DKD: ರಾಹುಲ್- ಬೃಂದಾ ಕೈ ಸೇರಿತ್ತು ಟ್ರೋಫಿ, ಐಷಾರಾಮಿ ಮನೆ

Suvarna News   | Asianet News
Published : Oct 12, 2021, 04:59 PM IST
DKD: ರಾಹುಲ್- ಬೃಂದಾ ಕೈ ಸೇರಿತ್ತು ಟ್ರೋಫಿ, ಐಷಾರಾಮಿ ಮನೆ

ಸಾರಾಂಶ

ಫಿನಾಲೆಯಲ್ಲಿ ಭಾವುಕರಾದ ತೀರ್ಪುಗಾರರು. ವಿಜೇತರ ಕೈ ಸೇರಿತ್ತು ದೊಡ್ಡ ದೊಡ್ಡ ಸರ್ಪ್ರೈಸ್...

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ (Dance Karnataka Dance) ರಿಯಾಲಿಟಿ ಶೋ ಅಂತ್ಯವಾಗಿದೆ. ಫಿನಾಲೆ ಕಾರ್ಯಕ್ರಮವನ್ನು ವೀಕೆಂಡ್‌ನಲ್ಲಿ ಪ್ರಸಾರವಾಗಿತ್ತು, ವೇದಿಕೆ ಮೇಲಿದ್ದ ಪ್ರತಿಯೊಬ್ಬ ಗಣ್ಯರು ಕಣ್ಣೀರಿಟ್ಟಿದ್ದಾರೆ. 

ಅಕ್ಟೋಬರ್ 10ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ರಾಹುಲ್ ಎಸ್ ರಾವ್  (Rahul S Rao)ಮತ್ತು ಬೃಂದಾ ಪ್ರಭಾಕರ್ (Brunda Prabhakar) ಡಿಕೆಡಿ ಟ್ರೋಫಿ ಪಡೆದುಕೊಂಡಿದ್ದಾರೆ. Slumdog Millionaire ಚಿತ್ರದ ಜೈ ಹೋ ಚಿತ್ರದ ಹಾಡಿಗೆ ಇಡೀ ತಂಡ ಹೆಜ್ಜೆ ಹಾಕಿದ್ದಾರೆ. ಭರತನಾಟ್ಯ (Bharatanatyam), ನವಿಲು ನೃತ್ಯ (Peacock dance), ಹುಲಿ ಡ್ಯಾನ್ಸ್‌ (Tiger Dance) ಎಲ್ಲವನ್ನೂ ವೇದಿಕೆ ಮೇಲೆ ತೋರಿಸಿದ್ದಾರೆ. ಈ ಹಾಡಿಗೆ ಬೇರೆ ರೀತಿಯ ಮ್ಯೂಸಿಕ್ ಮಿಕ್ಸ್‌ ಮಾಡಿದ್ದು ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ (Arjun Janya) ಅವರ ಮನಸ್ಸು ಗೆದ್ದಿದ್ದಾರೆ. 

DKD ವೇದಿಯಲ್ಲಿ ಕ್ರೇಜಿ ಕ್ವೀನ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್!

ಒಟ್ಟು ಏಳು ತಂಡಗಳು ಫಿನಾಲೆ ಹಂತ ತಲುಪಿದ್ದರು. ಪ್ರತಿಯೊಂದು ತಂಡವೂ ವಿಭಿನ್ನವಾಗಿ ಡ್ಯಾನ್ಸ್ ಮಾಡಿದ್ದಾರೆ. ದೊಡ್ಡ ವೇದಿಕೆಯ ಮೇಲೆ ಈ ರೀತಿ ಡ್ಯಾನ್ಸ್‌ ನೋಡಲು ಮೈ ಜುಮ್ ಎನಿಸುತ್ತದೆ ಎಂದು ವಿಜಯ್ ರಾಘವೇಂದ್ರ (Vijay Raghavendra) ಹೇಳಿದ್ದಾರೆ. ಈ ಹಾಡು ಕೇಳಿದರೆ ಇಂಡಿಯನ್ ಆಗಿರುವುದಕ್ಕೆ ಹೆಮ್ಮೆ ಆಗುತ್ತದೆ ಎಂದಿದ್ದಾರೆ.  ಕಾರ್ಯಕ್ರಮ ಆರಂಭದಿಂದಲೂ ಬೃಂದಾ ಮತ್ತು ರಾಹುಲ್ ಅದ್ಭುತವಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರತಿವಾರವೂ ವಿಭಿನ್ನ ಡ್ಯಾನ್ಸ್ ಮಾಡಿದ್ದಾರೆ. ಟ್ರೋಫಿ ಅವರ ಕೈ ಸೇರುವುದರಲ್ಲಿ ಅನುಮಾವಿಲ್ಲ ಎಂದು ನಟಿ ರಕ್ಷಿತಾ ಪ್ರೇಮ್ (Rakshita Prem) ಹೇಳಿದ್ದಾರೆ. 

'DKD' ಸೆಟ್ಟಲ್ಲಿ ಪವರ್‌; 'ಅಪ್ಪು' ರೀಕ್ರಿಯೇಟ್‌ ಮಾಡಿದ ಪುನೀತ್, ರಕ್ಷಿತಾ!

'ನವಿಲು ಡ್ಯಾನ್ಸ್ ಮಾಡಿದವರ ಮೇಕಪ್ (Makeup) ಸೂಪರ್ ಆಗಿತ್ತು. ಇದೊಂದು ಪವರ್‌ಪ್ಯಾಕ್ ಸ್ಟಂಟ್‌ ಕೂಡಿತ್ತು. ವೇದಿಕೆ ಮೇಲೆ ಬಳಸಿರುವ ಪ್ರತಿಯೊಂದು ಪ್ರಾರ್ಪಟಿಯೂ ಚೆನ್ನಾಗಿದೆ' ಎಂದು ಡ್ಯಾನ್ಸ್ ಮಾಸ್ಟರ್ ಚಿನ್ನಿಪ್ರಕಾಶ್ (Chinni Prakash) ಹೇಳಿದ್ದಾರೆ. ಡಿಕೆಡಿ ವಿನರ್‌ಗಳಿಗೆ ಟ್ರೋಫಿ, ರೆಡಿ ಆಗಿರುವ ಅಪಾರ್ಟ್‌ಮೆಂಟ್ ಮತ್ತು 5 ಲಕ್ಷ ರೂ ಹಣ ನೀಡಲಾಗಿತ್ತು. ಇಬ್ಬರೂ ಸ್ಪರ್ಧಿಗಳಿಗೂ ಬೇರೆ ಬೇರೆ ಅಪಾರ್ಟ್‌ಮೆಂಟ್‌ ನೀಡಲಾಗಿದೆ.  ಎರಡನೇ ಸ್ಥಾನ ಪಡೆದು ವಿಕ್ರಮ್ ಮತ್ತು ಶಿಫಾಲಿಗೆ  ಟ್ರೋಫಿ ಮತ್ತು 10 ಲಕ್ಷ ಹಣ ನೀಡಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ