ಜನಪ್ರಿಯ ಧಾರವಾಹಿ ಕನ್ನಡತಿಯ ನಟ ಹರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನಂತೆ ಎಂದಿದ್ದಾರೆ ಫ್ಯಾನ್ಸ್. ಕಾರಣ ಏನು..?
ಕನ್ನಡತಿ ಧಾರವಾಹಿಯ ಮೂಲಕ ಜನರ ನೆಚ್ಚಿನ ಹೀರೋ ಆಗ್ತಿದ್ದಾರೆ ಕಿರಣ್ ರಾಜ್. ಕನ್ನಡತಿಯಲ್ಲಿ ಹರ್ಷನಾಗಿ ಮಿಂಚುತ್ತಿರೋ ಕಿರಣ್ ರಾಜ್ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನಂತೆ ಎಂದಿದ್ದಾರೆ ಫ್ಯಾನ್ಸ್.
ಕಿರಣ್ ರಾಜ್ ಕನ್ನಡ ಕಿರುತೆರೆಯಲ್ಲಿ ಯುವ ಮುಖ. ತಮ್ಮ ಕಿರಣ್ ರಾಜ್ ಫೌಂಡೇಷನ್ ಮೂಲಕ ಬಹಳಷ್ಟು ಜನರಿಗೆ ತಮ್ಮಿಂದಾದಷ್ಟು ನೆರವು ನೀಡುತ್ತಾರೆ ಕಿರಣ್.
ತಮ್ಮ ಸಮಾಜಮುಖಿ ಕಾರ್ಯಗಳ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಲಾಕ್‌ಡೌನ್ ಸಮಯದಲ್ಲೂ ಬಡ ಜನರಿಗೆ ದಿನಸಿ, ಸಾಮಾಗ್ರಿಗಳನ್ನು ನೀಡಿ ನೆರವಾಗಿದ್ದರು.
ಅಮ್ಮಮ್ಮನ ಮಡಿಲಲ್ಲಿ ಮಗುವಾದ್ರು ಹರ್ಷ-ಭುವಿ..! ಭಾವುಕರಾಗಿದ್ದೇಕೆ
ಇದೀಗ ಫ್ಯಾನ್ಸ್ ಬಾಲಿವುಡ್ ನಟ ಸುಶಾಂತ್ ಅವರನ್ನು ನೆನಪಿಸಿಕೊಂಡಿದ್ದಾರೆ. ಬಿಹಾರ ಮೂಲದ ಬಾಲಿವುಡ್ ನಟ ಎಂಎಸ್‌ಡಿ ಮೂಲಕ ಸ್ಟಾರ್ ನಟನಾಗಿ ಮೂಡಿಬಂದರೂ ಸಿಂಪಲ್ ಆಗಿದ್ದರು. ಬಡವರನ್ನೂ, ಅಸಹಾಯಕರನ್ನೂ ಕಂಡಾಗ ಮರುಗಿ ನೆರವಾಗುತ್ತಿದ್ದರು.
ಇದೀಗ ಫ್ಯಾನ್ಸ್ ಸುಶಾಂತ್ ಫೋಟೋ ಜೊತೆ ಕಿರಣ್ ರಾಜ್ ಫೋಟೋ ಸೇರಿಸಿ ಇದನ್ನು ವೈರಲ್ ಮಾಡಿದ್ದಾರೆ. ಕಿರಣ್ ರಾಜ್ ದುಡಿಮೆಯ ಒಂದಷ್ಟು ಭಾಗವನ್ನು ಬಡವರಿಗಾಗಿಯೇ ಮೀಸಲಿಟ್ಟಿರೋದು ವೀಶೇಷ.