
ಸದಾ ಟ್ರೆಂಡ್‌ನಲ್ಲಿರುವ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಕಲರ್ಸ್ ಕನ್ನಡ (Color Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಲ್ ಕಪಲ್‌ಗಳ ರಿಯಾಲಿಟಿ ಶೋ ರಾಜಾ ರಾಣಿಯಲ್ಲಿ (Raja Rani) ಸ್ಪರ್ಧಿಸುತ್ತಿದ್ದಾರೆ. ಟಾಸ್ಕ್‌ನಿಂದ ಮಾತ್ರವಲ್ಲದೆ ಇಬ್ಬರೂ ಮಾಡುವ ಸಣ್ಣ ಪುಟ್ಟ ತಮಾಷೆಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಈ ದಸರಾ ಹಬ್ಬದ (Dasara Habba) ಪ್ರಯುಕ್ತ ಪ್ರಸಾರವಾದ ಎಪಿಸೋಡ್‌ನಲ್ಲಿ ನಿವೇದಿತಾ ಗೌಡ ಮಾಡಿದ ಎಡವಟ್ಟಿನಿಂದ ಚಂದನ್ ಕಿರುಚಾಡಿದ್ದಾರೆ.
ಹೌದು! ನಿವೇದಿತಾ ಗೌಡರನ್ನು ಕೈಗೆ ಹಗ್ಗ ಕಟ್ಟಿ ಒಂದು ಕುರ್ಚಿ (Chair) ಮೇಲೆ ಕುಳಿಸಿರುತ್ತಾರೆ. ಚಂದನ್ ಶೆಟ್ಟಿ ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಕಾರ್ನರ್‌ನಿಂದ ಮತ್ತೊಂದು ಕಾರ್ನರ್‌ಗೆ ನಡೆದುಕೊಂಡು ಹೋಗಿ ಟೇಬಲ್ ಮೇಲಿರುವ 5 ತಿನಿಸುಗಳನ್ನು ತಂದು ನಿವೇದಿತಾಗೆ ತಿನ್ನಿಸಬೇಕು. ಚಂದನ್ ನಡೆದುಕೊಂಡು ಬರುವ ಹಾದಿ ಸುಲಭವಾಗಿರುವುದಿಲ್ಲ ಕೋಲು ದಾಟಬೇಕು, ಮೆಟ್ಟಿಲು ಹತ್ತಬೇಕು ಆನಂತರ ನಿವಿಗೆ ತಿನ್ನಿಸಿ ಕೆನ್ನೆಗೆ ಒಂದು ಮುತ್ತು (Kiss)ಕೊಡಬೇಕು.
ಟೇಬಲ್ ಮೇಲಿದ್ದ ಸಮೋಸಾ (Samosa), ಡೋನಟ್ (Donut) ಮತ್ತು ಜಿಲೇಬಿಯನ್ನು (Jalebi) ಚಂದನ್ ತಿನ್ನಿಸುತ್ತಾರೆ. ಜಿಲೇಬಿ ತಿನ್ನುವ ಅವಸರದಲ್ಲಿ ನಿವೇದಿತಾ ಚಂದನ್ ಕೈ ಬೆರಳು ಕಚ್ಚಿಬಿಡುತ್ತಾರೆ. ನೋವಿನಿಂದ ಚಂದನ್ ವೇದಿಕೆ ಮೇಲೆ ಜೋರಾಗಿ ಕೂಗಾಡುತ್ತಾರೆ. ಟಾಸ್ಕ್‌ನ ಅರ್ಧಕ್ಕೆ ನಿಲ್ಲಿಸಬಾರದು ಎಂದು ಮುಂದುವರೆಸುತ್ತಾರೆ. ಚಂದನ್ ಪಟ್ಟ ಕಷ್ಟ ನೋಡಿ ನಟಿ ತಾರಾ ಅನುರಾಧ (Tara Anuradha) ಮತ್ತು ಸೃಜನ್ ಲೋಕೇಶ್ (Srujan Lokesh) ಅಯ್ಯೋ ಎನ್ನುತ್ತಾರೆ. ಟಾಸ್ಕ್ ಮುಗಿದ ನಂತರ ಚಂದನ್ ನೋವನ್ನು ಹೇಳಿಕೊಳ್ಳುತ್ತಾರೆ. 'ನಿವಿಗೆ ಜಿಲೇಬಿ ಅಂದ್ರೆ ತುಂಬಾನೇ ಇಷ್ಟ ಅದಿಕ್ಕೆ ಅದನ್ನೆ ಮೊದಲು ತರಲು ಹೇಳಿದ್ದಾಳೆ. ಬೇಗ ಬೇಗ ತಿನ್ನಲು ಹೋಗಿ ಎಷ್ಟು ಜೋರಾಗಿ ಬೆರಳು ಕಚ್ಚಿದ್ದಾಳೆ. ತುಂಬಾ ನೋವಾಗಿತಮ್ಮ' ಎಂದು ಚಂದನ್ ಹೇಳಿದ್ದಾರೆ.
ಚಂದನ್ ಜೋಡಿಗೆ ಎದುರು ಸ್ಪರ್ಧಿ ಆಗಿ ನಟಿ ಹರಿಣಿ (Harini) ಮತ್ತು ಶ್ರೀಕಾಂತ್ (Srikanth) ಸ್ಪರ್ಧಿಸಿದ್ದರು. ಶ್ರೀಕಾಂತ್ ಎಂಜಾಯ್ ಮಾಡಿಕೊಂಡು ಟಾಸ್ಕ್ ಮಾಡಿದ್ದರೂ ಕೇವಲ 59 ಸೆಕೆಂಡ್‌ಗಳಿಂದ ಸೋತರು. ಟಾಸ್ಕ್ ಗೆದ್ದ ಸಂತೋಷದಲ್ಲಿ ಚಂದನ್ ನಿವೇದಿತಾ ಕುಣಿದ್ದರು. ಕೆಲವು ದಿನಗಳ ಹಿಂದೆ ನಿವೇದತಾ ಅಪ್ಲೋಡ್ ಮಾಡಿದ ಹೇರ್ ಕೇರ್ (Hair Care) ವಿಡಿಯೋದಲ್ಲಿ ತಮ್ಮ ಶೂಟಿಂಗ್ ದಿನಗಳ ಬಗ್ಗೆ ಮಾತನಾಡಿದ್ದಾರೆ. ಚಂದನ್ ಬೆಳಗ್ಗೆ 9 ಗಂಟೆಗೆ ಶೂಟಿಂಗ್‌ಗೆ ಬರುತ್ತಾರೆ ಆದರೆ ನಾನು ನನ್ನ ಕೂದಲು ರೆಡಿ ಮಾಡಿಸಿಕೊಳ್ಳಲು ಬೆಳಿಗ್ಗೆ 5 ಗಂಟೆಗೆ ಹೋಗಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.