ಹೆಸರು-ಹಣ ಮಾಡ್ಬೇಕು ಅಂತ ಡಾನ್ ಆಗೋ ಪ್ಲ್ಯಾನ್?; ಅಸಲಿ ಕನಸು ಬಿಚ್ಚಿಟ್ಟ ಮಂಜು ಮಾಸ್ಟರ್

By Vaishnavi Chandrashekar  |  First Published Oct 3, 2023, 9:55 AM IST

ಚಾಕೋಲೆಟ್ ಬಾಯ್ ಮಂಜು ಮಾಸ್ಟರ್ ಬಾಲ್ಯದಲ್ಲಿ ಡಾನ್ ಆಗಬೇಕು ಎಂದು ಕನಸು ಕಂಡಿದ್ದು ಯಾಕೆ?


ಜೀ ಕನ್ನಡ ವಾಹಿನಿಯ ಜನಪ್ರಿಯ ಡ್ಯಾನ್ಸ್‌ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಮೆಂಟರ್ ಆಗಿ ಹೆಸರು ಮಾಡಿರುವ ಮಂಜು ಮಾಸ್ಟರ್ ತಮ್ಮ ಪತ್ನಿ ಅನುಷಾ ಜೊತೆ ಜೋಡಿ ನಂ 1 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಓಪನಿಂಗ್ ಎಪಿಸೋಡ್‌ನಿಂದಲೂ ಜನರ ಗಮನ ಸೆಳೆದಿರುವ ಮಂಜು ಮಾಸ್ಟರ್ ಅನುಷಾ ಜೋಡಿ ಎರಡನೇ ಎಪಿಸೋಡ್‌ನಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಅನುಷಾ ಪೋಷಕರು ವೇದಿಕೆ ಮೇಲೆ ಆಗಮಿಸಿ ಮಗಳನ್ನು ಮತ್ತೊಮ್ಮೆ ಸ್ಕೂಲ್ ಡ್ರೆಸ್‌ನಲ್ಲಿ ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಮಂಜು ಮಾಸ್ಟರ್ ವೇದಿಕೆ ಮೇಲಿದ್ದ ಲಾಂಗ್ ನೋಡಿ ಶಾಕ್ ಅಗಿ ಸ್ಟೈಲ್ ಆಗಿ ಎತ್ತಿಕೊಳ್ಳುತ್ತಾರೆ. ಏಕೆಂದರೆ ಅದು ಅವರ ಬಾಲ್ಯದ ಕನಸಂತೆ. 

Tap to resize

Latest Videos

ಸಂಜು ಬಸಯ್ಯನನ್ನು ಕೊಂದು ಸಾಯಿಸಿಬಿಡು, ಉಪಯೋಗವಿಲ್ಲ: ಜನರು ಮಾತಿಗೆ ಕಣ್ಣೀರಿಟ್ಟ ತಾಯಿ

ಹೌದು! ಹೆಸರು ಮಾಡಬೇಕು ಎಂದು ತುಂಬಾ ಆಸೆ ಕಂಡ ಮಂಜು ಮಾಸ್ಟರ್ ಡಾನ್ ಆಗಲು ಪ್ಲ್ಯಾನ್ ಮಾಡಿದ್ದರಂತೆ. ಎಲ್ಲಿ ಏನೇ ಕಿರಿಕ್ ಆದರೂ ಯಾರೂ ಪರಿಚಯ ಇಲ್ಲ ಅಂದರೂ ಹೋಗಿ ವಿಚಾರಿಸಿಕೊಳ್ಳುತ್ತಿದ್ದರಂತೆ. ಕಿರಿಕ್ ಮಾಡುತ್ತಿದ್ದರೇ ಸುಮ್ಮನೆ ಎಂಟ್ರಿ ಕೊಡುವುದು ಇವರ ಕೆಲಸ ಆಗಿತ್ತು. ಸ್ಕೂಲ್‌ನಲ್ಲಿ ಕಾರ್ಯಕ್ರಮ ಇದ್ದ ಕಾರಣ ಹೀಗೆ ಒಬ್ಬ ಸ್ನೇಹಿತ ಡ್ಯಾನ್ಸ್ ಮಾಡೋಣ ಎಂದು ಸಲಹೆ ನೀಡುತ್ತಾನಂತೆ. ಆಗಲ್ಲ ನಾನು ಡಾನ್ ಡ್ಯಾನ್ಸರ್ ಅಲ್ಲ ಎನ್ನುತ್ತಾರೆ. ಆದರೂ ಒತ್ತಾಯಕ್ಕೆ ಒಪ್ಪಿಕೊಂಡು ಡ್ಯಾನ್ಸ್ ಮಾಡುತ್ತಾರಂತೆ. ಡ್ಯಾನ್ಸ್ ಮುಗಿದ ಮೇಲೆ ಪ್ರತಿಯೊಬ್ಬರು ಮಂಜುನ ಗುರುತಿಸಲು ಆರಂಭಿಸುತ್ತಾರೆ ಅಲ್ಲಿದೆ ಕೊಂಚ ಫೇಮ್ ಗಳಿಸುತ್ತಾರೆ. 

ಮದುವೆ ನಂತರ ನಡೆಯಿತು ದೊಡ್ಡ ದುರಂತ; ಕಣ್ಣೀರಿಟ್ಟ ಕಿರುತೆರೆ ನಟಿ ಸುನೇತ್ರಾ

ಸ್ಕೂಲ್‌ ಕೊನೆಯಲ್ಲಿ ಸ್ಲ್ಯಾಮ್ ಬುಕ್ ಬರೆಯುವುದು ಅಭ್ಯಾಸ...ಭವಿಷ್ಯದಲ್ಲಿ ಏನಾಗಬೇಕು ಎಂದು ಇದ್ದ ಪ್ರಶ್ನೆಗೆ ಮಂಜು ಡಾನ್ ಎಂದು ಬರೆಯುತ್ತಿದ್ದರಂತೆ. ಟೀಚರ್ ಒಬ್ಬರು ಇದನ್ನು ಗಮನಿಸಿ ಕರೆದು ಸರಿಯಾಗಿ ಜೀವನ ಪಾಠ ಹೇಳಿದ್ದಾರೆ...ಡಾನ್ ಅನ್ನೋದನ್ನು ಅಳಿಸುವುದಕ್ಕೆ ಇಷ್ಟವಿಲ್ಲದ ಕಾರಣ Donನ Dancer ಆಗಿ ಬರೆದಿದ್ದಾರೆ. ನನ್ನನ್ನು ಡಾನ್ ಬಿಟ್ಟರೆ ಡ್ಯಾನ್ಸರ್ ಎಂದು ಜನರು ಗುರುತಿಸಿರುವುದು ನಾನು ಡ್ಯಾನ್ಸರ್ ಆಗಬೇಕು ಎಂದು ಅಲ್ಲಿ ನಿರ್ಧಾರ ಮಾಡಿದ್ದರಂತೆ. 

 

click me!