ಕಳೆದ 10 ವರ್ಷಗಳಿಂದ ಹಿರಿಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅನುಶ್ರೀ ವಿಡಿಯೋ ವೈರಲ್!

By Suvarna News  |  First Published Jan 30, 2021, 11:40 AM IST

ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುವ ಅನುಶ್ರೀ ಇದೇ ಮೊದಲ ಬಾರಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ...
 


ಪುಟ್ಟ ಮಕ್ಕಳಿಂದ ಹಿರಿಯರಿಗೆ ಸೂಪರ್ ಫೇವರಿಟ್‌, ಅಚ್ಚ ಕನ್ನಡದ ನಿರೂಪಕಿ ಅನುಶ್ರೀ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ನಮ್ಮೆಲ್ಲರ ಮನೆ ಮಗಳಾಗಿರುವ ಅನು ಇದೇ ಜನವರಿ 25ರಂದು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸುಮಾರು 10 ವರ್ಷಗಳಿಂದ ಹಿರಿಯರೊಂದಿಗೆ ಆಚರಿಸಿಕೊಳ್ಳುತ್ತಿರುವ ಈ ವಿಡಿಯೋವನ್ನು ಇಂದು ಅಪ್ಲೋಡ್ ಮಾಡಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ! 

Tap to resize

Latest Videos

ಅನುಶ್ರೀ ಪೋಸ್ಟ್:

'ಮುತ್ತಿನಂತ ಮಗಳಾಗಿ ಹೆತ್ತವರ ಸಿರಿಯಾಗಿ ದೇವರಿತ್ತ ವರವಾಗಿ ನೀ ಬಾಳಲು ಅನುಶ್ರೀ ನೀ ಬಾಳಲು ಇದಕ್ಕಿಂತ ಇನ್ನೊಂದು ಆಶೀರ್ವಾದ ಬೇಕಾ ?? ಕಳೆದ ಹತ್ತು ವರ್ಷಗಳಿಂದ ನನ್ನ ಜನುಮದಿನವನ್ನು ಈ ಹಿರಿಯರೊಂದಿಗೆ ಆಚರಿಸುವ ಅವಕಾಶ ಹಾಗೂ ಭಾಗ್ಯ ಕೊಟ್ಟ yuva bengaluru ತಂಡಕ್ಕೆ ಪ್ರಜ್ವಲ್ ಗೆ ನನ್ನ ಧನ್ಯವಾದಗಳು #hiteshimahilamaneyangala.ನನ್ನ ಕೇಕ್ ಹಂಚಿಕೊಂಡಿರುವ, ನೀವು ಮಾಡಿ ನಿಜವಾದ ಆನಂದವನ್ನು ಸವಿಯಿರಿ#sharemycake' ಎಂದು ಅನು ಬರೆದುಕೊಂಡಿದ್ದಾರೆ.

ಈ ವರ್ಷ ಅನುಶ್ರೀ ಹುಟ್ಟುಹಬ್ಬವನ್ನು ಇನ್ನೆಷ್ಟು ಸ್ಪೆಷಲ್ ಮಾಡಿದ್ದು ಜೀ ಕನ್ನಡ ಡಿಕೆಡಿ ತಂಡ ಎನ್ನಬಹುದು. ವಿಶೇಷವಾದ ಹಾಡು, ಗುಲಾಬಿ ಹೂಗಳು ಹಾಗೂ ಮೆಮೋರಬಲ್‌ ಫೋಟೋ ಫ್ರೇಮ್‌ ಎಲ್ಲವೂ ಅನು ದಿನವನ್ನು ಬೆಳಗಿತ್ತು.

 

click me!