ಮಂಡಿಯೂರಿ ಗುಲಾಬಿ ಕೊಟ್ಟು ಅಮೃತಾಗೆ ಧನಂಜಯ್‌ಗೆ ಪ್ರಪೋಸ್!

By Suvarna News  |  First Published Jan 29, 2022, 2:07 PM IST

ಗೋಲ್ಡನ್ ಗ್ಯಾಂಗ್ ವೇದಿಕೆಯಲ್ಲಿ Badva Rascal ತಂಡ. ಡಾಲಿ ಜೀವನದ ಪಯಣದಲ್ಲಿದ್ದಾರೆ ಈ ಸ್ನೇಹಿತರು...


ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ (Golden Gang) ಕಾರ್ಯಕ್ರಮದಲ್ಲಿ ಈ ವಾರ ಡಾಲಿ ಧನಂಜಯ್ (Dolly Dhananjay) ಆ್ಯಂಡ್ ಟೀಂ ಭಾಗಿಯಾಗಲಿದೆ. ಬಡವರಾಸ್ಕಲ್ (Badavarascal) ತಂಡದ ಜೊತೆಗೆ ಡಾಲಿ ಆಪ್ತರ ಸ್ನೇಹಿತರು ಮತ್ತು ಅವರ ಪೋಷಕರು ಹಾಜರಿರುತ್ತಾರೆ. ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಅಮೃತಾಗೆ ಡಾಲಿ ಲವ್ ಪ್ರಪೋಸ್ ಮಾಡಿರುವುದು ವೀಕ್ಷಕರ ಗಮನ ಸೆಳೆದಿದೆ. 

ಪಾಪ್‌ ಕಾರ್ನ್‌ ಮಂಕಿ ಟೈಗರ್ (Pop corn monkey tiger) ಸಿನಿಮಾ ಮೂಲಕ ಅಮೃತಾ ಐಯ್ಯಂಗಾರ್ (Amrutha Iyengar) ಮತ್ತು ಧನಂಜಯ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದಾದ ಮೇಲೆ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು ಎಲ್ಲೇ ಹೋದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಜೋಡಿ ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಸಮಯದಲ್ಲೇ ಇವರು ಮತ್ತೆ ಜೋಡಿಯಾಗಿ ಬಡವರಾಸ್ಕಲ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಹೀಗಾಗಿ ಇವರ ನಡುವೆ ನಿಜಕ್ಕೂ ಏನೋ ನಡೀತಿದೆ, ಎಂದು ಈಗ ಇಡೀ ಕಾರ್ನಾಟಕ ಮಾತನಾಡಿಕೊಳ್ಳುತ್ತಿದೆ. ಅದಕ್ಕೆ ಸರಿಯಾದ ಸಮಯಲ್ಲಿ ಈಗ ಗೋಲ್ಡನ್ ಗ್ಯಾಂಗ್‌ನಲ್ಲಿ ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. 

ದಿನ ಬೆಳಗ್ಗೆ Yogaraj Bhatರನ್ನು ಫಾಲೋ ಮಾಡುತ್ತಿದ್ದ ಹುಚ್ಚ; ಏನಿದು ಸ್ಟೋರಿ?

Tap to resize

Latest Videos

undefined

ಹೌದು! ಬಡವರಾಸ್ಕಲ್ ಚಿತ್ರದ 'ಮಂಡಿಯೂರಿ ಬೇಡುವೆನು ಹೃದಯ ಕಾಲಡಿ ಇಡುವೆನು, ತೆಗೆದು ಬಚ್ಚಿಟ್ಟುಕೋ, ಇಲ್ಲಿ ತುಳಿದು ಕಾಲ್ ತೊಳೆದುಕೋ ಬೇಡ, ಈಗಲೇ ಮಾಡು ಮೌನ್ ಮುರಿದು ತೀರ್ಮಾನ', ಎಂಬ ಹಾಡನ್ನು ಹಾಡಿ ನಟಿ ಅಮೃತಾಗೆ ಡಾಲಿ ಮಂಡಿಯೂರಿ, ಗುಲಾಬಿ ಹಿಡಿದು ಪ್ರಪೋಸ್ (Proposal) ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಬಡವರಾಸ್ಕಲ್ ಚಿತ್ರದ ಉಡುಪಿ ಹೋಟೆಲ್ ಹಾಡಿನಲ್ಲಿ ಇವರಿಬ್ಬರ ಸಣ್ಣ ಪುಟ್ಟ ರೊಮ್ಯಾನ್ಸ್ ನೋಡಿ ನೀವೇ ನಮ್ಮ ಡಾಲಿಯನ್ನು ಮದುವೆ ಆಗಬೇಕು ಎಂದು ಕೆಲವರು ಡಿಮ್ಯಾಂಡ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಈ ಕಾರ್ಯಕ್ರಮದಲ್ಲಿ ವಸಿಷ್ಠ ಸಿಂಹ (Vasistha Simha) ಕೂಡ ಭಾಗಿಯಾಗಿದ್ದರು. ಅವರು ತಾಯಿಯ ತಾಳಿ ಹಿಡಿದುಕೊಂಡು, ತಂದೆ ಜೊತೆ ಕುಳಿತು ಭಾವುಕರಾಗಿದ್ದಾರೆ. ಮಗನೇ ಆದರೆ ನಾವು ಸ್ನೇಹಿತರಿಗಿಂತ ಹೆಚ್ಚಾಗಿ ಇರ್ತಿವಿ ಎಂದು ವಸಿಷ್ಠ ಅವರ ತಂದೆ ಹೇಳಿದ್ದಾರೆ. 'ನನಗೆ ಏನೇ ಬೇಕಿದ್ದರೂ ಅದಕ್ಕೆ ಅಮ್ಮನನ್ನೇ (Mother) ಕೇಳುತ್ತಿದ್ದೆ. ನಾನು 6ನೇ ಕ್ಲಾಸ್‌ನಲ್ಲಿ ಇದ್ದಾಗ ಏನೋ ತಲೆ ತಿರುಗಿ ಬೀಳುತ್ತಾರೆ. ನಾನು ಮತ್ತೆ ನೋಡಿದ್ದು ವೆಂಟಿಲೇಟರ್‌ನಲ್ಲಿ (Ventilator). ಅದು ಬಾಯಿಗೆ ನೀರು ಬಿಡುವಾಗ. ವೆಂಟಿಲೇಟರ್‌ನಲ್ಲಿ ಇದ್ದಾಗ ಅವರಿಗೆ 14 ಸಲ ಹಾರ್ಟ್‌ ಅಟ್ಯಾಕ್ (Heart attack) ಆಗುತ್ತೆ. ಕಣ್ಣಲ್ಲಿ ನೀರು ಬಂತು. ಅವತ್ತು ಹೇಳಿದ್ದ ಅಮ್ಮ ನನ್ನ ಜೊತೆನೇ ಇದ್ದಾರೆಂದು ಅಪ್ಪ ಅಂದಿದ್ದರಂತೆ. ಅವತ್ತು ಅತ್ತಿದ್ದೇ ಲಾಸ್ಟ್‌,' ಎಂದು ಮಾತನಾಡುತ್ತ ವಸಿಷ್ಠ ತಾಯಿ ತಾಳಿಯನ್ನು ಹಿಡಿದುಕೊಂಡು ನಾನು ಇರುವವರೆಗೂ ನನ್ನ ಜೀವನ ಪೂರ್ತಿ ಇದು ಇರುತ್ತದೆ,' ಎಂದಿದ್ದಾರೆ.

ಮೊಸಳೆ ಪಕ್ಕದಲ್ಲಿದ್ದರೂ ಚಿತ್ರೀಕರಣ; Golden Gangನಲ್ಲಿ ಸತ್ಯ ರಿವೀಲ್ ಮಾಡಿದ ನಿರ್ದೇಶಕರು!

ಧನಂಜಯ್ ತಾಯಿ ಕೂಡ ಆಗಮಿಸಿದ್ದರು 'ಧನಂಜಯ್ ಹುಟ್ಟಿದ್ದೇ ಪವಾಡ. ನಾವು ಅಬಾಶನ್ ಮಾಡಿಸೋಣ ಅಂತ ಹೋಗಿದ್ವಿ. ಡಾಕ್ಟರ್ ಹಿಂದಕ್ಕೆ ಕಳುಹಿಸಿದ್ದರು,' ಎಂದು ಅವರ ತಾಯಿ ಮಾತನಾಡಿದ್ದಾರೆ. ಆರ್ಟಿಸ್ಟ್‌ ಬದಲು ಅವರು ಡಾಲಿ ಹಿರಿಯ ಸಹೋದರಿ ಚಿತ್ರವನ್ನು ಬಿಡಿಸಿ ಫ್ರೇಮ್ ಮಾಡಿ ಕೊಟ್ಟಿದ್ದಾರೆ. ಭಾವುಕರಾದ ಧನು 'ಇದು ನಮ್ಮ ಅಕ್ಕ. ನಾನು ಇದನ್ನು expect ಮಾಡಿರಲಿಲ್ಲ. ಚಿಕ್ಕ ಹುಡುಗಿ ಇದ್ದಾಗ ಪೊಲಿಯೋ ಅಟ್ಯಾಕ್ ಅಗಿ ಕಣ್ಣು ಕಾಣಿಸುವುದಿಲ್ಲ. ಆದರೂ ಯಾವಗಲೂ ನಗುತ್ತಲೇ ಇರತ್ತಾಳೆ. ನಮ್ಮ ಮನೆಯಲ್ಲಿರುವ ಮಗು ಅವಳು,' ಎಂದು ಹೇಳಿದ್ದಾರೆ.

click me!