ಅಯ್ಯೋ ಯಾಕಿಷ್ಟು ಸಣ್ಣ ?; ಗರ್ಭಿಣಿಯಾಗಿದ್ದರೂ ತೂಕ ಕಳೆದುಕೊಂಡ ಕಿರುತೆರೆ ನಟಿ ಮಾನಸ

Published : Sep 16, 2023, 12:41 PM ISTUpdated : Sep 16, 2023, 12:42 PM IST
ಅಯ್ಯೋ ಯಾಕಿಷ್ಟು ಸಣ್ಣ ?; ಗರ್ಭಿಣಿಯಾಗಿದ್ದರೂ ತೂಕ ಕಳೆದುಕೊಂಡ ಕಿರುತೆರೆ ನಟಿ ಮಾನಸ

ಸಾರಾಂಶ

ತಾಯಿಯಾಗುತ್ತಿರುವ ಖುಷಿ ಒಂದು ಕಡೆ ತೂಕ ಕಳೆದುಕೊಳ್ಳುತ್ತಿರುವುದಕ್ಕೆ ಚಿಂತೆ ಒಂದು ಕಡೆ. ಮಾನಸ ಜೋಶಿ ಪ್ರೆಗ್ನೆನ್ಸಿ ಜರ್ನಿ.... 

ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ದೇವಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮಾನಸ ಜೋಶಿ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಕೊಂಡು ತಾಯಿತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳು ಒಂದು ವರ್ಷಕ್ಕೆ ಕಾಲಿಡುತ್ತಾಳೆ. ಈ ಸಮಯದಲ್ಲಿ ಮಾನಸ ತಮ್ಮ ಪ್ರೆಗ್ನೆನ್ಸಿ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ತೂಕ ಕಳೆದುಕೊಂಡ ಕ್ಷಣದ ಬಗ್ಗೆ ಹಂಚಿಕೊಂಡಿದ್ದಾರೆ. 

'ನನ್ನ ಪ್ರೆಗ್ನೆನ್ಸಿ ಸಮಯದಲ್ಲಿ ತುಂಬಾ ತೂಕ ಕಳೆದುಕೊಂಡೆ. ಒಂದೇ ಸಮನೆ ವಾಂತಿ ಮಾಡುತ್ತಿದ್ದೆ ಹಾಗೂ ಸುಸ್ತಾಗುತ್ತಿತ್ತು. ತೂಕ ಕಡಿಮೆ ಆಗುತ್ತಿತ್ತು ಎಂದು ತಲೆ ಕೆಡಿಸಿಕೊಂಡಿದ್ದೆ ಅದಿಕ್ಕೆ ವೈದ್ಯರನ್ನು ಸಂಪರ್ಕ ಮಾಡಿ ವಿಚಾರಿಸಿದೆ. ವೈದ್ಯರು ತುಂಬಾ ಸಹಾಯ ಮಾಡಿದ್ದರು ಹಾಗೂ ಧೈರ್ಯ ಕೊಟ್ಟರು...ಗರ್ಭಿಣಿಯರು ತೂಕ ಕಳೆದುಕೊಳ್ಳುವುದು ಸಾಮಾನ್ಯ ಗಾಬರಿ ಆಗುವ ಅಗತ್ಯವಿಲ್ಲ ಎಂದು ತಿಳಿಸಿದ್ದರು. ಆಗ ಸ್ವಲ್ಪ ಸಮಾಧಾನಾಯ್ತು' ಎಂದು ಮಾನಸ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಮಗುವಿಗೆ ಹಾಲುಣಿಸುತ್ತಿರುವೆ, ಕಮ್‌ಬ್ಯಾಕ್‌ಗೆ ಸಮಯವಿಲ್ಲ ಆದರೆ ಡ್ಯಾನ್ಸ್‌ ಮಾಡುತ್ತಿರುವೆ: ಕಿರುತೆರೆ ನಟಿ ಮಾನಸ ಜೋಶಿ

'ಗರ್ಭಿಣಿ ಆಗುತ್ತಿದ್ದಂತೆ ನಾನು ಕಾಣಿಸುತ್ತಿದ್ದ ರೀತಿಯಲ್ಲಿ ಸಾಕಷ್ಟು ಬದಲಾವಣೆಗಳು ಆಯ್ತು. ಕಲಾವಿದೆಯಾಗಿ ನನ್ನ ವೃತ್ತಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆದ್ದು ಸಾಕಷ್ಟು ಯಶಸ್ಸು ಕಂಡಿರುವೆ ಆದರೆ ಗರ್ಭಿಣಿ ಆಗುತ್ತಿದ್ದಂತೆ ಎಲ್ಲವೂ ಬದಲಾಗಿದೆ. ಕೆಲವೊಮ್ಮೆ ನಾನು ಹೊರ ಹೋಗುವುದಕ್ಕೂ ಸಾಕಷ್ಟು ಯೋಚನೆ ಮಾಡುತ್ತಿದ್ದೆ. ನನ್ನ ಯಾವ ಹಳೆ ಬಟ್ಟೆಗಳಲ್ಲೂ ನಾನು ಫಿಟ್ ಆಗುತ್ತಿರಲಿಲ್ಲ. ಆಮೇಲೆ ನಾನು ನೋಡಲು ತುಂಬಾನೇ ಡಿಫರೆಂಟ್ ಆಗಿದ್ದು ತುಂಬಾ ಬದಲಾವಣೆ ಆಯ್ತು. ಈ ಸಮಯದಲ್ಲಿ ನನ್ನ ಕೂದಲು ಕಟ್ ಮಾಡಿಸಿಕೊಂಡೆ. ನಿಜ ಹೇಳಬೇಕು ಅಂದ್ರೆ ನಾನು ಇದ್ದ ರೀತಿ ಹೇರ್‌ಕಟ್ ಸ್ಟೈಲ್ ಲುಕ್ ನೀಡುತ್ತಿತ್ತು. ನನ್ನ ದೇಹದಲ್ಲಿ ಅಗುತ್ತಿದ್ದ ಬದಲಾವಣೆಗಳಿಂದ ನನ್ನ ಆತ್ಮಸ್ಥೈರ್ಯದ ಮೇಲೆ ಪರಿಣಾಮ ಬೀರಿತ್ತು. ಪಬ್ಲಿಕ್ ಕಣ್ಣಿಗೆ ಕಾಣಿಸಿಕೊಳ್ಳಬಾರದು ಅನ್ನೋಷ್ಟು ಕುಗ್ಗಿದೆ. ಯಾಕೆ ನಟಿಯರು ಆದಷ್ಟು ಬೇಡ ಹಳೆ ಬಾಡಿ ಶೇಪ್‌ಗೆ ಮರಳಬೇಕು ಮತ್ತು ಕಮ್‌ಬ್ಯಾಕ್ ಮಾಡಬೇಕು ಎಂದು ಭಯಸುವುದು ಏಕೆ ಎಂದು ಆಗ ತಿಳಿಯಿತ್ತು' ಎಂದು ಮಾನಸ ಹೇಳಿದ್ದಾರೆ. 

Manasa Joshi ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಮಾನಸ ಜೋಶಿ

'ಒಂದು ಸಮಯದಲ್ಲಿ ಇಲ್ಲ ಈ ರೀತಿ ಜೀವನ ನೋಡಬಾರದು ಎಂದು ತಿಳಿದುಕೊಂಡೆ. ಸದ್ಯಕ್ಕೆ ನನ್ನ ಪ್ರೆಗ್ನೆನ್ಸಿ ತೂಕವನ್ನು ಕಳೆದುಕೊಂಡಿರುವೆ. ಆದರೂ ಜನ ಸುಮ್ಮನಿಲ್ಲ ಅಯ್ಯೋ ನೀನು ಎಷ್ಟು ಸಣ್ಣಗಾಗಿರುವೆ ಎಂದು ಕೇಳುತ್ತಾರೆ. ಆದರೆ ಒಮ್ಮೊಮ್ಮೆ ನನ್ನನ್ನು ನಾನು ತುಂಬಾ ಕೆಟ್ಟ ರೀತಿಯಲ್ಲಿ ನೋಡಿಕೊಂಡಿರುವೆ ಅನಿಸುತ್ತದೆ. ಈ ಪ್ರಾಸೆಟ್‌ ತುಂಬಾ ದೊಡ್ಡದಿರಬಹುದು ಆದರೂ ಪರ್ವಾಗಿಲ್ಲ ನಾನು ಆದಷ್ಟು ಒಳ್ಳೆ ರೀತಿಯಲ್ಲಿ ನನ್ನ ಬಾಡಿ ಸೆಟ್ ಮಾಡಿಸಿಕೊಂಡು ಮುಂದುವರೆಯಲು ಸಿದ್ಧಳಾಗಿರುವೆ' ಎಂದಿದ್ದಾರೆ ಮಾನಸ. 

'ಮಗು ಆದ ಮೇಲೆ ಜೀವನ ಸಂಪೂರ್ಣವಾಗಿ ಬದಲಾಗಿದೆ. ನಾನು ಪ್ಲ್ಯಾನ್ ಮಾಡಿರುವ ರೀತಿಯಲ್ಲಿ ಏನೂ ನಡೆಯುವುದಿಲ್ಲ. ಏನೇ ಬರಲಿ ನಾನು ಎಲ್ಲದಕ್ಕೂ ತಯಾರಾಗಿರುವೆ. ಮಗಳು ಬೆಳೆಯುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ಪ್ರತಿ ದಿನ ಏನೋ ಹೊಸದು ಕಲಿಯುತ್ತಾಳೆ ಹಾಗೂ ಹೊಸತನ ಹುಡುಕುತಾಳೆ. ಈ ರೀತಿ ಜೀವನ ನೋಡಿದರೆ ಖಂಡಿತಾ ಇದು ಬ್ಯೂಟಿಫುಲ್ ಫೇಸ್' ಎಂದು ಖುಷಿ ಪಟ್ಟಿದ್ದಾರೆ ಮಾನಸ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?
Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...