'ಗಲ್ಲಿ ಕಿಚನ್' ಫುಡ್‌ ಟ್ರಕ್‌ ಆರಂಭಿಸಿದ ಬಿಗ್ ಬಾಸ್‌ ವಿನ್ನರ್ ಶೈನ್‌ ಶೆಟ್ಟಿ; ರುಚಿ ನೋಡಿದ್ದೀರಾ?

By Suvarna News  |  First Published Sep 2, 2020, 11:44 AM IST

ನಟ ಶೈನ್ ಶೆಟ್ಟಿ ಮತ್ತೊಮ್ಮೆ ಗಲ್ಲಿ ಕಿಚನ್ ಪ್ರಾರಂಭಿಸಿದ್ದಾರೆ. ಕಿರುತೆರೆ ನಟ ನಟಿಯರು ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.


ಕಿರುತೆರೆಯ ಚಾಕ್ಲೆಟ್ ಬಾಯ್‌, ಬಿಗ್ ಬಾಸ್‌ ವಿನ್ನರ್ ಶೈನ್ ಶೆಟ್ಟಿ ಕನಸು ನನಸಾಗಿದೆ. 'ಗಲ್ಲಿ ಕಿಚನ್' ಎಂಬ ಹೆಸರಿನ ಫುಡ್‌ ಟ್ರಕ್‌ ಪುನರಾರಂಭಿಸಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ನಟ, ನಟಿಯರು ಹಾಗೂ ನಿರ್ದೇಶಕರು ಪಾಲ್ಗೊಂಡು ತಮ್ಮ ಶುಭ ಹಾರೈಕೆಗಳ ಮೂಲಕ ಶೈನ್‌ ಶೆಟ್ಟಿ ಹೊಸ ಸಾಹಸಕ್ಕೆ  ಸಾಥ್ ಕೊಟ್ಟಿದ್ದಾರೆ.

Tap to resize

Latest Videos

ಸ್ಯಾಂಡಲ್‌ವುಡ್‌ ಡಿಫರೆಂಟ್‌ ಡೈರೆಕ್ಟರ್‌ ಮತ್ತು ನಟ ಎಂದು ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ  ಕೆಲ ದಿನಗಳ ಹಿಂದೆ ಗಲ್ಲಿ ಕಿಚನ್ ಉದ್ಘಾಟಿನೆ ಮಾಡಿದ್ದರು. ಹಳೆ ಕಿಚನ್‌ಗಿಂತ ತುಂಬಾನೇ ವಿಭಿನ್ನವಾಗಿರುವ ಈ ಟ್ರಕನ್ನು ಎಷ್ಟೇ ದೂರದಲ್ಲಿ ನಿಂತು ನೋಡಿದರು ಕಣ್ಸೆಳೆಯುವಷ್ಟು ಆಕರ್ಷಣೆ ಹೊಂದಿದೆ. ಸಂಭ್ರಮದಲ್ಲಿ ಬಿಗ್ ಬಾಸ್‌ನ  ಇತರ  ಸ್ಪರ್ಧಿಗಳಾದ ಚೈತ್ರಾ ವಾಸುದೇವನ್, ಚಂದನ್ ಆಚಾರ್, ಚಂದನಾ ಅನಂತಕೃಷ್ಣ  ಹಾಗೂ ನಿರ್ದೇಶಕ ಪನ್ನಗಾ ಭರಣ ಪಾಲ್ಗೊಂಡಿದ್ದರು.


 

ಜನ ಮೆಚ್ಚಿದ ಕಿರುತೆರೆ ರಿಯಾಲಿಟಿ ಶೋ 'ಬಿಗ್‌ ಬಾಸ್‌ ಸೀಸನ್‌ 7'ರ ವಿಜೇತ ಶೈನ್‌ ಶೆಟ್ಟಿ  ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌  ಬಳಿ ಪುಡ್‌ ಟ್ರಕ್‌ ಆರಂಭಿಸಿದ್ದಾರೆ. ಲಾಕ್‌ಡೌನ್‌ ಕಾರಣದಿಂದ 4 ತಿಂಗಳು  ಮುಚ್ಚಲಾಗಿದ್ದ ಟ್ರಕ್‌ಗೆ ಹೊಸ ಲುಕ್‌ ಹಾಗೂ ವೆರೈಟಿ ಫುಡ್‌ಗಳನ್ನು ಸೇರಿಸಲಾಗಿದೆ. ಅದರಲ್ಲೂ ನೀರ್ ದೋಸೆ ಮತ್ತು ಪಡ್ಡು ಎಲ್ಲರ ಇಷ್ಟದ ತಿನಿಸಾಗಿದೆ. 

ಉಡುಪಿ ಶೆಟ್ಟಿ ಹುಡುಗನ ವಿಭಿನ್ನ ಹೆಸರು; 'ಶೈನ್‌' ಹೆಸರ ರಹಸ್ಯ ರಿವೀಲ್! 

ಕಿರುತೆರೆ ಜರ್ನಿಯಲ್ಲಿ ಅಡೆತಡೆ ಇದ್ದೇ ಇರುತ್ತದೆ. ಅವಕಾಶಗಳು ಸಿಗದೆ ಕಂಗಾಲಾಗಿದ್ದ ಶೈನ್ ಕೈ ಹಿಡಿದದ್ದು ಇದೇ ಫುಡ್‌ ಟ್ರಕ್‌. ಹಲವು ವರ್ಷಗಳಿಂದ ನಡೆಸುತ್ತಿರುವ ಫುಡ್‌ ಟ್ರಕ್‌ ಇಡೀ ಬನಶಂಕರಿ ಬಡಾವಣೆಯಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ.  ಬಿಗ್ ಬಾಸ್‌ ಮನೆ ಪ್ರವೇಶಿಸಿದ ಸಮಯದಲ್ಲಿ ಅವರ ತಾಯಿ ನೋಡಿಕೊಳ್ಳುತ್ತಿದ್ದರು, ಶೈನ್ ಶೆಟ್ಟಿ ಅವರ ಮೊಬೈಲ್ ಕ್ಯಾಂಟಿನ್ ಎಂದು ತಿಳಿಯುತ್ತಿದ್ದಂತೆ ಶೈನಿ ಅಭಿಮಾನಿಗಳು ಟ್ರಕ್‌ಗೆ ವಿಸಿಟ್‌ ನೀಡಿ ಸ್ವಾದಿಷ್ಟ ಆಹಾರ ಸವಿಯುತ್ತಿದ್ದಾರೆ .

click me!