ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ!

By Suvarna News  |  First Published Jan 26, 2021, 10:20 AM IST

ನಟ, ನಿರೂಪಕಿ ಅನುಶ್ರೀ ಹುಟ್ಟು ಹಬ್ಬವನ್ನು ಜೀ ಕನ್ನಡ ಡಿಕೆಡಿ ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಅನುಶ್ರೀಗೆ ಸರ್‌ಪ್ರೈಸ್‌ ಕೊಟ್ಟ ಆ ಇಬ್ಬರು ಯಾರು ಗೊತ್ತಾ?
 


ಕಿರುತೆರೆ ಮಾಧ್ಯಮದ ಜನಪ್ರಿಯ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅಪ್ಪಟ ತುಳುನಾಡ ಪ್ರತಿಭೆ, ಮಾತಿನ ಮಲ್ಲಿ ಅನುಶ್ರೀ 33ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಆರಂಭವಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಗೊತ್ತಾ?

ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ; ಬಟ್ಟೆ ಇಷ್ಟ ಆಯ್ತು ಅಂದ್ಮೇಲೆ ಸ್ಟೆಪ್‌ ಇರ್ಲೇಬೇಕು! 

Tap to resize

Latest Videos

ಕಿಚ್ಚ ಸುದೀಪ್ ಚಿತ್ರದ 'ಅಂಜಲಿ...ಅಂಜಲಿ' ಹಾಡನ್ನು ಇಡೀ ಡಿಕೆಡಿ ಕೋರಿಯೋಗ್ರಾಫರ್‌ ತಂಡ, ಸ್ಪರ್ಧಿಗಳು ಹಾಗೂ ವೇದಿಕೆ ಬಳಿ ಇದ್ದ ವೀಕ್ಷಕರು  ಹೆಜ್ಜೆ ಹಾಕುವ ಮೂಲಕ ಅನುಶ್ರೀಗೆ ಡೆಡಿಕೆಟ್ ಮಾಡಿದ್ದಾರೆ.  ವೇದಿಕೆ ಮೇಲೆ ಬಂದ ಪ್ರತಿಯೊಬ್ಬ ಮಾಜಿ ಸ್ಪರ್ಧಿಯೂ ಗುಲಾಬಿ ಕೊಟ್ಟು ಅನುಶ್ರೀ ಜೊತೆ  ಹೆಜ್ಜೆ ಹಾಕಿದ್ದಾರೆ.  

ಡಾ.ರಾಜ್‌ಕುಮಾರ್ ಅವರ ಜನಪ್ರಿಯ ಹಾಡು 'ನಗುತಾ ನಗುತಾ ಬಾಳು ನೀನು ನೂರು ವರುಷ..' ಹಾಡನ್ನು ಪ್ರಸಾರ ಮಾಡಿ ಕೇಕ್‌ ಕಟ್ ಮಾಡಿಸಿದ್ದಾರೆ. ಈ ವೇಳೆ ಅನುಶ್ರೀಗೆ ತಾಯಿ ಹಾಗೂ ತಮ್ಮನ ಸರ್ಪ್ರೈಸ್ ನೀಡಿದ್ದರು. ಇವರ ಜೊತೆಗೆ ಮತ್ತೊಂದು ಸ್ಪೆಷಲ್ ಸರ್ಪ್ರೈಸ್‌ ಕೂಡ ಬಂದಿತ್ತು. ಅದು ಬೇರೆ ಯಾರೂ ಅಲ್ಲ ಅನುಶ್ರೀ ಸಾಕಿರುವ ಮುದ್ದು ನಾಯಿ. 

ಮುದ್ದಾಡುವಾಗಲೇ ಸಿಕ್ಕಿಬಿದ್ದ ಆ್ಯಂಕರ್ ಅನುಶ್ರೀ..!

ಅನುಶ್ರೀಗೆ ತಮ್ಮ ಪಪ್ಪಿ ಕಂಡರೆ ತುಂಬಾನೇ ಇಷ್ಟ, ವೇದಿಕೆ ಮೇಲೆ ಮುದ್ದಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಡಿಕೆಡಿ ತಂಡ ಸ್ಪೆಷಲ್ ಗಿಫ್ಟ್‌ ನೀಡಿದೆ. ಇದುವರೆಗೂ ಜೀ ವಾಹಿನಿಯಲ್ಲಿ ಅನುಶ್ರೀ ನಿರೂಪಣೆ ಮಾಡಿರುವ ಪ್ರತಿಯೊಂದೂ ಕಾರ್ಯಕ್ರಮದ ಲೋಗೋ ಹಾಕಿರುವ ಫೋಟೋ ಫ್ರೇಮ್‌ ನೀಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು, ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ.

 

click me!