ಗ್ಯಾಸ್ಟ್ರಿಕ್ ಆದ್ರೆ ಮನೆಯಲ್ಲಿ ಮೂಲಂಗಿ ತಿನ್ನುತ್ತಾರೆ; Valentines ಆಚರಣೆಯಲ್ಲಿ ಝಾದ್ ಖಾನ್‌ ಜೊತೆ ಸೋನಲ್!

Published : Feb 13, 2023, 03:46 PM IST
 ಗ್ಯಾಸ್ಟ್ರಿಕ್ ಆದ್ರೆ ಮನೆಯಲ್ಲಿ ಮೂಲಂಗಿ ತಿನ್ನುತ್ತಾರೆ; Valentines ಆಚರಣೆಯಲ್ಲಿ ಝಾದ್ ಖಾನ್‌ ಜೊತೆ ಸೋನಲ್!

ಸಾರಾಂಶ

ಸುವರ್ಣ ಪ್ರೇಮೋತ್ಸವದಲ್ಲಿ ಮಿಂಚಿದ ಝಾದ್ ಖಾನ್ ಮತ್ತು ಸೋನಲ್. ಕಣ್ಣು ಮುಚ್ಚಿಕೊಂಡು ತಟ್ಟೆಯಲ್ಲಿದ್ದ ಆಹಾರಗಳನ್ನು ಕಂಡು ಹಿಡಿದ ಬನಾರಸ್ ಜೋಡಿ....   

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬನಾರಸ್ ಜೋಡಿ. ಸೀರಿಯಸ್‌ ಮಾತುಕತೆ ನಡುವೆ ಕೊಂಚ ತುಂಟಾಟ. ಹಾಗಲಕಾಯಿಯನ್ನು ಎಂಜಾಯ್ ಮಾಡಿಕೊಂಡು ತಿಂದ ಝಾದ್‌ ನೋಡಿ ಶಾಕ್ ಆದ ನೆಟ್ಟಿಗರು. 

ಅನುಪಮಾ ಗೌದ ಮೊದಲು ನಟಿ ಸೋನಲ್ ಮೊಂಥೆರೋಗೆ ಒಂದು ತಟ್ಟೆಯಲ್ಲಿರುವ ಪದಾರ್ಥವನ್ನು ತಿನ್ನಿಸುತ್ತಾರೆ. ರುಚಿ ಕಂಡು ಹಿಡಿದ ಸೋನಲ್ 'ಇದು ನನಗೆ ತುಂಬಾನೇ ಇಷ್ಟ. ಸದಾ ನನ್ನ ಬ್ಯಾಗ್‌ನಲ್ಲಿ ಇರುತ್ತದೆ. ಚಾಕೋಲೇಟ್‌ ಅದರೆ ಅದರಲ್ಲಿ ಮತ್ತೊಂದು. ಇದರ ಮೇಲೆ ಮತ್ತೊಂದು ಕೋಟಿಂಗ್ ಇರುತ್ತದೆ ನೋಡಲು ಕಲರ್ ಕಲರ್ ಇರುತ್ತದೆ' ಎಂದು ಸೋನಲ್ ಹೇಳುತ್ತಾರೆ. 'ನಿನಗೆ ಮೀನು ತುಂಬಾನೇ ಇಷ್ಟ. ಚಾಕೋಲೇಟ್ ಅಂದ್ರೆ ಯಾವುದು? ಕಲರ್ ಕಲರ್ ಅಂದ್ರೆ ಜೆಲ್ಲಿ' ಎಂದು ಝಾದ್ ಪದಾರ್ಥವನ್ನು  ಕಂಡು ಹಿಡಿಯುತ್ತಾರೆ.

ಎರಡನೇ ತಟ್ಟೆಯಲ್ಲಿರುವ ಪದಾರ್ಥವನ್ನು ಅನುಪಮಾ ಗೌಡ ಝಾದ್ ಖಾನ್‌ ಬಾಯಿಗೆ ತಂದು ಇಡುತ್ತಾರೆ. 'ಈ ಪದಾರ್ಥವನ್ನು ಡಯಟ್ ಮಾಡುವವರು ತಿನ್ನುತ್ತಾರೆ.ಅನೇಕರು ಜ್ಯೂಸ್‌ ರೀತಿಯಲ್ಲಿ ಕುಡಿಯುತ್ತಾರೆ.ಸಖತ್ ಕಹಿಯಾಗಿರುತ್ತದೆ' ಎಂದು ಝಾದ್ ಸುಳಿವು ಕೊಡುತ್ತಾರೆ. ಮೊದಲು ಬಟರ್‌ಫ್ರೂಟ್‌ ಎನ್ನುತ್ತಿದ್ದ ಸೋನಲ್‌ ಹಾಗಲ ಕಾಯಿ ಎಂದು ಕಂಡು ಹಿಡಿಯುತ್ತಾರೆ.

ಶ್ವೇತಾಗೆ ಕೊಲೆ ಬೆದರಿಕೆ ಹಾಕಿದ ಡೆವಿಲ್; ಮೊಬೈಲ್ ಕ್ಯಾಮೆರಾದಲ್ಲಿ ಫುಲ್ ರೆಕಾರ್ಡ್‌?

ಮೂರನೇ ತಟ್ಟೆಯಲ್ಲಿರುವ ಪದಾರ್ಥವನ್ನು ತಿಂದು ಸೋನಲ್ ಸುಳಿವು ಕೊಡಲು ಆರಂಭಿಸುತ್ತಾರೆ 'ಸಂಕ್ರಾಂತಿ ಹಬ್ಬದ ದಿನ ಇದನ್ನು ಕೊಡುತ್ತಾರೆ. ರುಚಿ ಒಂದು ಚೂರು ಚೆನ್ನಾಗಿಲ್ಲ. ರಸ್ತೆಯಲ್ಲಿ ಮಾರಾಟ ಮಾಡುತ್ತಾರೆ' ಎಂದು ತುಂಬಾ ಸುಳಿವು ಕೊಡುವ ಪ್ರಯತ್ನ ಮಾಡುತ್ತಾರೆ. ಏನ್ ಏನೋ ಹೇಳಿ ಗೊತ್ತಾಗದೆ ಕಡಲೆ ಕಾಯಿ ಎನ್ನುತ್ತಾರೆ. ಇಬ್ಬರಿಗೂ ಸರಿಯಾಗಿ ಗೊತ್ತಾಗದ ಕಾರಣ ಅನುಪಮಾ ಹುರಿಗಡಲೆ ಎನ್ನುತ್ತಾರೆ. 

ನಾಲ್ಕನೇ ತಟ್ಟೆಯಲ್ಲಿರುವ ಪದಾರ್ಥವನ್ನು ಝಾದ್ ರುಚಿ ನೋಡುತ್ತಾರೆ. ಕಣ್ಣಿಗೆ ತುಂಬಾ ಒಳ್ಳೆಯದು ಎನ್ನುತ್ತಾರೆ ಆದರೆ ಅದಲ್ಲ ಎಂದು ತಿಳಿಯುತ್ತಿದ್ದಂತೆ ಇಲ್ಲ ಇಲ್ಲ ಗ್ಯಾಸ್ಟ್ರಿಕ್ ಆದಾಗ ಈ ತರಕಾರಿಯನ್ನು ತಿನ್ನುತ್ತಾರೆ ನೋಡಲು ಉದ್ದ ಇರುತ್ತದೆ ಬಿಳಿ ಬಣ್ಣ ಇರುತ್ತದೆ' ಎಂದು ಝಾದ್ ಹೇಳಿದಾಗ 'ಗ್ರ್ಯಾಸ್ಟ್ರಿಕ್ ಆದಾಗ ತರಕಾರಿ ತಿನ್ನುತ್ತಾರಾ ಎಂದು ಗೊಂದಲದಲ್ಲಿ ಇರುವ ಸೋನಲ್ ಮೊದಲು ಬೆಳ್ಳುಳ್ಳಿ ಎನ್ನುತ್ತಾರೆ ಬಿಳಿ ಬಣ್ಣ ಎಂದು ಸುಳಿವು ಕೇಳಿದ ಮೇಲೆ ಮೂಲಂಗಿ ಎಂದು ಉತ್ತರಿಸುತ್ತಾರೆ' ಸೋನಲ್.

ಸೋನಲ್ ಮತ್ತು ಝಾದ್ ಖಾನ್‌ ಬನಾರಸ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಝಾದ್ ಚೊಚ್ಚಲ ಸಿನಿಮಾ ಇದಾಗಿದ್ದು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೇಕಿಂಗ್ ಮತ್ತು ಕಥೆ ವಿಭಿನ್ನವಾಗಿದೆ ಎಂದು ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಅಲ್ಲಿಂದ ಸೋನಲ್ ಮತ್ತು ಝಾದ್ ಜೊಡಿಗೆ ಸಿನಿ ರಸಿಕರು ಫಿದಾ ಆಗಿದ್ದಾರೆ. ಹೀಗಾಗಿ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ನಿರೂಪಕಿ ಅನುಪಮಾ ಗೌಡ ಕೊಟ್ಟ ಡಿಫರೆಂಟ್ ಟಾಸ್ಕ್‌ನಲ್ಲಿ ಸ್ಪರ್ಧಿಸಿದ್ದಾರೆ.. 

ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ ಮುಗಿಸಿಕೊಂಡ ಬಂದ ನಂತರ ಅನುಪಮಾ ಯಾವ ಪ್ರಾಜೆಕ್ಟ್‌ ಒಪ್ಪಿಕೊಳ್ಳುತ್ತಾರೆ ಅನ್ನೋ ಕ್ಯೂರಿಯಾಸಿಟಿ ಜನರಲ್ಲಿತ್ತು. ಸುವರ್ಣ ಪ್ರೇಮೋತ್ಸವ ನಿರೂಪಣೆ ಮಾಡುವ ಮೂಲಕ ಬೆಳ್ಳಿ ತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?