
ಬಿಗ್ ಬಾಸ್ ಕನ್ನಡ 11 ಟ್ರೋಫಿಯನ್ನು ಹಳ್ಳಿ ಹೈದ, ಸಿಂಗರ್ ಹನುಮಂತ (Hanumantha) ಗೆದ್ದುಕೊಂಡಿರುವುದು ಗೊತ್ತೇ ಇದೆ. ಇದಕ್ಕೂ ಮೊದಲು ಅವರು ಜೀ ಕನ್ನಡದ 'ಸರಿಗಮಪ' ವೇದಿಕೆಯಲ್ಲಿ ಕಾಣಿಸಿಕೊಂಡು ಕರ್ನಾಟಕದ ತುಂಬಾ ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು. ಇದೀಗ ಜೀ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ವಿಶೇಷ ಎನ್ನಿಸುವ ಪೋಸ್ಟ್ ಹಾಕಿದೆ. ಹಾಗಿದ್ದರೆ ಅದೇನು? ಇಲ್ಲಿದೆ ನೋಡಿ ಡಿಟೇಲ್ಸ್..
ಹನುಮಂತ ಬಿಗ್ ಬಾಸ್ ಗೆದ್ದ ಬಳಿಕ ಪೋಸ್ಟ್ ಮಾಡಿರುವ ಜೀ ಕನ್ನಡ 'ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ಼ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು!..' ಎಂದು ಬರೆದು ಫೋಟೊ ಹಾಕಿ ಪೋಸ್ಟ್ ಮಾಡಿದೆ. ಈ ಮೂಲಕ, ಹನುಮಂತನ ಗೆಲುವನ್ನು ಸಂಭ್ರಮಿಸುವುದರ ಜೊತೆಜೊತೆಗೆ, 'ಹನುಮಂತ ಜೀ ಕನ್ನಡ ಬೆಳಕಿಗೆ ತಂದ ಪ್ರತಿಭೆ' ಎಂಬುದನ್ನೂ ಜಾಗತ್ತಿಗೆ ನೆನಪಿಸಿದೆ ಎನ್ನಬಹುದು.
ವಿನ್ನರ್ ಹನುಮಂತ ಬಗ್ಗೆ ರನ್ನರ್ ಅಪ್ ತ್ರಿವಿಕ್ರಮ್ ಹೇಳಿದ ಮೊದಲ ಮಾತೇನು?
ಹೌದು, ಹಳ್ಳಿ ಪ್ರತಿಭೆ ಹನುಮಂತ ಕಲರ್ಸ್ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11 ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಇಡೀ ಕರುನಾಡು ಹಳ್ಳಿ ಹೈದನ ಈ ಗೆಲುವನ್ನು ಸಂಬ್ರಮಿಸುತ್ತಿದ್ದರೆ ಇದು ಹಲವರ ಅಚ್ಚರಿ ಹಾಗೂ ಪ್ರೇರಣೆಗೂ ಕಾರಣವಾಗಿದೆ ಎನ್ನಬಹುದು. ಏಕೆಂದರೆ, ಹಳ್ಳಿ ಹೈದ, ಸಿಂಪಲ್ ಬಿಹೇವಯರ್ ಇರುವ ಹುಡುಗ ಬಿಗ್ ಬಾಸ್ ಗೆದ್ದು ಬರೋಬ್ಬರಿ 50 ಲಕ್ಷ ಬಾಚಿಕೊಳ್ಳುವುದು ಚಿಕ್ಕ ಸಂಗತಿಯೇನಲ್ಲ!
ಇನ್ನು, ಹನುಮಂತನ ಬಿಗ್ ಬಾಸ್ ಗೆಲವನ್ನು ಬಿಗ್ ಬಾಸ್ ಕನ್ನಡ 11ರ ಸಹಸ್ಪರ್ಧಿಗಳೂ ಕೂಡ ಸಂಬ್ರಮಿಸುತ್ತಿದ್ದಾರೆ. ಆಟ ಆಡುತ್ತಿರುವಾಗ ಅಷ್ಟೇ ಎದುರಾಳಿ, ಆಟ ಮುಗಿದ ಮೇಲೆ ಸ್ನೇಹಿತ ಎಂಬಂತೆ ಹನುಮಂತ ಅವರ ಗೆಲುವನ್ನು ಪತ್ರಿಯೊಬ್ಬರೂ ಸಂಭ್ರಮಿಸುತ್ತಿರುವುದು ಕಂಡುಬರುತ್ತಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಇತಿಹಾಸದಲ್ಲೇ ಯಾರೂ ಪಡೆಯದಷ್ಟು ಓಟ್ ಪಡೆದು ಹನುಮಂತ ಗೆದ್ದಾಗಿದೆ, ಹೊಸ ದಾಖಲೆ ನಿರ್ಮಿಸಿಯೂ ಆಗಿದೆ. ಮುಂದೇನು...?
ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಇನ್ನೇನೋ ಬೇರೆ ಇದೆ', ಆಟ ಮಾತ್ರವಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.