ಬಿಗ್‌ಬಾಸ್ ಕನ್ನಡ 11ರ ಸೆಮಿಫಿನಾಲೆ ವಾರದಲ್ಲಿ ಧನ್‌ರಾಜ್ ಟಾಸ್ಕ್‌ನಲ್ಲಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ಯಾಮರಾ ಮೂಲಕ ನೋಡಿ ಆಟ ಆಡಿರುವುದು ಸ್ಪಷ್ಟವಾಗಿದೆ ಎಂಬುದು ವೀಕ್ಷಕರ ಅಭಿಪ್ರಾಯ. ಬಿಗ್‌ಬಾಸ್ ಯಾಕೆ ಮಧ್ಯಪ್ರವೇಶಿಸಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.
ಬಿಗ್‌ಬಾಸ್ ಕನ್ನಡ 11ರ ಸೆಮಿಫಿನಾಲೆ ವೀಕ್ ಈ ವಾರ ನಡೆಯುತ್ತಿದೆ. ಟಿಕೆಟ್ ಟು ಫಿನಾಲೆ ಹನುಮಂತ ಬಿಟ್ಟು ಮಿಕ್ಕವರೆಲ್ಲ ನಾಮಿನೇಶನ್ ನಲ್ಲಿ ಇದ್ದಾರೆ. ಮಿಡ್ ವೀಕ್ ಎಲಿಮಿನೇಶನ್ ಈ ವಾರ ಇದೆ. ಆದರೆ ಮಿಡ್ ವೀಕ್ ಎಲಿಮಿನೇಶನ್ ನಿಂದ ತಪ್ಪಿಸಿಕೊಳ್ಳಲು ಮನೆಯವರಿಗೆ ಈ ವಾರ ಸರಣಿ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಧನ್‌ರಾಜ್ ಗೆದ್ದು ಮಿಡ್ ವೀಕ್ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದರು. ಆದರೆ ಈಗ ಧನ್‌ರಾಜ್ ಅವರು ಈ ಆಟದಲ್ಲಿ ಮೋಸ ಮಾಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.
ಮೋಸ ಮಾಡಿದ್ರಾ ಧನ್‌ರಾಜ್: ಧನರಾಜ್ ಗೆದ್ದಿರುವುದು ಎಲ್ಲರಿಗೂ ಖುಷಿನೇ ಆದರೆ ಅವರ ಕಡೆಯಿಂದ ಮೋಸ ಆಗಿದೆ ಎಂಬುದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಂಬಂಧ ವಿಡಿಯೋ ಕ್ಲಿಪ್ಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊನೆ ಟಾಸ್ಕ್ ನಲ್ಲಿ ಕೀ ಪಡೆದು ಪಸಲ್ ಬಾಕ್ಸ್ ಓಪನ್ ಜೋಡಿಸುವುದು ಟಾಸ್ಕ್ ಆಗಿತ್ತು.
ಬಿಗ್ ಬಾಸ್ ಸ್ಪರ್ಧಿ ಆಸ್ಪತ್ರೆಗೆ ದಾಖಲು, ಟ್ರೋಲ್‌ಗೆ ಗುರಿಯಾಗಿದ್ದಕ್ಕೆ ಹೀಗಾಯ್ತಾ?
ಆದರೆ ಧನರಾಜ್ ಆಟ ಮುಗಿಸಿದ ಮೇಲೆ ಕುಳಿತುಕೊಳ್ಳಲು ಹೋಗುತ್ತಾರೆ ಅಲ್ಲಿ ಉಗ್ರಂ ಮಂಜು ಗೇಮ್ ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದಕ್ಕೆ ಅಯ್ಯೋ ತುಂಬಾ ಸುಲಭವಾಗಿತ್ತು ಎನ್ನುತ್ತಾರೆ. ಬೋರ್ಡ್ ಕಾಣಿಸುತ್ತಿತ್ತಾ ಎಂದು ಕೇಳುತ್ತಾರೆ ಹೌದು ಸ್ವಲ್ಪ ಸ್ವಲ್ಪ ಮೇಲೆ ಭಾಗ ಮಾತ್ರ ಕಾಣಿಸುತ್ತಿತ್ತು ಎನ್ನುತ್ತಾರೆ. ಧನರಾಜ್ ಈಗ ಗ್ರೇ ಏರಿಯಾ ಹುಡುಕಿಕೊಂಡಿದ್ದಾನೆ ಎಂದು ಮಂಜು ಕಾಮೆಂಟ್ ಮಾಡುತ್ತಾರೆ. ಅಲ್ಲಿಗೆ ಧನರಾಜ್ ಬಿಗ್‌ಬಾಸ್ ನ ಕನ್ನಡಿಯಲ್ಲಿ ನೋಡಿಕೊಂಡು ಆಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದರ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಕತ್ತೆ ಕಾಯ್ತಿದ್ರಾ ಬಿಗ್‌ಬಾಸ್!
ಧನರಾಜ್ ಮುಖ್ಯವಾದ ಟಾಸ್ಕ್‌ನಲ್ಲಿ ತಪ್ಪು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದಾದರೆ ತಕ್ಷಣವೇ ಬಿಗ್‌ಬಾಸ್ ಯಾಕೆ ಮಧ್ಯೆ ಪ್ರವೇಶಿಸಲಿಲ್ಲ. ಧನ್‌ರಾಜ್ ಕನ್ನಡಿ ನೋಡಿದ್ದಾರೆ. ಅದನ್ನು ಟಾಸ್ಕ್ ಆಡಿದ ಬಳಿಕ ತಾವೇ ಪ್ರಾಮಾಣಿಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡ. ಮಾತ್ರವಲ್ಲ ಮಂಜು ಅದನ್ನು ತಿಳಿದೇ ಕೇಲಿದ್ದಾರೆ. ಆದ್ರೆ ಮಿಕ್ಕ ಮೂರು ಮಂದಿ ಕೂಡ ನಿಂತಿರುವಲ್ಲಿಂದಲೇ ಬಗ್ಗಿ ಬೋರ್ಡ್ ನೋಡಿರುವುದು ಸ್ಪಷ್ಟವಾಗಿ ಕಾಣಿಸಿದೆ. ಈ ಮೂವರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಗೌತಮಿ ಜಾಧವ್ ಮಿಡ್‌ವೀಕ್ ಎಲಿಮಿನೇಟ್ ಆಗೋದು ಗ್ಯಾರಂಟಿ? ಇದು ಜನರೇ ಕೊಟ್ಟ ತೀರ್ಪು!
ಸೆಮಿಫಿನಾಲೆಯ ಈ ಹಿಂದಿನ ಟಾಸ್ಕ್ ಹಾವು ಕೋಲಿನ ಆಟದಲ್ಲಿ ಸ್ಪರ್ಧಿಗಳು ತಪ್ಪು ಮಾಡಿದರೆಂದು ಬಿಗ್‌ಬಾಸ್ ಮಧ್ಯೆ ಪ್ರವೇಶಿಸಿ ರೀ ಮ್ಯಾಚ್ ಆಡಿಸಿದ್ದರು. ಟಾಸ್ಕ್ ಒಂದರಲ್ಲಿ ಮಂಜು ಧನ್‌ರಾಜ್ ಮೇಲೆ ದಾಳಿ ಮಾಡಿ ಆಡಿದಾಗಲೂ ಬಿಗ್‌ಬಾಸ್ ಮೂಕ ಪ್ರೇಕ್ಷಕನಾದ್ರು. ಅಂತಿಮ ಹಂತದ ಆಟದಲ್ಲಿ ಧನ್‌ರಾಜ್ ಮಾತ್ರವಲ್ಲ ಇತರ ಸ್ಪರ್ಧಿಗಳು ಕೂಡ ತಪ್ಪು ಮಾಡಿದ್ದಾರೆಂದು ಗೊತ್ತಿದ್ದರೂ ಯಾಕೆ ಬಿಗ್‌ಬಾಸ್ ಮಧ್ಯ ಪ್ರವೇಶಿಸಲಿಲ್ಲ? ಮನೆಯಲ್ಲಿರುವ ಅಷ್ಟೋ ಕ್ಯಾಮಾರಾಗಳು ಮತ್ತು ಅದರ ಹಿಂದಿರುವ ಕ್ಯಾಮರಾಮನ್‌ಗಳು ನಿದ್ದೆಗೆ ಜಾರಿದ್ದರೆ? ಮಾತ್ರವಲ್ಲ ಬಿಗ್‌ಬಾಸ್ ಗೆ ಬೇಕಾದ ಸ್ಪರ್ಧಿಗಳು ಟಾಸ್ಕ್ ನಲ್ಲಿ ಹೀನಾಯವಾಗಿ ಸೋತು ಹಿಂದುಳಿದರು ಎನ್ನುವ ಬೇಸರವೇ? ಈ ಕಾರಣಕ್ಕೆ ಟಾಸ್ಕ್ ನಡೆದು 2 ದಿನಗಳ ಬಳಿಕ ತಪ್ಪಾಗಿದೆ ಎಂದು ಘೊಷಿಸಬೇಕಿತ್ತೇ? ತಪ್ಪಾಗಿದೆ ಎಂಬುದು ಗೊತ್ತಿದ್ದೂ ಒಬ್ಬ ವ್ಯಕ್ತಿಯನ್ನು ಇಡೀ ಮನೆಗೆ ವಿಲನ್ ಥರ ಬಿಂಬಿಸುವುದು ಎಷ್ಟು ಸರಿ? ಬಿಗ್‌ಬಾಸ್ ಗೆ ಯಾರು ಬೇಕು ಅವರನ್ನೇ ಕೊನೆಗೆವರೆಗೂ ನಿಲ್ಲಿಸುವುದು. ಅವರಿಗೆ ಬೇಕಾದವರನ್ನೇ ಕೊನೆಗೆ ಗೆಲ್ಲಿಸುವುದು ಎಂಬ ಚರ್ಚೆ ಜೋರಾಗಿದೆ.
ಇದಕ್ಕೆ ಸಾಕ್ಷಿ ಸೀಸನ್ 10ರಲ್ಲಿ ಕೂಡ ನಡೆದಿತ್ತು. ವಿನಯ್ ಮತ್ತು ಸಂಗೀತಾ ಗೆಲ್ಲುವ ಸ್ಪರ್ಧಿಗಳಾಗಿದ್ದರೂ ಗೆಲುವು ಸಿಕ್ಕಿರಲಿಲ್ಲ. ಸೀಸನ್ 11 ಮುಗಿದರೂ 10 ಸೀಸನ್ ನಲ್ಲಿದ್ದ ಸಂಗೀತಾ ಶೃಂಗೇರಿ ಖದರ್, ಕ್ರೇಸ್ ಇನ್ನೂ ಕಮ್ಮಿಯಾಗಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ವಿಚಾರ.
ಅದೇನೆ ಇರಲಿ ನಾಳಿನ ಸಂಚಿಕೆಯಲ್ಲಿ ಇದಕ್ಕೆಲ್ಲ ಸ್ಪಷ್ಟ ಉತ್ತರ ಸಿಗಲಿದೆ. ಯಾರು ಮನೆಗೆ ಹೋಗುತ್ತಾರೆ? ಅಥವಾ ಧನ್‌ರಾಜ್ ಅವರು ತನ್ನಿಂದ ತಪ್ಪಾಗಿದೆ ಎಂದು ಹೇಳಿ ತಾನೇ ಹೊರ ಹೋಗುವಂತೆ ಬಿಗ್‌ಬಾಸ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.