
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ (Gattimela) ಧಾರಾವಾಹಿ ಕಳೆದ ಎರಡು ಮೂರು ವಾರಗಳಿಂದ ಟಿಆರ್‌ಪಿಯಲ್ಲಿ (TRP) ಮೊದಲ ಸ್ಥಾನ ಪಡೆದುಕೊಂಡಿದೆ. ಅಮೂಲ್ಯ ವೇದಾಂತ್ ಮದುವೆ ತಯಾರಿ ಶುರುವಾಗಿದೆ. ಆದರೆ ಅಷ್ಟರಲ್ಲಿ ಅಮೂಲ್ಯ ಕಾಣಿಯಾಗಿರುವುದಕ್ಕೆ ವೀಕ್ಷಕರು ಆತಂಕ ಪಟ್ಟಿದ್ದಾರೆ.
ಇನ್ನು ತಾಯಿ ಸುಹಾಸಿನಿ (Suhasini) ಪಾತ್ರದಲ್ಲಿ ಮಿಂಚುತ್ತಿದ್ದ ಸ್ವಾತಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಸ್ವತಃ ಸ್ವಾತಿ (Swathi HV) ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಖಚಿತ ಪಡಿಸಿದ್ದಾರೆ. 'ಒಂದು ಆರಂಭ ಅಂದ್ಮೇಲೆ ಒಂದು ಕೊನೆ ಇರ್ಲೇ ಬೇಕು. ಹೌದು ನಾನು ಗಟ್ಟಿಮೇಳ ಸೀರಿಯಲ್‌ನಲ್ಲಿ ಸುಹಾಸಿನಿ ಪಾತ್ರದಲ್ಲಿ ಇನ್ನು ಕಾಣಿಸಿಕೊಳ್ಳುವುದಿಲ್ಲ. ನನಗೂ ತುಂಬಾನೇ ಬೇಸರವಿದೆ. ಇಡೀ ತಂಡವನ್ನು ನಾನು ಮಿಸ್ ಮಾಡಿಕೊಳ್ಳುವೆ. ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಅನಿವಾರ್ಯ ಕಾರಣದಿಂದ ನಾನು ಹೊರ ಬರಬೇಕಾಗಿದೆ. ಸುಹಾಸಿನಿ ಪಾತ್ರದಲ್ಲಿರುವುದಿಲ್ಲ. ಆದರೆ ಗಟ್ಟಿಮೇಳ ನನಗೆ ಫ್ಯಾಮಿಲಿ ಆಗಿರುತ್ತದೆ. ನನ್ನ ಎಲ್ಲಾ ಅಭಿಮಾನಿಗಳ (Fans) ಸಪೂರ್ಟ್‌ನಿಂದ ನಾನು ಇಲ್ಲಿಗೆ ಬಂದಿದ್ದೀನಿ,' ಎಂದು ಮಾತನಾಡಿದ್ದಾರೆ.
ವೇದಾಂತ್ (Vedanth) ತಾಯಿ ಸುಹಾಸಿನಿ ಪಾತ್ರವು ಧಾರಾವಾಹಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಸ್ಟ್ ಅಮ್ಮ ಎಂದು ಸಾಬೀತು ಮಾಡಿಕೊಂಡಿರುವ ಸುಹಾಸಿನಿ ಸೊಸೆಯಂದಿರಿಗೆ ವಿಲನ್ ಆಗಿರುತ್ತಾಳೆ. ಸುಹಾಸಿನಿಯ ಎರಡು ಮುಖಗಳು ಯಾರಿಗೊ ಗೊತ್ತಾಗುವುದಿಲ್ಲ. ಸುಹಾಸಿಯ ನಾಟಕವನ್ನು ಬಹಿರಂಗ ಮಾಡಬೇಕು ಎನ್ನುತ್ತಿದ್ದ ಅಮೂಲ್ಯ (Amulya) ಈಗ ಕಿಡ್ನಪ್ ಆಗಿದ್ದಾರೆ. ಸುಹಾಸಿನಿಯೇ ಮಾಡಿಸಿರುವುದು ಎಂದು ಕೆಲವರಿಗೆ ಅನುಮಾನ ಬಂದು, ಹುಡುಕಾಟ ಶುರು ಮಾಡಿದ್ದಾರೆ.
ಈ ಹಿಂದೆ ಸುಹಾಸಿನಿ ಪಾತ್ರದಲ್ಲಿ ರುಥು (Ruthu) ಮತ್ತು ಅರ್ಚನಾ ಕಾಣಿಸಿಕೊಂಡಿದ್ದರು. ಸ್ವಾತಿಯವರು ಬದಲಾದ ಪಾತ್ರದಲ್ಲಿ ಮೂರನೇ ಅವರು. ಸುಹಾಸಿನಿ ಪಾತ್ರಕ್ಕೆ ಜೀವ ತುಂಬುವ ನಾಲ್ಕನೇ ವ್ಯಕ್ತಿ ಯಾರು ಅಂತ ಕಾದು ನೋಡಬೇಕಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅರ್ಚನಾ (Archana) ಅವರೇ ಕಮ್‌ಬ್ಯಾಕ್ ಮಾಡಲಿದ್ದಾರೆ.
ಸದ್ಯ ಸ್ವಾತಿ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನಿಕಾ ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.