ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ

Published : Sep 22, 2023, 10:41 AM ISTUpdated : Sep 22, 2023, 10:50 AM IST
 ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ

ಸಾರಾಂಶ

ರಿಯಾಲಿಟಿ ಪ್ರಪಂಚಕ್ಕೆ ಕಾಲಿಟ್ಟ ಸುನೇತ್ರಾ-ರಮೇಶ್. ಮದುವೆ ನಂತರ ನಡೆದ ಘಟನೆ ನೆನೆದು ಭಾವುಕಳಾದ ನಟಿ.... 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ಕಾರ್ಯಕ್ರಮಕ್ಕೆ ವಿಶೇಷ ಜೋಡಿ ಎಂಟ್ರಿ ಕೊಟ್ಟಿದ್ದಾರೆ. ಅವರೇ ಸುನೇತ್ರಾ ಮತ್ತು ರಮೇಶ್. ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟ ಮತ್ತು ನಟಿ. ಬಹುಷ ಇವರಿಬ್ಬರಿದ್ದ ಪ್ರತಿಯೊಂದು ಧಾರಾವಾಹಿನೂ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಸುನೇತ್ರಾ ಪಾಪಾ ಪಾಂಡು ಮೂಲಕ ಮನೆ ಮಾತಾಗಿದ್ದರು. ಈಗ ರಿಯಲ್ ಜೋಡಿ ಜನರಿಗೆ ಮತ್ತಷ್ಟು ಹತ್ತಿರವಾಗಲು ರಿಯಾಲಿಟಿ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. 

ಇನ್ನು ಓಪನಿಂಗ್ ಎಪಿಸೋಡ್‌ನಲ್ಲಿ ಸುನೇತ್ರಾ ಕಣ್ಣೀರಿಟ್ಟಿದ್ದಾರೆ. 'ಬೆಂಗಳೂರಿನಲ್ಲಿ ಲೈವ್‌ ಎಡಿಟಿಂಗ್‌ ನಡೆದ ಮೊದಲ ಮದುವೆ ನಮ್ಮದು. ಆರತಕ್ಷತೆಯನ್ನು ವಿಭಿನ್ನವಾಗಿ ಮಾಡಬೇಕು ಎಂದು ಮದುವೆ ಮನೆಯ ಬಾಗಿನಿನಲ್ಲಿ ರಮೇಶ್ ಮತ್ತು ನಾನು ನಿಂತುಕೊಂಡು ಮಾತನಾಡಿಸುತ್ತಿದ್ವಿ ಅಲ್ಲಲ್ಲಿ ಡೇಬಲ್ ಹಾಕಿದ್ವಿ ನಾವು ಆ ಟೇಬಲ್ ಬಳಿ ಹೋಗಿ ಎಲ್ಲರನ್ನು ಮಾತನಾಡಿಸಿಕೊಂಡು ಫೋಟೋ ಕ್ಲಿಕ್ ಮಾಡಿಸಿಕೊಳ್ಳುತ್ತಿದ್ವಿ. ವಿಭಿನ್ನ ಶೈಲಿಯಲ್ಲಿ ನಡೆಯಿತ್ತು ಎಂದು ಜೀವನದಲ್ಲಿ ಈ ಘಟನೆ ಮರೆಯುವುದಿಲ್ಲ' ಎಂದು ಸುನೇತ್ರಾ ಮಾತನಾಡಿದ್ದಾರೆ. 

ಸ್ವಂತ ಮನೆ ಮಾರಿಬಿಟ್ಟೆ, ಇದುವರೆಗೂ ಬೈಟು ಮಾಡಿಕೊಂಡೇ ತಿನ್ನುತ್ತಿದ್ದೀವಿ: 'ಪಾಪ ಪಾಂಡು' ನಟ ಚಿದಾ ಕಣ್ಣೀರು

'ಮದುವೆ ಫೋಟೋ ನೋಡಲು ಪ್ರತಿಯೊಬ್ಬರಿಗೂ ಕ್ಯೂರಿಯಾಸಿಟಿ ಮತ್ತು ಖುಷಿ ಇರುತ್ತದೆ ಆದರೆ ನಮ್ಮ ಮದುವೆ ಸಂಪೂರ್ಣ ಕವರೇಜ್ ಮಾಡಿದವರ ಫೋಟೋ ಸ್ಟುಡಿಯೋ ಸುಟ್ಟಿಹೋಗುತ್ತದೆ. ಏನೋ ಶಾರ್ಟ್‌ ಸರ್ಕ್ಯೂಟ್ ಆಗಿ ಇಡೀ ಸ್ಟುಡಿಯೋದಲ್ಲಿ ಸಂಪೂರ್ಣ ವಸ್ತು ಸುಟ್ಟಿದೆ. ನಮ್ಮ ಜೊತೆ ಬೇರೆ ಜೋಡಿಗಳ ಫೋಟೋ ಮತ್ತು ವಿಡಿಯೋ ಇಲ್ಲದಂತೆ ಆಗಿದೆ. ಮದುವೆಯಲ್ಲಿ ಯಾರೆಲ್ಲ ಇದ್ದರು ಅವರ ಬಾಯಿಂದ ನಮ್ಮ ಮದುವೆ ಹೇಗಿತ್ತು ಎಂದು ಕೇಳಬೇಕು ಏಕೆಂದರೆ ಒಂದು ಫೋಟೋ ಕೂಡ ಇಲ್ಲ. ಆದರೆ ನಮ್ಮ ಸ್ನೇಹಿತರು ರೀಲ್‌ ಕ್ಯಾಮೆರಾದಲ್ಲಿ ಕ್ಲಿಕ್ ಮಾಡಿದ ಒಂದೆರಡು ಫೋಟೋಗಳಿಗೆ ಅಷ್ಟೆ' ಎಂದು ಸುನೇತ್ರಾ ಕಣ್ಣೀರಿಟ್ಟಿದ್ದಾರೆ.

ಚಟಕ್ಕೋಸ್ಕರ ಲವ್ ಮಾಡ್ಬೇಡಿ, ಮನಸ್ಸಿಂದ ಪ್ರೀತಿ ಮಾಡಿ: ಕಣ್ಣೀರು ಹಾಕುತ್ತ ಸಂಜು ಬಸಯ್ಯ ಹೀಗೆ ಹೇಳಿದ್ಯಾಕೆ?

ಹೀಗಾಗಿ ಮದುವೆಯಾಗಿ 28 ವರ್ಷ ಕಳೆದರೂ ಒಂದು ಫೋಟೋ ಇಲ್ಲ ಅನ್ನೋ ನೋವು ಕಾಡುತ್ತಿದೆ ಎಂದು ಸುನೇತ್ರಾ ಹೇಳಿದಾಗ ತಕ್ಷಣವೇ ವೇದಿಕೆ ಮೇಲೆ ಮತ್ತೊಮ್ಮೆ ಮದುವೆ ವ್ಯವಸ್ತೆ ಮಾಡಲಾಗಿತ್ತು. ಅಲ್ಲಿದ್ದ ಪ್ರತಿಯೊಬ್ಬರ ಜೊತೆ ಫೋಟೋ ಕ್ಲಿಕ್ ಮಾಡಿಸಿ ಅದನ್ನು ಆಲ್ಬಂ ರೀತಿಯಲ್ಲಿ ಗಿಫ್ಟ್ ಮಾಡಲಾಗಿತ್ತು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?