ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಜೀವನಾಧಾರಿತ ಧಾರಾವಾಹಿಯನ್ನು ನಿಲ್ಲಿಸುವಂತೆ ಜೀ ಬ್ಯುಸಿನೆಸ್ ಹೆಡ್‌ಗೆ ಬೆದರಿಕೆ ಕರೆ..
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ಧಾರಾವಾಹಿ 'ಮಹಾನಾಯಕ' ನಿಲ್ಲಿಸುವಂತೆ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಉಣಸೂರು ಅವರಿಗೆ ಕೆಲವರು ಬೆದರಿಕೆ ಕರೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ರಾಘವೇಂದ್ರ ಅವರು ಸೊಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಡದಿ, ಮಕ್ಕಳ 'ಜೊತೆ ಜೊತೆಯಲಿ' ಆರ್ಯವರ್ಧನ್...!ಟ್ಟೀಟ್ ಹೀಗಿದೆ:
'ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ನನಗೆ ಮೆಸೇಜ್ ಹಾಗೂ ಮಧ್ಯ ರಾತ್ರಿ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಅದನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾರು ಏನೇ ಹೇಳಿದರೂ ಮಹಾನಾಯಕ ಮುಂದುವರಿಯುತ್ತದೆ. ಯಾವ ಷಡ್ಯಂತ್ರಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ಧಾರಾವಾಹಿಯನ್ನು ಪ್ರಸಾರ ಮಾಡುವುದು ನಮ್ಮ ಹೆಮ್ಮೆ ಹಾಗೂ ವೈಕ್ತಿವಾಗಿಯೂ ನನಗೆ ಇಷ್ಟವಾದ ಕಥೆ ಇದು,' ಎಂದು ಬರೆದಿದ್ದಾರೆ.
ಪ್ರಸ್ತುತ ಬಿ ಆರ್ ಅಂಬೇಡ್ಕರ್ ಅವರ ಜೀವನದ ಕತೆ ಹೇಳುವ ಈ ಧಾರಾವಾಹಿಯಲ್ಲಿ ಅವರ ವಿದ್ಯಾಭ್ಯಾಸ ಹಾಗೂ ಜೀವನದ ಹಕ್ಕು ಪಡೆಯಲು ಪಟ್ಟ ಕಷ್ಟಗಳನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಧಾರಾವಾಹಿಯನ್ನು ಇನ್ನೂ ಒಂದು ವರ್ಷ ಪ್ರಸಾರ ಮಾಡುವ ನಿರ್ಧಾರ ಮಾಡಿದ್ದಾರಂತೆ, ಜೀ ಕನ್ನಡ ವಾಹಿನಿಯವರು.
ಬೈಗುಳ ತಿಂದ ಕಿರುತೆರೆ ನಟಿ ಅನಿಕಾ; ಸೋಷಿಯಲ್ ಮೀಡಿಯಾದಿಂದ 6 ತಿಂಗಳು ಔಟ್?
'ಇದು ಜಾತಿಗಳಿಗೂ ಮೀರಿದ ಪ್ರಾಜೆಕ್ಟ್. ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಬೇಕು. ಇದು ತುಂಬಾನೇ ಸೂಕ್ಷ್ಮವಾದ ವಿಚಾರ. ಬೆದರಿಕೆ ಕರೆ ಮಾಡುವವರಿಗೆ ನನಗೆ ಉತ್ತರಿಸಿಲು ಮನಸ್ಸಿಲ್ಲ, ' ಎಂದು ಸ್ಪಷ್ಟಪಡಿಸಿದ್ದಾರೆ ರಾಘವೇಂದ್ರ.
ಕರುನಾಡ ಸೇವಕರು ಸಂಘಟನೆಯ ರೂಪೇಶ್ ರಾಜಣ್ಣ ರಾಘವೇಂದ್ರ ಹುಣಸೂರು ಅವರಿಗೆ ಸಾಥ್ ನೀಡಿದ್ದಾರೆ. 'ಜೀ ಕನ್ನಡ ಮುಖ್ಯಸ್ಥರು ಮಾನ್ಯ ರಾಘವೇಂದ್ರ ಹುಣಸೂರು ಅವರ ಬಳಿ ಮಾತನಾಡಿ ಅವರಿಗೆ ಬೆಂಬಲ ನೀಡಿದ್ದೇವೆ. ಮಹಾನಾಯಕ ಧಾರಾವಾಹಿ ಯಾವುದೇ ಕಾರಣಕ್ಕೂ ನಿಲ್ಲೋದು ಬೇಡ. ಸುಂದರ ಸಮಾಜ ಬಯಸುವ ಸಮಸ್ತ ಕನ್ನಡಿಗರು, ಸದಾ ನಿಮ್ಮೊಂದಿಗೆ ಇದ್ದೇವೆ. ರಾಘವೇಂದ್ರ ಹುಣಸೂರ್ ಅವರೇ ನೀವು ನಿಮ್ಮ ವಾಹಿನಿಯಲ್ಲಿ ಬಸವಣ್ಣ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಈ ರೀತಿ ಮಹಾನ್ ನಾಯಕರ ಧಾರಾವಾಹಿಗಳು ಮೂಡಿ ಬರಲಿ. ಕನ್ನಡಿಗರಲ್ಲಿ ಇನ್ನಷ್ಟು ಕನ್ನಡ ಜಾಗೃತಿ ಮೊಳಗಲಿ,' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಮಹಾನಾಯಕ ಧಾರಾವಾಹಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.