
ಬೆಂಗಳೂರು(ಜ.28): ಖಾಸಗಿ ವಾಹಿನಿಯ ಗಟ್ಟಿಮೇಳ(Gattimela) ಧಾರವಾಹಿ ಖ್ಯಾತಿಯ ನಟ ರಕ್ಷ್ ಮತ್ತು ಆತನ ಸ್ನೇಹಿತರು ಉತ್ತರಹಳ್ಳಿ ರಸ್ತೆಯ ಹೋಟೆಲ್‌ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿ ರಂಪಾಟ ಮಾಡಿರುವ ಆರೋಪ ಕೇಳಿ ಬಂದಿದೆ.ನೈಟ್ ಕರ್ಫ್ಯೂ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಆರೋಪದಡಿ ನಟ ರಕ್ಷ್ ಸೇರಿದಂತೆ ರಂಜನ್, ರವಿಚಂದ್ರನ್, ಅನುಷಾ, ಅಭಿಷೇಕ್, ಶರಣ್ಯ, ರಾಕೇಶ್ ಕುಮಾರ್ ಎಂಬುವರ ವಿರುದ್ಧ ಕೆಂಗೇರಿ ಠಾಣೆ ಪೊಲೀಸರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿ ತಡರಾತ್ರಿವರೆಗೂ ಪಾರ್ಟಿಗೆ ಅವಕಾಶ ನೀಡಿದ ಆರೋಪದಡಿ ಜಿಂಜರ್ ಲೇಕ್‌ವ್ಯೂವ್ ಹೋಟೆಲ್ ಮಾಲೀಕ ಹಾಗೂ ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಟ ರಕ್ಷ್ ಹಾಗೂ ಆತನ ಆರು ಮಂದಿ ಸ್ನೇಹಿತರು ಇಲ್ಲಿನ ಜಿಂಜರ್ ಲೇಕ್‌ವ್ಯೂವ್ (Ginger Lakeview) ಹೋಟೆಲ್‌ನಲ್ಲಿ ತಡರಾತ್ರಿ 1.30ರವರೆಗೂ ಪಾರ್ಟಿ ಮಾಡಿ ಜೋರಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ರಕ್ಷ್ ಮತ್ತು ಆತನ ಸ್ನೇಹಿತರನ್ನು ಪ್ರಶ್ನಿಸಿದಾಗ, ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ರಕ್ಷ್ ಹಾಗೂ ಆತನ ಸ್ನೇಹಿತರು (Friends) ಮದ್ಯ ಅಮಲಿನಲ್ಲಿ ಹೋಟೆಲ್‌ನಲ್ಲಿ ರಂಪಾಟ ಮಾಡುತ್ತಿದ್ದರು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿಯಾಗಿದ್ದು, ಬಳಿಕ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಆರೋಪಿಗಳು ಮದ್ಯ ಸೇವಿಸಿರುವ ಬಗ್ಗೆ ಮಾಹಿತಿ ಇಲ್ಲ. ಅವರು ಊಟಕ್ಕೆ ಬಂದಿದ್ದಾಗಿ ತಿಳಿದು ಬಂದಿದೆ. ಇನ್ನು ಹೊಯ್ಸಳ ಪೊಲೀಸರೊಂದಿಗೆ (Hoysala Police) ಯಾವುದೇ ಮಾತಿನ ಚಕಮಕಿ ನಡೆದಿಲ್ಲ. Night Curfew ಉಲ್ಲಂಘಿಸಿ ಹೋಟೆಲ್ ಬಂದಿದ್ದಕ್ಕಾಗಿ Raksh ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾರ್ಟಿಗೆ ಅವಕಾಶ ನೀಡಿದ ಹೋಟೆಲ್‌ನ ಮಾಲೀಕ ಹಾಗೂ ಮ್ಯಾನೇಜರ್ (Manager) ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.
Anoop Sagar Cinema Journey: ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯುತ್ತಿರುವ ನಿರ್ದೇಶಕ ಅನೂಪ್ ಸಾಗರ್
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಸೀರಿಯಲ್‌ಗೆ ಅಪಾರ ಟಿಆರ್‌ಪಿ ಇದೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆಯಲ್ಲಿ ಮಹೇಶ ಪಾತ್ರ ಮಾಡಿದ್ದ ರಕ್ಷ್, ಈ ಧಾರಾವಾಹಿಯ ಪ್ರಮುಖ ನಟ. ಮಧ್ಯಮ ವರ್ಗದ ನಾಲ್ಕು ಹೆಣ್ಣು ಮಕ್ಕಳು ಇರುವ ಸಂಸಾರ ಹಾಗೂ ಸಿರಿವಂತ ಕುಟುಂಬಕ್ಕೆ ಸೇರಿದ ಹುಡುಗನೊಂದಿಗೆ ಮದುವೆ(Wedding) ಮಾಡಿಕೊಂಡು ಹೋರಾಡುವುದು ಈ ಸೀರಿಯಲ್ ನ ಕಥಾ ಹಂದರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.