ಆರ್ಯವರ್ಧನ್ ತೆಗೆದುಕೊಂಡ ನಿರ್ಧಾರದಿಂದ ಅನು ಪ್ರೀತಿ ಬಲಿಯಾಗುತ್ತಾ? ಸೂರ್ಯ ಅನು ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾನಾ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ತುಂಬಾನೇ ವಿಭಿನ್ನವಾದ ತಿರುವು ಪಡೆದುಕೊಳ್ಳುತ್ತಿದೆ. ತಂದೆ,ತಾಯಿಯ ಬಳಿ ಪ್ರೀತಿ ಹೇಳಿಕೊಳ್ಳಬೇಕೆಂದು ಕಾಯುತ್ತಿದ್ದ ಅನುಗೆ ಅಪ್ಪನೇ ಆರ್ಯ ಮುಕಾಂತರ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ. ಗಂಡನ ಸ್ಥಾನದಲ್ಲಿ ನಿಲ್ಲಲು ಬಯಸುತ್ತಿದ್ದ ಆರ್ಯನಿಗೆ ತಂದೆ ಸ್ಥಾನ ಕೊಟ್ಟ ಸುಬ್ಬು ಸಿರಿಮನೆ?
ಹೌದು! ಅನು ಹುಟ್ಟುಹಬ್ಬದಂದು ಪ್ರೀತಿ ಪ್ರಸ್ತಾಪ ಮಾಡಬೇಕು ಎಂದುಕೊಂಡರೆ ಆರ್ಯನ ಕುಟುಂಬ ಸಮಸ್ಯೆಯಿಂದ ಆಗಲಿಲ್ಲ, ಸಂಕ್ರಾಂತಿ ಹಬ್ಬದ ದಿನ ಗಾಳಿಪಟ ಹಾರಿಸುತ್ತ ಪ್ರೀತಿ ಹೇಳಬೇಕು ಎಂದುಕೊಂಡರೆ ಸುಬ್ಬು ಸಿರಿಮನೆಗೆ ಹೃದಯಾಘಾತವಾಗುತ್ತದೆ. ಅನಾರೋಗ್ಯದ ಸ್ಥಿತಿಯಲ್ಲೂ ಸುಬ್ಬು ಆರ್ಯವರ್ಧನ್ ಬಳಿ ಈ ಒಂದು ವಿಚಾರವಾಗಿ ಪ್ರಾಮಿಸ್ ಮಾಡಿಸಿಕೊಳ್ಳುತ್ತಾರೆ.
ಇನ್‌ಡೈರೆಕ್ಟ್ ಆಗಿ ಅನು-ಸೂರ್ಯ ಒಂದು ಮಾಡ್ತಾರ ಆರ್ಯವರ್ಧನ್?
ಏನದು ಪ್ರೈಮಿಸ್?
ಸೀರೆ ಅಂಗಡಿಯಲ್ಲಿ ಸೂರ್ಯನ ಪರಿಚಯವಾದ ದಿನದಿಂದ ಸುಬ್ಬ ಅಳಿಯ ಯಾರೆಂದು ಫಿಕ್ಸ್ ಮಾಡಿಕೊಂಡಿದ್ದಾರೆ. ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಯಿಂದ ಅರ್ಯನ ಬಳಿ ಅನು ಹಾಗೂ ಸೂರ್ಯ ಮದುವೆ ನೆರೆವೇರಿಸಿ ಕೊಡುವಂತೆ ಮಾತು ತೆಗೆದುಕೊಳ್ಳುತ್ತಾರೆ. ವಿಚಾರ ಕೇಳುತ್ತಿದ್ದಂತೆ ಆರ್ಯನಿಗೆ ದಿಕ್ಕೇ ತೋಚುವುದಿಲ್ಲ.
'ಜೊತೆ ಜೊತೆಯಲಿ' ಟ್ರ್ಯಾಕ್ ಸಾಂಗ್‌ಗೆ 11 ತಿಂಗಳಲ್ಲಿ 2 ಕೋಟಿ ವೀಕ್ಷಣೆ
ಸುಬ್ಬುಗೆ ಮಾತು ಕೊಟ್ಟ ಕಾರಣ ಅನುಳನ್ನು ಭೇಟಿ ಮಾಡಿ ಸೂರ್ಯನನ್ನು ಮದುವೆ ಆಗುವಂತೆ ಒಪ್ಪಿಸುತ್ತಾನೆ. ಆದರೆ ತನ್ನ ಪ್ರೀತಿ ಮುರಿದು ಬಿದ್ದ ಕಾರಣ ಆರ್ಯ ತನ್ನ ಸ್ನೇಹಿತ ಜೇಂಡೆ ಬಳಿ ಮನಸ್ಸಿನಲ್ಲಿರುವ ನೋವನ್ನು ಹಂಚಿಕೊಂಡು ಅಳುತ್ತಾನೆ. ಈ ಸಂಚಿಕೆಯನ್ನು ನೋಡು ನೋಡುತ್ತಲೇ ವೀಕ್ಷಕರು ಕೂಡ ಕಣ್ಣೀರಿಟ್ಟಿದ್ದಾರೆ.