲಿಲ್ಲ ಏಕೆಂದರೆ ಯಶವಂತ ಸರದೇಶಪಾಂಡೆ ಭಯಂಕರ ಅರ್ಜೆಂಟ್ ಮಾಡಿಬಿಟ್ಟರು. ಮದುವೆ ಮಾಡಿಕೊಂಡು ಕರ್ಕೊಂಡು ಹೋಗಿಬಿಡಬೇಕು ಎಂದು.  ಮದುವೆಯಲ್ಲಿ ಚೆನ್ನಾಗಿ ರೆಡಿಯಾಗಬೇಕು ಅನ್ನೋ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೂ ಇರುತ್ತದೆ ಅದೇ ರೀತಿ ನನಗೂ ಆಸೆ ಇತ್ತು. ಆದರೆ ಇವರ ಅರ್ಜೆನ್ಸಿಯಿಂದಾಗಿ ನಮಗೆ ರೆಡಿಯಾಗಲು ಸಮಯವೇ ಸಿಗಲಿಲ್ಲ. ಇದ್ದು ನಾಲ್ಕು ದಿನಗಳಲ್ಲಿ ತಂದೆಯನ್ನು ಕರೆಯಿಸಬೇಕಿತ್ತು. ಇವರೇ ಫೋನ್ ಮಾಡಿ ಮಗಳ ಮದುವೆ ಇದೆ ಬನ್ನಿ ಅಂತ ಕರೆದರು' ಎಂದು ಮಾಲತಿ ಮಾತನಾಡಿದ್ದಾರೆ.

ಮದುವೆ ನಂತರ ನಡೆಯಿತ್ತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ

'ಇಂದು ಕಾರ್ಯಕ್ರಮದಲ್ಲಿ ಮೆಹೆಂದಿ ಹಾಕಿಸಿಕೊಂಡಿರುವೆ ಆದರೆ ನನ್ನ ಮದುವೆಯಲ್ಲಿ ಹಾಕಿಕೊಂಡಿರಲಿಲ್ಲ. ಯಾಕಂದ್ರೆ ಆಗ ಟೈಮ್ ಇರಲಿಲ್ಲ. ಅದು ಒಂದೇ ಬ್ಲೌಸ್ ಹಾಕಿಕೊಂಡು ಸುಮಾರು ಮೂರ್ನಾಲ್ಕು ಸೇರೆಯುಟ್ಟುಕೊಂಡಿದ್ದೆ. ಮದುವೆಗೆ ಬನ್ನಿ ಅಂತ ಯಾರಿಗೂ ಕರೆಯೋಕೆ ಆಗಲಿಲ್ಲ ಅವಕಾಶ ಇರಲಿಲ್ಲ. ನಾವು ಮದುವೆ ಕಾರ್ಡ್‌ ಹೇಗೆ ಮಾಡಿಸಿದ್ವಿ ಅಂದ್ರೆ ನಾನು ಮಾಲತಿ ಮದುವೆಯಾಗುತ್ತಿದ್ದೇವೆ ಬನ್ನಿ ಅಷ್ಟೆ ಬರೆಯಿಸಿದ್ದು. ಎಂದು ಮಾಲತಿ ಹೇಳಿದ್ದಾರೆ.

ಭಾರಿ ಮೊತ್ತಕ್ಕೆ ಅಂದೊಂದಿತ್ತು ಕಾಲ ಆಡಿಯೋ ಹಕ್ಕು ಮಾರಾಟ

'32 ವರ್ಷ ಇದ್ದದ್ದು 50 ಆಗಲಿ 60 ಆಗಲಿ ನಮ್ಮ ಪ್ರೀತಿಯೊಳಗೆ ಜೀವಂತಿಕೆ ಹೀಗೆ ಇರಲಿ. ಕಷ್ಟ ಕೊಡಬೇಡ ಅಂತ ನಾನು ದೇವರಿಗೆ ಕೇಳೋದಿಲ್ಲ. ಕಷ್ಟ ಅದರ ಜೊತೆಗೆ ಕಷ್ಟ ಎದುರಿಸುವ ಶಕ್ತಿ ಕೊಡು ಅಂತಲೂ ಕೇಳ್ತೀನಿ. ದೇವರು ಅಂತಹ ಒಂದು ಶಕ್ತಿಯನ್ನು (ಮಾಲತಿ) ನನ್ನ ಜೊತೆ ಇಟ್ಟಿದ್ದಾನೆ. ಈ ಶಕ್ತಿ ಎಲ್ಲಿಯವರೆಗೂ ಇರುತ್ತೋ ಅಲ್ಲಿಯವರೆಗೂ ನನಗೆ ಥ್ರಾಸ್ ಆಗೋದಿಲ್ಲ' ಎಂದು ಯಶವಂತ ಸರದೇಶಪಾಂಡೆ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?