Bigg Boss 16; ಹಿಂದಿ ಬಿಗ್ ಬಾಸ್ ಗೆದ್ದ ಎಂಸಿ ಸ್ಟಾನ್‌ ಯಾರು, ಸಿಕ್ಕ ಬಹುಮಾನದ ಮೊತ್ತವೆಷ್ಟು?

Published : Feb 13, 2023, 11:20 AM ISTUpdated : Feb 13, 2023, 11:29 AM IST
Bigg Boss 16; ಹಿಂದಿ ಬಿಗ್ ಬಾಸ್ ಗೆದ್ದ ಎಂಸಿ ಸ್ಟಾನ್‌ ಯಾರು, ಸಿಕ್ಕ ಬಹುಮಾನದ ಮೊತ್ತವೆಷ್ಟು?

ಸಾರಾಂಶ

ಹಿಂದಿ ಬಿಗ್ ಬಾಸ್ ಸೀಸನ್ 16ಗೆ ಅದ್ದೂರಿ ತೆರೆಬಿದ್ದಿದೆ. ಎಂಸಿ ಸ್ಟಾನ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. 

ಹಿಂದಿ ಬಿಗ್ ಬಾಸ್ ಸೀಸನ್ 16ಗೆ ಅದ್ದೂರಿ ತೆರೆಬಿದ್ದಿದೆ. ಹಿಂದಿ ಬಿಗ್ ಬಾಸ್ ಸೀಸನ್ 16 ಯಾರ್ ವಿನ್ ಆಗ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಭಾನುವಾರ ನಡೆದ ಅದ್ದೂರಿ ಫಿನಾಲೆಯಲ್ಲಿ ವಿನ್ನರ್ ಯಾರು ಎಂದು ಅನೌನ್ಸ್ ಮಾಡಲಾಗಿದೆ. ಖ್ಯಾತ ರಾಪರ್ ಎಂಸಿ ಸ್ಟಾನ್ ಬಿಗ್ ಬಾಸ್ ಸೀಸನ್ 16 ಟ್ರೋಫಿ ಎತ್ತಿ ಹಿಡಿದಿದ್ದಾರೆ. ಸಹ ಸ್ಪರ್ಧಿಗಳನ್ನು ಸೋಲಿಸಿ ಎಂಸಿ ಸ್ಟಾನ್ ಗೆದ್ದು ಬೀಗಿದ್ದಾರೆ. ಶಿವ ಠಾಕರೆ ಅವರನ್ನು ಸೋಲಿಸಿ ಎಂಸಿ ಸ್ಟಾನ್ ಪ್ರಶಸ್ತಿ ಗೆದ್ದಿದೆ. ಕಾರ್ಯಕ್ರಮದ ನಿರೂಪಕ, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಬಿಗ್ ಬಾಸ್ ವಿನ್ನರ್ ಅನೌನ್ಸ್ ಮಾಡಿದರು. 

ಬಿಗ್ ಬಾಸ್ ಸೀಸನ್ 16 ಪಟ್ಟ ಗೆದ್ದ ಎಂಸಿ ಸ್ಟಾನ್ ಟ್ರೋಫಿ ಜೊತೆಗೆ ನಗದು ಮತ್ತು ಕಾರನ್ನು ಬಹುಮಾನ ಪಡೆಡಿದ್ದಾರೆ. ಹೌದು ಬರೋಬ್ಬರಿ 31 ಲಕ್ಷ ನಗದು ಮತ್ತು ಕಾರನ್ನು ಎಂಸಿ ಸ್ಟಾನ್ ಗೆದ್ದುಕೊಂಡಿದ್ದಾರೆ. ಬಿಗಿ ಬಾಸ್ 16 ಫಿನಾಲೆಯಲ್ಲಿದ್ದ ಟಿವಿ ಸ್ಟಾರ್ ಪ್ರಿಯಾಂಕಾ ಚಹರ್ ಚೌಧರಿ ಅವರೇ  ವಿನ್ ಆಗ್ತಾರೆ ಎನ್ನಲಾಗಿತ್ತು. ಪ್ರಿಯಾಂಕಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಆದರೆ ಕೊನೆಯಲ್ಲಿ ಪ್ರಿಯಾಂಕಾ 3ನೇ ಸ್ಥಾನಕ್ಕೆ ಪೃಪ್ತಿ ಪಟ್ಟುಕೊಂಡರು. 

ಇನ್ನು ರಾಜಕಾರಣಿ, ಮಾಡೆಲ್ ಅರ್ಚನಾ ಗೊತಮ್ 4ನೇ ಸ್ಥಾನ ಪಡೆದುಕೊಂಡರು. ನಟ ಶಾಲಿನ್ ಭಾನೋಟ್ 5ನೇ ಸ್ಥಾನ ಪಡೆದರು. ವಿನ್ನರ್ ಆಗಿ ಹೊರ ಹೊಮ್ಮಿದ ಎಂಸಿ ಸ್ಟಾನ್ ವೇದಿಕೆ ಮೇಲೆ ಸಂಭ್ರಮದಿಂದ ಕುಣಿದರು. ಗೆದ್ದು ಮಾತನಾಡಿದ ಸ್ಟಾನ್, 'ಸರ್, ನೀವು ನನಗೆ ಕಲಿಸಿದ ಪ್ರತಿಯೊಂದಕ್ಕೂ ನಿಮಗೆ ಕೃತಜ್ಞನಾಗಿದ್ದೇನೆ. ನೀವು ಅತ್ಯಂತನಿಜವಾದ ವ್ಯಕ್ತಿ. ನನ್ನ ಪೋಷಕರು ತುಂಬಾ ಹೆಮ್ಮೆಪಡುತ್ತಾರೆ ಎಂದು ಗೊತ್ತಿದೆ. ಎಲ್ಲರಿಗೂ ನನ್ನ ಪ್ರೀತಿ' ಎಂದು ಹೇಳಿದರು. 

BBK9 Winner; ಬಿಗ್ ಬಾಸ್ ಟ್ರೋಫಿ ಗೆದ್ದ ರೂಪೇಶ್ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಬಿಗ್ ಬಾಸ್ ಮನೆಯಲ್ಲಿ ಖ್ಯಾತ ರ್ಯಾಪರ್ ಎಂಸಿ ಸ್ಟಾನ್ ಪಯಣ ರೋಚಕವಾಗಿತ್ತು, ಗೆಲುವು ಅಷ್ಟು ಸುಲಭವಾಗಿರಲಿಲ್ಲ, ಕಷ್ಟದ ಹಾದಿಯಾಗಿತ್ತು. ಆಗಾಗ ಬಿಗ್ ಮನೆಯಿಂದ ಹೊರಹೋಗುವುದಾಗಿ ಹೇಳುತ್ತಿದ್ದರು. ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿದರು. ತಾಳ್ಮೆಯ ಪ್ರತೀಕವಾಗಿದ್ದ ಸ್ಟಾನ್ ಯಾರೊಂದಿಗೂ ಅನಗತ್ಯ ಜಗಳವಾಡಿಲ್ಲ. ಈ ಗುಣ ಅಭಿಮಾನಿಗಳ ಹೃದಯ ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸ್ಟಾನ್ ಹೆಸರು ಟ್ರೆಂಡಿಂಗ್ ನಲ್ಲಿದೆ. ಸ್ಟಾನ್ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.  

BBK9 Winner; ಬಿಗ್ ಬಾಸ್ ಟ್ರೋಫಿ ಗೆದ್ದ ರೂಪೇಶ್ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಎಂಸಿ ಸ್ಟಾನ್ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಮೇಲೆ ಸ್ಟಾನ್ ಫಾಲೋವರ್ಸ್ ಗಳ ಸಂಖ್ಯೆ ದುಪ್ಪಟ್ಟಾಗಿದೆ. ಬಿಗ್ ಬಾಸ್‌ಗೆ ಹೋಗುವ ಮೊದಲು ಎಂಸಿ ಸ್ಟಾನ್ 1.6 ಮಿಲಿಯನ್ ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿ ಹೊಂದಿದ್ದರು. ಆದರೆ ಈಗ 7.5ಗೆ ಏರಿಕೆಯಾಗುಿದೆ. 
ರ್ಯಾಪರ್ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ. ಸಿದ್ಧಾರ್ಥ್ ಶುಕ್ಲಾ, ಶೆಹನಾಜ್ ಗಿಲ್, ರುಬಿನಾ ಸೇರಿದಂತೆ ಅನೇಕರ ದಾಖಲೆ ಮುರಿದಿದ್ದಾರೆ. ಸ್ಟಾನ್ ಇವರಿಗೆ ಸಿಕ್ಕ ಬೆಂಬಲ, ಪ್ರೀತಿ ಬಿಗ್ ಬಾಸ್ ಇತಿಹಾಸದಲ್ಲೇ ಯಾರಿಗೂ ಸಿಕ್ಕಿರಲಿಲ್ಲ.  ಬಿಬಿ ಮನೆಯಲ್ಲಿ ಅವರ ನ್ಯಾಚುರಲ್ ಸ್ವಭಾವ ಅವರನ್ನು ಟಾಪ್ 5 ಗೆ ಕರೆದೊಯ್ಯಿತು. ಮತ್ತು ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲವು ಬಿಗ್ ಬಾಸ್ 16 ಟ್ರೋಫಿ ಗೆಲ್ಲುವಂತೆ ಮಾಡಿತು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!