ಶೀಘ್ರದಲ್ಲಿ ಬರುತ್ತಿದೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ 2': ನೀವು ರೆಡಿನಾ?

Suvarna News   | Asianet News
Published : Sep 09, 2020, 04:35 PM IST
ಶೀಘ್ರದಲ್ಲಿ ಬರುತ್ತಿದೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ 2': ನೀವು ರೆಡಿನಾ?

ಸಾರಾಂಶ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಖ್ಯಾತ ಕಾಮಿಡಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು'. ಚಾಂಪಿಯನ್‌ಶಿಪ್‌ ಸೀಸನ್‌ ಹೇಗಿರುತ್ತದೆ?  

ಕಿರುತೆರೆ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕು ನಗಿಸಲು ಸಿದ್ದವಾಗುತ್ತಿರುವ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ ಸೀಸನ್‌ 2 ಇದೇ ಸೆಪ್ಟೆಂಬರ್‌ 12ರಿಂದ ಪ್ರಸಾರವಾಗಲಿದೆ.

ಜೀ ಕನ್ನಡದಲ್ಲಿ 'ಮಹಾನಾಯಕ' ನಿಲ್ಲಿಸುವಂತೆ ರಾಘವೇಂದ್ರ ಹುಣಸೂರುಗೆ ಬೆದರಿಕೆ ಕರೆ! 

ತೀರ್ಪುಗಾರರಾದ ಜಗ್ಗೇಶ್, ರಕ್ಷಿತಾ ಹಾಗೂ ಯೋಗರಾಜ್‌ ಭಟ್ರು ಕಾಂಬಿನೇಷನ್ ಕಾಮೆಂಟ್ರಿ ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

 

ಚಾಂಪಿಯನ್‌ಶಿಪ್‌ ಹೇಗಿರುತ್ತೆ? ಯಾರೆಲ್ಲಾ ಇರುತ್ತಾರೆ?
ಈಗಾಗಲೇ ನಡೆದಿರುವ ಮೂರು ಕಾಮಿಡಿ ಸೀಸನ್‌ಗಳಲ್ಲಿ ಬೆಸ್ಟ್ ಕಂಟೆಸ್ಟೆಂಟ್‌ಗಳನ್ನು ಆಯ್ಕೆ ಮಾಡಿಕೊಂಡು ತಂಡವನ್ನಾಗಿ ರಚಿಸಲಾಗುತ್ತದೆ. ಪ್ರತಿ ತಂಡವೂ ಒಂದೊಂದು ಸ್ಕಿಟ್ ಮಾಡುವ ಮೂಲಕ ಎಲ್ಲರನ್ನೂ ಮನೋರಂಜಿಸಿ ಅಂಕಗಳನ್ನು ಪಡೆದುಕೊಳ್ಳುತ್ತಾರೆ. ಪ್ರತಿ ಸೀಸನ್‌ನಂತೆ ಈ ಸೀಸನ್‌ನಲ್ಲೂ ಮಾಸ್ಟರ್ ಆನಂದ್ ನಿರೂಪಣೆ ಮಾಡಲಿದ್ದಾರೆ. 

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಡದಿ, ಮಕ್ಕಳ 'ಜೊತೆ ಜೊತೆಯಲಿ' ಆರ್ಯವರ್ಧನ್...!

ಕಳೆದ ಸೀಸನ್‌ನಲ್ಲಿ ರಾಜೇಶ್‌ ಪೂಜಾರಿ ವಿನ್ನರ್ ಟ್ರೋಫಿ ಪಡೆದುಕೊಂಡು, 8 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದರು. ಒಟ್ಟಿನಲ್ಲಿ ಮನೆಯಲ್ಲಿ ಕೂತು ಕೂತು ಬೋರ್‌ ಆಗಿದ ಅಜ್ಜ, ಅಜ್ಜಿ, ಪುಟ್ಟ ಮಕ್ಕಳು, ಬ್ಯುಸಿ ಶೆಡ್ಯೂಲ್‌ನಲ್ಲಿ ನಾನ್‌ಸ್ಟಾಪ್ ಕೆಲಸ ಮಾಡುತ್ತಿರುವ ಅಪ್ಪ-ಅಮ್ಮಂದಿರಿಗೆ ಇದೀಗ ಫುಲ್ ಡೋಸ್ ಮನೋರಜನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!
ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!