ಚಿಕ್ಕ ವಯಸ್ಸಲ್ಲೇ ಗೆಳೆಯನಿಂದ ಬಸುರಾಗಿ ಸುದ್ದಿಯಾಗಿದ್ದ ನಟಿ ಶಕೀಲಾ ದೊಡ್ಡ ದೊಡ್ಡ ಸ್ಟಾರ್ಗಳನ್ನೇ ನಡುಗಿಸಿದ್ದು ಹೇಗೆ?
ತೆಲುಗು ಬಿಗ್ಬಾಸ್ ನಡೆಸಿಕೊಡುತ್ತಿರುವ ಬಿಗ್ಬಾಸ್ ಸೀಸನ್-7 (BiggBoss-7) ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಸೂಪರ್ಸ್ಟಾರ್ ನಾಗಾರ್ಜುನ ಅವರು ನಡೆಸಿಕೊಡುತ್ತಿರುವ ಈ ಜನಪ್ರಿಯ ರಿಯಾಲಿಟಿ ಶೋದಲ್ಲಿನ ಸ್ಪರ್ಧಿಗಳು ಸಕತ್ ಸ್ಪರ್ಧೆಯೊಡ್ಡುತ್ತಿದ್ದಾರೆ. ಇದೀಗ ಮೊದಲನೆಯ ಎಲಿಮೇಷನ್ ನಡೆದಿದ್ದು, ಎರಡನೆಯ ಎಲಿಮೇಷನ್ಗಾಗಿ ಸದ್ದು ಮಾಡುತ್ತಿದೆ. ಸದ್ಯ ಈ ಸ್ಪರ್ಧೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಯಾರ್, ಪಲ್ಲವಿ ಪ್ರಶಾಂತ್, ಶಕೀಲಾ, ಶೋಭಾ, ಅಮರದೀಪ್, ಗೌತಮ್, ಟೇಸ್ಟಿ ತೇಜ ಮತ್ತು ರಥಿಕಾ ಇದ್ದು, ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವುದು ಸದ್ಯದ ಕುತೂಹಲ. ಆದರೆ ಇವರೆಲ್ಲರಿಗಿಂತಲೂ ಸಾಕಷ್ಟು ಸದ್ದು ಮಾಡುತ್ತಿರುವವರು ನಟಿ ಶಕೀಲಾ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತದಾನದಲ್ಲಿ ನಿರತರಾಗಿದ್ದರೆ, ಈ ವಾರ ಶಕೀಲಾ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಮರ್‌ದೀಪ್ ಮತ್ತು ಶಿವಾಜಿ ಅವರೊಂದಿಗೆ ಪಲ್ಲವಿ ಪ್ರಶಾಂತ್ ಇಲ್ಲಿಯವರೆಗೆ ಗರಿಷ್ಠ ಮತಗಳನ್ನು ಪಡೆದಿದ್ದರೆ ಶಕೀಲಾ ಅವರಿಗೆ ಕಡಿಮೆ ಮತ ಇರುವ ಕಾರಣ ಅವರು ಹೋಗಬಹುದು ಎನ್ನಲಾಗುತ್ತಿದೆ.
ಹಾಗಿದ್ದರೆ ಈ ಶಕೀಲಾ (Shakeela) ಯಾರು ಎನ್ನುವುದೇ ಕುತೂಹಲದ ವಿಷಯ. ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ 2ರಲ್ಲಿ ಭಾಗವಹಿಸಿದ್ದ ನಟಿ ಶಕೀಲಾ, ಹಿಂದೊಮ್ಮೆ ಬಿ-ಗ್ರೇಡ್ ನಟಿ ಎನಿಸಿಕೊಂಡವರು. ಮಲಯಾಳಂನಲ್ಲಿ ಹಲ್ಚಲ್ ಸೃಷ್ಟಿಸಿದ್ದ ನಟಿಯೀಕೆ. ತಮ್ಮ ಬೋಲ್ಡ್ ದೃಶ್ಯಗಳಿಂದ ನೋಡುಗರ ಬಿಸಿಯೇರಿಸುತ್ತಿದ್ದ ನಟಿ, ಭಾರಿ ಬೇಡಿಕೆಯಲ್ಲಿದ್ದವರು. ಕನ್ನಡದಲ್ಲಿಯೂ ನಟಿಸಿರುವ ಈಕೆ ತೆಲುಗು, ತಮಿಳು ಚಿತ್ರರಂಗದಲ್ಲಿಯೂ ನಟಿಸಿರುವ ಬಹುಭಾಷಾ ತಾರೆ. ಬಿ-ಗ್ರೇಡ್ ಸಿನಿಮಾಗಳು ಎಂದರೆ ವಯಸ್ಕರ ಸಿನಿಮಾಗಳಿಂದಲೇ ಈಕೆ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿಯೂ ಈ ವಿಷಯವನ್ನು ನಟಿ ಹೇಳಿಕೊಂಡಿದ್ದಿದೆ. ಕನ್ನಡದ ಬಿಗ್ಬಾಸ್ ಮನೆಯಲ್ಲಿದ್ದ ತೇಜಾ ಅವರು ‘ಮೇಡಂ, ನಾನು ಚಿಕ್ಕಂದಿನಿಂದ ನಿಮ್ಮ ಸಿನಿಮಾಗಳನ್ನು ನೋಡಿ ಬೆಳೆದವನು' ಎಂದಾಗ ತಮಾಷೆ ಮಾಡಿದ್ದ ಶಕೀಲಾ, 'ಏನ್ ಹೇಳ್ತಾ ಇದ್ಯಾ ನೀನು? ನನ್ನ ಸಿನಿಮಾಗಳನ್ನು ಯಾರಾದರೂ ಚಿಕ್ಕವರು ನೋಡ್ತಾರಾ' ಎಂದು ಪ್ರಶ್ನಿಸಿ ಎಲ್ಲರನ್ನೂ ನಗಿಸಿದ್ದವರು. ಅಂಥ ನಟಿಯೀಕೆ.
ಡೇಟಿಂಗ್ ಮಾಡ್ತಿದ್ರೆ ಹಾಸಿಗೆ ವಿಷ್ಯದಲ್ಲಿ ಹೇಗಿರಬೇಕು? ಬಾಲಿವುಡ್ ನಟಿ ಜೀನತ್ ಅಮನ್ ಪಾಠ
ಇಷ್ಟೇ ಅಲ್ಲದೇ, ಒಂದು ಕಾಲದಲ್ಲಿ ಇವರಿಂದ ದೊಡ್ಡ ದೊಡ್ಡ ಸ್ಟಾರ್ ನಟರೇ ಭಯಬೀಳುತ್ತಿದ್ದರಂತೆ. ಏಕೆಂದರೆ ಅಂದು ತಮ್ಮ ಬೋಲ್ಡ್ ನಟನೆಯಿಂದ ಹಲ್ಚಲ್ ಸೃಷ್ಟಿಸುತ್ತಿದ್ದ ನಟಿ ಶಕೀಲಾ ಅವರು ನಟಿಸಿರುವ ಸಿನಿಮಾ ಬಿಡುಗಡೆಯಾದರೆ ಬೇರೆ ಸಿನಿಮಾಗಳು ಓಡುವುದಿಲ್ಲ ಎಂದು ದೊಡ್ಡ ದೊಡ್ಡ ಸ್ಟಾರ್ಗಳು ಭಯಬೀಳುತ್ತಿದ್ದರಂತೆ. ಅವರು ತಮ್ಮ ಸಿನಿಮಾವನ್ನು ಮುಂದೂಡುತ್ತಿದ್ದ ಘಟನೆಗಳೂ ನಡೆದಿವೆ. ಇಂತಿಪ್ಪ ನಟಿಯ ಜೀವನ ಕಥೆ ಕೂಡ ಅಷ್ಟೇ ಭಯಾನಕವೂ ಹೌದು. ಅದೇನೆಂದರೆ ಎಳವೆಯಲ್ಲಿಯೇ ಗರ್ಭಿಣಿಯಾಗಿ ಪಡಬಾರದ ಪಾಡು ಪಟ್ಟವರು ನಟಿ ಶಕೀಲಾ.
ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಚಿಕ್ಕ ಹುಡುಗಿಯಾಗಿದ್ದಾಗ ಹುಡುಗನೊಬ್ಬನ ಸಹವಾಸ ಮಾಡಿ ಗರ್ಭಿಣಿಯಾಗಿದ್ದರಂತೆ. ಗರ್ಭಿಣಿಯಾಗಿದ್ದೂ ತಿಳಿಯದ ವಿಷಯವದು. ಆದರೆ ಹೊಟ್ಟೆನೋವು ಬಂದಿದ್ದೂ ಅಲ್ಲದೇ, ಋತುಚಕ್ರ ನಿಂತಿರುವುದು ಈಕೆಯ ಅಮ್ಮನಿಗೆ ತಿಳಿದಾಗಲೇ ವಿಷಯ ಗೊತ್ತಾದದ್ದು! ಆಸ್ಪತ್ರೆಗೆ ಹೋದಾಗ ಗರ್ಭಿಣಿ ಎನ್ನುವುದನ್ನು ತಿಳಿದು ತಮ್ಮ ತಾಯಿ ಗರ್ಭಪಾತ (Abortion) ಮಾಡಿಸಿದ್ದರು ಎಂದು ಶಕೀಲಾ ಹೇಳಿಕೊಂಡಿದ್ದಾರೆ. ಅಂದು ತಪ್ಪು ಮಾಡಿದರೂ ನನ್ನಮ್ಮ ನನಗೆ ಏನೂ ಹೇಳಲಿಲ್ಲ. ಆ ಸಮಯದಲ್ಲಿ ಇವೆಲ್ಲಾ ಹೇಳುವುದು ಸರಿಯಲ್ಲ ಎಂದು ಅಮ್ಮನಿಗೆ ಅನ್ನಿಸಿತ್ತೋ ಗೊತ್ತಿಲ್ಲ ಎಂದಿರುವ ನಟಿ, ಇನ್ನೂ ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅದೇನೆಂದರೆ, ತಮ್ಮನ್ನು ಗರ್ಭಿಣಿ ಮಾಡಿದ್ದ ಆ ಹುಡುಗನ ಜೊತೆ ತಾವು ಇಂದಿಗೂ ಟಚ್ನಲ್ಲಿ ಇದ್ದೇವೆ ಎನ್ನುವ ಸತ್ಯ. ಆ ಹುಡುಗನ ಹೆಸರು ರಿಚರ್ಡ್ ಪಾಲ್ ಎಂದಿರೋ ನಟಿ ಹೆಚ್ಚಿಗೆ ಏನೂ ಹೇಳಲಿಲ್ಲ. ಇದೀಗ ತೆಲುಗು ಬಿಗ್ಬಾಸ್ನಿಂದ ನಟಿ ಎಲಿಮಿನೇಟ್ ಆಗ್ತಾರಾ ನೋಡಬೇಕಿದೆ.
ಚಿಕ್ಕ ಡ್ರೆಸ್ ಹಾಕ್ಕೋಳದ್ಯಾಕೆ- ಈ ಪರಿ ಎಳೆಯೋದ್ಯಾಕೆ? ಇಬ್ರಾಹಿಂ ಒಪ್ಪುತ್ತಾನಾ? ನಟಿ ಪಾಲಕ್ ಸಕತ್ ಟ್ರೋಲ್