ಸಾಂಪ್ರದಾಯಿಕ ಬಟ್ಟೆಯಾಯ್ತು, ಈಗ ಪಾಪ್​ ಡ್ಯಾನ್ಸ​ಲ್ಲಿ ನಿವೇದಿತಾ ಗೌಡ ರೀಲ್ಸ್​- ಬಾಕಿ ಏನಿದೆ ಎಂದ ಫ್ಯಾನ್ಸ್​!

Published : Aug 17, 2023, 05:33 PM IST
ಸಾಂಪ್ರದಾಯಿಕ ಬಟ್ಟೆಯಾಯ್ತು, ಈಗ ಪಾಪ್​ ಡ್ಯಾನ್ಸ​ಲ್ಲಿ ನಿವೇದಿತಾ ಗೌಡ ರೀಲ್ಸ್​- ಬಾಕಿ ಏನಿದೆ ಎಂದ ಫ್ಯಾನ್ಸ್​!

ಸಾರಾಂಶ

ಸದಾ ಒಂದಿಲ್ಲೊಂದು ರೀಲ್ಸ್​, ಫೋಟೋ ಮಾಡುವ ಮೂಲಕ ಫ್ಯಾನ್ಸ್​ ಗಮನ ಸೆಳೆಯುತ್ತಿರುವ ನಟಿ ನಿವೇದಿತಾ ಗೌಡ ಇದೀಗ ಪಾಪ್​ ಡ್ಯಾನ್ಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.   

ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್ ಆಗಿರುವ ಬಿಗ್​ಬಾಸ್​ ಸ್ಪರ್ಧಿ ನಿವೇದಿತಾ ಗೌಡ, ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡುತ್ತಿರುತ್ತಾರೆ.  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.     ಬಾರ್ಬಿ ಡಾಲ್ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

 ಆಗಸ್ಟ್​ 15ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಹೊಸ ಕಾನ್​ಸೆಪ್ಟ್​ನಲ್ಲಿ ವಿಡಿಯೋ ಮಾಡೋಣ ಅಂದುಕೊಂಡಿದ್ದೇನೆ ಎಂದು ಎರಡು ದಿನಗಳ ಹಿಂದೆ ವಿಡಿಯೋ ಮೂಲಕ ತಿಳಿಸಿದ್ದ  ನಿವೇದಿತಾ ಗೌಡ, ಅದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​  ಮಾಡಿಕೊಂಡಿದ್ದರು. ಹಲವಾರು ರೀತಿಯ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಡ್ರೆಸ್​ನೊಂದಿಗೆ ಕಂಗೊಳಿಸಿದ್ದ ನಟಿ ನನಗೆ ಈಗ  ಯಾವ ರೀತಿ ಫೀಲ್​ ಆಗ್ತಿದೆ ಎಂದರೆ 200 ಔಟ್​ಫಿಟ್​ ಹಾಕಿದ ಹಾಗೆ ಫೀಲ್​ ಆಗ್ತಿದೆ ಎಂದಿದ್ದರು. ಆಗಸ್ಟ್​ 15ಕ್ಕೆ ಯೂಟ್ಯೂಬ್​ನಲ್ಲಿ ಹೊಸ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಯೂಟ್ಯೂಬ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ವಂದೇ ಮಾತರಂ (Vande Mataram) ಹಾಡಿನ ಹಿನ್ನೆಲೆಯಲ್ಲಿ ನಟಿ ಕಂಗೊಳಿಸಿದ್ದರು. ಹಲವಾರು ರಾಜ್ಯಗಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಭಾರತದ ಸಂಪ್ರದಾಯವನ್ನು ಸಾರುವ ವಿಡಿಯೋ ಮಾಡಿದ್ದರು.  ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದು, ಇಂದಿಗೂ ಆ ವಿಡಿಯೋಕ್ಕೆ ಥಹರೇವಾಗಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.  

ಸ್ವಾತಂತ್ರ್ಯ ದಿನಕ್ಕೆ ನಿವೇದಿತಾ ಗೌಡ ಸ್ಪೆಷಲ್​: ವಂದೇ ಮಾತರಂನಲ್ಲಿ ಮಿಂಚಿದ ನಟಿ

ಇದೀಗ ಸಾಂಪ್ರದಾಯಿಕ ಬಟ್ಟೆಗಳ ಬಳಿಕ ಪಾಪ್​ ಹಾಡಿಗೆ ಡ್ಯಾನ್ಸ್​ ಮಾಡಿರುವ ನಿವೇದಿತಾ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಪಾಪ್​ ಡ್ರೆಸ್​ ಹಾಕಿಕೊಂಡು ಡ್ಯಾನ್ಸ್​ ಮಾಡಿದ್ದು, ಇದಕ್ಕೆ ಹಾರ್ಟ್​ ಎಮೋಜಿಗಳ ಸುರಿಮಳೆಯಾಗಿದೆ. ನೀವು ಏನು ಮಾಡಿದರೂ ಚೆನ್ನಾ ಎನ್ನುತ್ತಿದ್ದಾರೆ ಫ್ಯಾನ್ಸ್​. ಹಿನ್ನೆಲೆಯಲ್ಲಿ ಬೆಲೆ ಬಾಳುವ ಸಂಗೀತದ ಇನ್​ಸ್ಟ್ರುಮೆಂಟ್​ ಇರುವುದನ್ನು ನೋಡಿದ ಕಮೆಂಟಿಗರು, ನೀವು ಡ್ಯಾನ್ಸ್​ ಮಾಡುವ ಪರಿಗೆ ಅದನ್ನೆಲ್ಲಾ ಹಾಳು ಮಾಡಿಬಿಟ್ಟರೆ ಎನ್ನುವ ಭಯ ಎಂದು ಕಾಲೆಳೆಯುತ್ತಿದ್ದಾರೆ. ಇದರ ಜೊತೆಗೆ ಸ್ವೀಟ್​, ಹಾಟ್​, ಬಬ್ಲಿ... ಹೀಗೆ ಹಲವಾರು ಹೆಸರುಗಳಿಂದ ನಟಿಯನ್ನು ಕರೆಯುತ್ತಿದ್ದಾರೆ. 

ನೀವು ಯಾವುದೇ ಡ್ರೆಸ್ ಹಾಕಿದ್ರೂ ತುಂಬಾ ಚೆನ್ನಾಗಿ ಕಾಣ್ತೀರಿ, ನೀವು ಗೊಂಬೆಯೇ ಬಿಡಿ ಎಂದು ಫ್ಯಾನ್ಸ್ ಹೇಳುವುದು ಮಾಮೂಲಿಯಾಗಿದೆ. ಇದಕ್ಕೆ ತಕ್ಕಂತೆ ನಟಿ, ತಮ್ಮ ಪತಿಯ ಜೊತೆಗೂಡಿ ಹೋದಲ್ಲಿ ಬಂದಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಒಂಟಿಯಾಗಿ ವಿವಿಧ ರೀತಿಯ ಪೋಸ್​ ನೀಡುತ್ತಿರುತ್ತಾರೆ. ಹಲವು ಬಾರಿ ಇವರು ಮಾಡುವುದೆಲ್ಲವನ್ನೂ ಕ್ಯೂಟ್ ಎಂದೇ ಸಹಿಸಿಕೊಳ್ಳುವ ಫ್ಯಾನ್ಸ್​, ಕೆಲವೊಮ್ಮೆ ಟ್ರೋಲ್​ ಕೂಡ ಮಾಡುತ್ತಾರೆ. ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಡ್ಯಾನ್ಸ್​ ಮಾಡಿ ಜನರಿಗೆ ತೊಂದರೆ ಕೊಟ್ಟಿರುವುದಕ್ಕೆ ಟ್ರೋಲ್​ಗೂ ಒಳಗಾಗಿದ್ದರು. ಆದರೆ ಅಷ್ಟೇ ಪ್ರೀತಿಯನ್ನು ಇವರ ಎಲ್ಲಾ ಫೋಟೋ, ವಿಡಿಯೋಗಳಿಗೂ ನೀಡುತ್ತಿದ್ದಾರೆ. ಈಗ ಪಾಪ್​ ಡ್ರೆಸ್​ನಲ್ಲಿ ನೋಡಿ ಇನ್ನೇನು ನೋಡೋದು ಬಾಕಿ ಇದೆ ಎಂದು ಫ್ಯಾನ್ಸ್​ ಕೇಳುತ್ತಿದ್ದಾರೆ. 

ಸೆಲೆಬ್ರಿಟಿಗಳ ಜೊತೆ ಸಮುದ್ರ ತೀರದಲ್ಲಿ ನಿವೇದಿತಾ ಗೌಡ: ಚಡ್ಡಿ ಗ್ಯಾಂಗ್​ ಎಂದ ಫ್ಯಾನ್ಸ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಗೌತಮ್​- ಭೂಮಿಕಾ ಒಂದಾಗೋ ಹೊತ್ತಲ್ಲೇ ಎಂಟ್ರಿ ಕೊಟ್ಟೇ ಬಿಟ್ರು ರಿಯಲ್​ ಹೆಂಡ್ತಿ, ಮಗಳು!
BBK 12: ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್​ ಎಂಗೇಜ್​ಮೆಂಟ್​ ಕುರಿತು ರಾಶಿಕಾ ಹೇಳಿದ್ದೇನು?