
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ವಿನ್ನರ್ ಆಗಿ ಹಳ್ಳಿಹೈದ, ಕುರಿಗಾಯಿ ಹಾಗೂ ಸಿಂಗರ್ ಹನುಮಂತ ಟ್ರೋಫಿ ಎತ್ತಿದ್ದಾರೆ. ನಟ ತ್ರಿವಿಕ್ರಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ರಜತ್ 3ನೇಯವರಾಗಿ ಹೊರ ಹೊಮ್ಮಿದ್ದು, ಸದ್ಯ ಈ ಎಲ್ಲರ ಮನೆಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿವೆ. ರನ್ನರ್ ಅಪ್ ಸ್ಥಾನ ಪಡೆದ ತ್ರಿವಿಕ್ರಮ್ ಅವರಿಗೆ ರಾತ್ರಿಯೇ ಕುಟುಂಬಸ್ಥರು, ಸ್ನೇಹಿತರು ದೊಡ್ಡ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ತಮ್ಮ ಮೊಟ್ಟಮೊದಲ ರಿಯಾಕ್ಷನ್ ಆಗಿ 'ಇದಕ್ಕಾಗಿಯೇ ಇಷ್ಟು ದಿನ ಮನೆಯಲ್ಲಿ ಹೋರಾಡಿದ್ದು' ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ ತ್ರಿವಿಕ್ರಮ್ 'ಬಿಗ್ ಬಾಸ್ ಕನ್ನಡ ಸೀಸನ್- 11 ಸ್ಪರ್ಧಿಯಾಗಿದ್ದು, ನನ್ನ ಕನಸನ್ನು ನನಸು ಮಾಡಿದೆ. ತುಂಬಾ ಖುಷಿಯಾಗ್ತಿದೆ. ಬಿಗ್ ಬಾಸ್ ಮನೆಗೆ ಹೋದ ಮೊದಲ ದಿನದಿಂದಲೇ ನನಗೆ ಕೊನೆಯವರೆಗೂ ಇರುತ್ತೇನೆ ಎನ್ನುವ ಕಾನ್ಫಿಡೆನ್ಸ್ ಇತ್ತು. ಆದರೆ ರಜತ್ ಬಂದ ಮೇಲೆ ಸ್ಪರ್ಧೆ ಇನ್ನಷ್ಟು ಹೆಚ್ಚಿತ್ತು. ವೈರ್ಲ್ಡ್ಕಾರ್ಡ್ ಬಂದಿದ್ದರಿಂದ ಕಾನ್ಫಿಡೆನ್ಸ್ ಇತ್ತು. ಆದರೆ, ಕೊನೆಯಲ್ಲಿ ಗೆಲುವು ಸೋಲು ಎನ್ನುವುದು ಮುಖ್ಯವಲ್ಲ ಎಂಬುದು ನನ್ನ ಅನಿಸಕೆ.
ನಾನು ಬಿಗ್ ಬಾಸ್ ಮನೆಯೊಳಕ್ಕೆ ಇದ್ದಾಗ ನನಗೆ ಹೊರಗೆ ನನ್ನ ಬಗ್ಗೆ ಜನರಿಗೆ ಇಷ್ಟು ಪ್ರೀತಿ ಇದೆ ಎಂಬುದು ಗೊತ್ತಾಗಿರಲಿಲ್ಲ. ಆದ್ರೆ, ನಾನು ಹೊರಗೆ ಬಂದ ಮೇಲೆ ಇಷ್ಟು ಜನರ ಪ್ರೀತಿ ನನ್ನ ಮೇಲಿದೆ ಎಂದು ಗೊತ್ತಾಯಿತು' ಎಂದು ಹೇಳಿದ್ದಾರೆ ತ್ರಿವಿಕ್ರಮ್.
ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಇನ್ನೇನೋ ಬೇರೆ ಇದೆ', ಆಟ ಮಾತ್ರವಲ್ಲ!
'ಮನೆಯೊಳಗೆ ನಾವು ಏನೇನು ಮಾಡುತ್ತಿದ್ದೇವೆ ಎಂಭೂಧೂ ಹೊರಗಡೆ ಗೊತ್ತಾಗುತ್ತಿದೆ ಎಂಬುದು ತಿಳಿದಾಗ, ಅದಕ್ಕಿಂತ ಖುಷಿ ಮತ್ತೊಂದಿಲ್ಲ. ನನಗೆ ವಿನ್ನರ್ ಟ್ರೋಫಿ ಬಂದಿಲ್ಲ ಎಂಬ ಬಗ್ಗೆ ಸ್ವಲ್ಪ ಬೇಸರವಿದೆ. ಆದರೆ, ಅಮ್ಮ ಹೇಳಿದ ಅದೊಂದು ಮಾತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮನಮುಟ್ಟಿದೆ. 'ಮಗನೇ, ಜನರ ಪ್ರೀತಿ ಗಳಿಸಿದ್ದೀಯಾ, ಬಾ..' ಎಂದು ಅಮ್ಮ ಹೇಳಿದ್ದಾರೆ. ಸುದೀಪ್ ಅವರನ್ನು ವೇದಿಕೆಯಲ್ಲಿ ನೋಡಿದಾಗ ಸ್ವಂತ ಅಣ್ಣನನ್ನೇ ನೋಡಿದಷ್ಟು ಖುಷಿಯಾಗಿದೆ.
ನಾವು ಹೊರಗಡೆ ಇದ್ದಾಗ ಏನೇನೋ ಯೋಚನೆ ಮಾಡುತ್ತೇವೆ. ಆದರೆ ಬಿಗ್ಬಾಸ್ನ 120 ದಿನ ಮುಗಿದ ಮೇಲೆ ರಿಸಲ್ಟ್ ಏನಾದರೂ ಪರವಾಗಿಲ್ಲ. ಈ ಮೂವ್ಮೆಂಟ್ ಎಂಜಾಯ್ ಮಾಡಬೇಕು ಅಂತ ಅನ್ನಿಸಿಬಿಡುತ್ತೆ.. ವಿನ್ನರ್ ಯಾರೇ ಆಗಲಿ ಸ್ಟೇಜ್ ಮೇಲೆ ಬಂದು ನಿಲ್ಲೋದಷ್ಟೇ ನಮ್ಮ ಎಫರ್ಟ್. ಕೋಟ್ಯಂತರ ಜನ ನನ್ನ ಆಟ ನೋಡಿ ವೋಟ್ ಮಾಡಿರುವುದು ಖುಷಿ ಇದೆ. ಸೀರಿಯಲ್ನಲ್ಲೂ ನನ್ನನ್ನು ಒಪ್ಪುಕೊಂಡಿದ್ದರು. ಇನ್ಮುಂದೆ ಬರುವ ಪ್ರಾಜೆಕ್ಟ್ಗಳಲ್ಲೂ ನನ್ನನ್ನು ಒಪ್ಪಿಕೊಳ್ಳಿ' ಎಂದು ತ್ರಿವಿಕ್ರಮ್ ಜನರ ಬಳಿ ಮನವಿ ಮಾಡಿದ್ದಾರೆ.
ಡಾ ರಾಜ್‌ಕುಮಾರ್ 'ಶಬ್ದವೇದಿ'ಗೆ ಕರೆದು ಅಶ್ವಥ್‌ಗೆ ಅವಮಾನ ಮಾಡಲಾಯ್ತಾ? ಏನಿದು ರಹಸ್ಯ?
ಇನ್ನು ನಂಗೆ ಫಿನಾಲೆ ಟಿಕೆಟ್ ಮಿಸ್ ಆದಾಗಲೇ ಒಂಚೂರು ಬೇಸರ ಆಗಿತ್ತು. ಅಲ್ಲಿಯೂ ಕೂಡ ಹನುಮಂತನೇ ಗೆದ್ದಿದ್ದ. ಆದರೆ ನನಗೆ ಅದರ ತೀರಾ ಬೇಸರವೇನೂ ಇಲ್ಲ. 'ಹನುಮಂತ, ನೀನು ಹೀಗೆ ಚೆನ್ನಾಗಿ ಆಡುತ್ತಿರು. ಕರ್ನಾಟಕಕ್ಕೆ ನೀನು ದೊಡ್ಡ ಗಿಫ್ಟ್. ಕರ್ನಾಟಕದ ಕೊಗಿಲೇ ನೀನು. ಹಾಡುವುದನ್ನು ಯಾವತ್ತೂ ನಿಲ್ಲಿಸಬೇಡ. ಯಾವತ್ತೂ ಆರಾಮವಾಗಿರು..' ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.