ಸ್ವಂತ ಮನೆ ಮಾರಿಬಿಟ್ಟೆ, ಇದುವರೆಗೂ ಬೈಟು ಮಾಡಿಕೊಂಡೇ ತಿನ್ನುತ್ತಿದ್ದೀವಿ: 'ಪಾಪ ಪಾಂಡು' ನಟ ಚಿದಾ ಕಣ್ಣೀರು

By Vaishnavi Chandrashekar  |  First Published Sep 16, 2023, 3:44 PM IST

ಸ್ವಂತ ಮನೆ ಮಾರಿದ ಘಟನೆ ಹಾಗೂ ತಾಯಿ ನೆನಪಿಸಿಕೊಂಡು ಭಾವುಕರಾದ ಪಾಪ ಪಾಂಡು ಚಿದಾನಂದ....


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ಸೀಸನ್ 2 ಕಾರ್ಯಕ್ರಮದಲ್ಲಿ ಪಾಪ ಪಾಂಡು ಖ್ಯಾತಿಯ ಚಿದಾನಂದ ಮತ್ತು ಪತ್ನಿ ಕವಿತಾ ಆಗಮಿಸಲಿದ್ದಾರೆ. ಬಣ್ಣದ ಪ್ರಪಂಚದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಈ ಜೋಡಿ ರಿಯಲ್ ಲೈಫ್‌ನಲ್ಲಿ ತುಂಬಾ ಕಷ್ಟಗಳನ್ನು ನೋಡಿದ್ದಾರೆ. ಅದರಲ್ಲೂ ಸ್ವಂತ ದುಡಿಮೆಯಲ್ಲಿ ಮನೆ ಕಟ್ಟಿಸಿ ಅದನ್ನು ಮಾರುವ ನೋವು ಯಾರಿಗೂ ಬೇಡ. 

ಕವಿತಾರನ್ನು ಚಿರದಾನಂದ ಅವರು ಡಿಸೆಂಬರ್ 22, 1998ರಲ್ಲಿ ಮದುವೆಯಾದರು ಆದರೆ ಮೊದಲು ನೋಡಿದ್ದು ಡಿಸೆಂಬರ್ 22, 1997ರಲ್ಲಿ. ಪಾಪ ಪಾಂಡು ಸೀರಿಯಲ್‌ನಿಂದ ಹೆಚ್ಚಿನ ಜನಪ್ರಿಯತೆ ಪಡೆದ ಮೇಲೆ  ಎಲ್ಲೋದರೂ ಕವಿತಾ ನಾನು ನಿಜವಾದ ಹೆಂಡತಿ ನಾನೇ ಇವರ ನಿಜವಾದ ಶ್ರೀಮತಿ ಎಂದು ಒತ್ತಿ ಒತ್ತಿ ಪರಿಚಯ ಮಾಡಿಕೊಳ್ಳುತ್ತಿದ್ದರಂತೆ. ಇವರ ಮದುವೆಗೆ ಅಪ್ಪ-ಅಮ್ಮ ಒಪ್ಪದ ಕಾರಣ ಚಿಕ್ಕಪ್ಪ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಮದುವೆ ಮಾಡಿದ್ದಾರೆ.

Tap to resize

Latest Videos

ಚಟಕ್ಕೋಸ್ಕರ ಲವ್ ಮಾಡ್ಬೇಡಿ, ಮನಸ್ಸಿಂದ ಪ್ರೀತಿ ಮಾಡಿ: ಕಣ್ಣೀರು ಹಾಕುತ್ತ ಸಂಜು ಬಸಯ್ಯ ಹೀಗೆ ಹೇಳಿದ್ಯಾಕೆ?

ಇನ್ನು ಚಿದಾನಂದ ಅವರ ಪತ್ನಿಗೆ ಗಣೇಶ್ ಮಾಡುವ ಆಸೆ ಇತ್ತಂತೆ. ಮೊದಲು ಒಂದು ಗಣೇಶ ಮಾಡಿದ್ದಾರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಈ ವರ್ಷ ಸುಮಾರು 350 ಗಣೇಶ ಮಾಡಿದ್ದಾರೆ. 

'ಒಂದು ದಿನ ನನ್ನ ತಾಯಿ ನನ್ನ ಬಳಿ ಬಂದು ನಿನಗೆ ಮದುವೆ  ಮಾಡಬೇಕು ಎಂದರು. ಅವರ ಮಾತುಗಳನ್ನು ಕೇಳಿ ನನಗೆ ಚಳಿ ಜ್ವರ ಬಂದಿತ್ತು. ಯಾಕಂದ್ರೆ  ನಮ್ಮ ಜೀವನದಲ್ಲಿ ಅಷ್ಟೊಂದಯ ಕಷ್ಟಗಳಿತ್ತು. ಮದುವೆ ನಂತರ ಹೇಗೋ ಎಲ್ಲಾ ನಡೆದುಕೊಂಡು ಸಾಗಿತ್ತಿ. ನಮ್ಮಿಬ್ಬರಿಗೆ ಒಂದು ಚಟ ಇದೆ. ಹೋಟೆಲ್‌ಗೆ ಹೋದರೆ 1 ಮಸಾಲೆ ದೋಸೆ ತೆಗೆದುಕೊಂಡು ಬೈಟು ಮಾಡಿ ತಿನ್ನುತ್ತೀವಿ. ದುಡ್ಡು ಇದ್ದರೂ ಇಬ್ಬರೂ ಬೈಟು ಮಾಡಿಕೊಳ್ಳುತ್ತೀವಿ. ಮಸಾಲ ಪುರಿ ತೆಗೆದುಕೊಂಡರೂ ಬೈಟು ಮೆಣಸಿನಕಾಯಿ ಬಜ್ಜಿ ತೆಗೆದುಕೊಂಡರೂ ಬೈಟು. ಇವತ್ತಿಗೂ ಅದು ಮುಂದುವರೆಸಿಕೊಂಡು ಬಂದಿದ್ದೀವಿ' ಎಂದು ಚಿದಾನಂದ ಹೇಳುತ್ತಾರೆ.

ಯಾರ್ತಾನೆ ಚಂದ ಕಾಣಲ್ಲ ಹೇಳಿ?; ಮೈಸೂರ್ ಸಿಲ್ಕ್‌ನ ಹೀಗೂ ಹಾಕೋಬೋದು ಎಂದು ತೋರಿಸಿಕೊಟ್ಟ ಶ್ವೇತಾ ಚಂಗಪ್ಪ

'ಸ್ವಂತ ಮನೆ ಕಟ್ಟಿಸಿ ಕವಿತಾಳನ್ನು ಗಾಜಿನ ಗೊಂಬೆ ತರಹ ನೋಡಿಕೊಳ್ತೀನಿ ಎಂದಿದ್ದೆ. ಮನೆ ಕಟ್ಟಿಸಿದೆ ಆದರೆ ಮನೆ ಕಟ್ಟಿಸಿ ಸ್ವಲ್ಪ ದಿನ  ಅಲ್ಲಿದ್ವಿ. ಆಮೇಲೆ ಮಾರಿಬಿಟ್ಟೆ. ಆ ಸತ್ಯವನ್ನು ಇವತ್ತಿನವರೆಗೂ ಯಾರಿಗೂ ಹೇಳಲು ಆಗದ ಸತ್ಯವಾಗಿ ಉಳಿದು ಬಿಟ್ಟಿದೆ' ಎಂದು ಚಿದಾನಂದ ಭಾವುಕರಾಗುತ್ತಾರೆ. 

 

click me!