ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಬಳಲ್ತಿರೋ ನಿರ್ದೇಶಕ ಯೋಗರಾಜ್‌ ಭಟ್‌, ಇದಕ್ಕಿರುವ ಪರಿಣಾಮಕಾರಿ ಮನೆಮದ್ದುಗಳೇನು?

Published : Oct 22, 2026, 07:47 PM IST
yogaraj bhat Health

ಸಾರಾಂಶ

ಆಂಕರ್ ಅನುಶ್ರೀ ಅವರ ಕಾರ್ಯಕ್ರಮದಲ್ಲಿ ನಟ ಗಣೇಶ್ ಅವರೊಂದಿಗೆ ಭಾಗವಹಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ತಮಗಿರುವ ಪೈಲ್ಸ್ (ಮೂಲವ್ಯಾಧಿ) ಸಮಸ್ಯೆಯನ್ನು ಹಾಸ್ಯಮಯವಾಗಿ ಬಿಚ್ಚಿಟ್ಟಿದ್ದಾರೆ.

ಕನ್ನಡದ ಪ್ರಸಿದ್ಧ ನಿರ್ದೇಶಕ, ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ಪುನೀತ್‌ ರಾಜ್‌ಕುಮಾರ್‌ ಅವರ ಪರಮಾತ್ಮದಂಥ ಸಿನಿಮಾಗಳ ಮೂಲಕ ಕನ್ನಡ ಸಿನಿ ಅಭಿಮಾನಿಗಳಲ್ಲಿ ನೆಚ್ಚಿನ ಸ್ಥಾನ ಪಡೆದಿರುವ ಯೋಗರಾಜ್‌ ಭಟ್‌ ಅವರಿಗೆ ಹೇಳಿಕೊಳ್ಳಲಾಗದಂತ ಸಮಸ್ಯೆ ಭಾದಿಸಿದೆ. ಇತ್ತೀಚೆಗೆ ಗೋಲ್ಡನ್‌ ಸ್ಟಾರ್ ಗಣೇಶ್‌ ಅವರ 20 ವರ್ಷಗಳ ಸಿನಿ ಜರ್ನಿಯ ಸೆಲಿಬ್ರೇಷನ್‌ನ ಭಾಗವಾಗಿ ಆಂಕರ್‌ ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರೊಂದಿಗೆ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದ ಆರಂಭದಲ್ಲಿ ತಮಗೆ ಇರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲೇ ಯೋಗರಾಜ್‌ ಭಟ್‌ ಅವರನ್ನು ಕಾಲೆಳೆಯಲು ಆರಂಭಿಸಿದ ಗಣೇಶ್‌ ಅವರಿಗೆ 'ಬಹಳ ಸಂದಿಗ್ಥ ಪರಿಸ್ಥಿತಿಯಲ್ಲೂ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ' ಎಂದು ಅನುಶ್ರೀ ನೆನಪಿಸಿದರು. ನಾನು ಶೋಗೆ ಬಂದ ತಕ್ಷಣವೇ ಅವರು ಹೇಳಿದ್ರು, 'ಹಿಂಗಾಗ್ಬಿಟ್ಟಿದೆ ಕಣೋ' ಎಂದರು. ನಮ್ಮ ಜನಕ್ಕೂ ಗೊತ್ತಿಲ್ಲ. ಇವೆಲ್ಲ ಬೇಡ ಅಲ್ವಾ ಸರ್‌ ಎಂದು ಅನುಶ್ರೀ ಹೇಳಿದಾಗ, ಸ್ವತಃ ಯೋಗರಾಜ್‌ ಭಟ್‌ ಅವರೇ ಹೇಳ್ಬಹುದೇನಪ್ಪಾ ಎಂದು ಅನುಮತಿ ಕೊಟ್ಟರು. ಕೊನೆಗೆ ಗಣೇಶ್‌ ಅವರೇ, ಹುಷಾರ್ ಇರಲಿಲ್ಲ. ಅದಕ್ಕೆ ಚೆಕ್‌ಅಪ್‌ಗೆ ಹೋಗಿ ಬಂದಿದ್ದಾರೆ ಎಂದು ಹೇಳಿ ತಿಳಿ ಮಾಡುವ ಪ್ರಯತ್ನ ಮಾಡಿದರು.

ಈ ವೇಳೆ ಸಭಿಕರೊಬ್ಬರು 'ಸೀಕ್ರೆಟ್‌ ಬೇರೆ ಇದೆ' ಎಂದಾಗ, 'ಆ ಸೀಕ್ರೆಟ್‌ ಜಾಗದ್ದೇ ಸಮಸ್ಯೆ' ಎಂದಾಗ ಇಡೀ ಕಾರ್ಯಕ್ರಮ ನಗೆಗಡಲಲ್ಲಿ ತೇಲಿತು. 'ಸರ್‌ ಹಿಂಗೆ ಹೇಳಿದ್ರೆ ತಪ್ಪು ತಿಳ್ಕೊಂಡು ಬಿಡ್ತಾರೆ' ಡೆಂದು ಅನುಶ್ರೀ ಹೇಳಿದಾಗ, 'ಹೆಂಗೋ ಗಣೇಶ್‌ ಈ ವಿಚಾರ ತೆಗೆದಿದ್ದಾನೆ' ಎಂದು ಸ್ವತಃ ಯೋಗರಾಜ್‌ ಭಟ್‌ ಅವರೇ ತಮ್ಮ ಸಮಸ್ಯೆ ಹೇಳಿಕೊಳ್ಳಲು ಆರಂಭಿಸಿದರು.

'ಮರ್ಯಾದೆ ಹೋದ್ರೆ ಚೂರ್‌ ಏನಕ್ಕೆ ಹೋಗ್ಬೇಕು,. ಹೋದ್ರೆ ಪೂರ್ತಿ ಹೋಗಲಿ, ಹೇಳಿ ಬಿಡ್ತನೆ. ನಮಗೆ ಒಬ್ಬರು ಹಿರಿಯ ಡಾಕ್ಟರು. ಈ ಪೃಷ್ಟ, ಮೊಳಕೆ ಅಂತಾ ಕರಿತಾರೆ, ಪೈಲ್ಸ್‌ ಅಂತಾ, ಗುಳ್ಳೆ ಅಂತಾ ಕರೀತಾರೆ. ಅದರದ್ದು ಏನೋ ಅನುಮಾನ ಬಂದು, ಅವರಿಗೆ ತೋರಿಸಲು ಹೋಗಿದ್ದೆ. ಅವರು ಯಾವತ್ತೂ ನನಗೆ ಸಿಕ್ಕಿದ್ರೂ ನನ್ನ ಕಂಡು ಹಿಡಿಯಲಿಲ್ಲ. ಸ್ವಲ್ಪ ವಯಸ್ಸು ಬೇರೆ ಅವರಿಗೆ ಆಗಿದೆ. ನಾನು ಅವರ ಕೈ ಹಿಡಿದುಕೊಂಡು, ಡಾಕ್ಟ್ರೇ ನಿಮಗೆ ಪೇಶಂಟ್‌ಗಳ ಮುಖ ನೋಡಿದ್ರೆ ಗೊತ್ತಾಗಲ್ಲ ಎಂದೆ. ಮುಖದ್ದೊಂದು ಪ್ರಾಸ ನೋಡಿಬಿಡಿ ಎಂದೆ. ಈಸಿಯಾಗಿ ಕಂಡುಹಿಡಿಯಬಹುದು ಎಂದೆ' ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.ಇಂಥ ಫ್ರೆಂಡ್ಸ್‌ ಇದ್ದಿದ್ದ ಕಾರಣಕ್ಕೆ ನಾನು ಡಾಕ್ಟರ್‌ ಆಗಲಿಲ್ಲ ಎಂದು ಗಣೇಶ್‌ ನಗಾಡುತ್ತಲೇ ಹೇಳಿದಾಗ, ಯೋಗರಾಜ್‌ ಭಟ್‌ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಮಾತಿನ ಚಟಾಕಿ ಹಾರಿಸಿದ್ದಾರೆ.

ಪೈಲ್ಸ್‌ಗೆ ಇರೋ ಮನೆಮದ್ದುಗಳೇನು?

ಪೈಲ್ಸ್ (ಮೂಲವ್ಯಾಧಿ) ಸಮಸ್ಯೆಯು ಆರಂಭಿಕ ಅಥವಾ ಸೌಮ್ಯ ಹಂತದಲ್ಲಿದ್ದರೆ ಕೆಲವೊಂದು ಸರಳ ಮನೆಮದ್ದುಗಳು ಹಾಗೂ ಜೀವನಶೈಲಿಯ ಬದಲಾವಣೆಗಳ ಮೂಲಕ ನೋವು, ಊತ ಮತ್ತು ತುರಿಕೆಯಿಂದ ಸುಲಭವಾಗಿ ಉಪಶಮ ಪಡೆಯಬಹುದು. ದಿನಕ್ಕೆ ಎರಡು ಬಾರಿಯಂತೆ ಉಗುರುಬೆಚ್ಚಗಿನ ನೀರಿನ ಟಬ್‌ನಲ್ಲಿ 15 ರಿಂದ 20 ನಿಮಿಷಗಳ ಕಾಲ ಕುಳಿತುಕೊಳ್ಳುವ 'ಸೀಟ್ ಬಾತ್' (Sitz Bath) ತೆಗೆದುಕೊಳ್ಳುವುದು ಹಾಗೂ ಬಾಧಿತ ಜಾಗಕ್ಕೆ ಮಂಜುಗಡ್ಡೆಯ ತುಂಡುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿ 'ಕೋಲ್ಡ್ ಕಂಪ್ರೆಸ್' ಮಾಡುವುದರಿಂದ ಊತ ಮತ್ತು ಕಿರಿಕಿರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರ ಜೊತೆಗೆ, ಮಲವಿಸರ್ಜನೆಯ ನಂತರ ಅಥವಾ ಉರಿಯೂತವಿದ್ದಾಗ ಶುದ್ಧವಾದ ತೆಂಗಿನೆಣ್ಣೆ ಅಥವಾ ತಾಜಾ ಅಲೋವೆರಾ (ಲೋಳೆಸರ) ಜೆಲ್ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗುವುದು ತಪ್ಪಿ, ಉರಿ ತಕ್ಷಣವೇ ಶಮನಗೊಳ್ಳುತ್ತದೆ.

ಈ ಮನೆಮದ್ದುಗಳೊಂದಿಗೆ ದೈನಂದಿನ ಆಹಾರ ಪದ್ಧತಿ ಹಾಗೂ ಶೌಚಾಲಯದ ಅಭ್ಯಾಸಗಳಲ್ಲಿ ಜಾಗರೂಕತೆ ವಹಿಸುವುದು ಅತ್ಯಗತ್ಯ. ಮಲಬದ್ಧತೆಯನ್ನು ತಡೆಗಟ್ಟಲು ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯಬೇಕು ಮತ್ತು ಹಣ್ಣುಗಳು, ಹಸಿರು ತರಕಾರಿಗಳು ಹಾಗೂ ನಾರಿನಾಂಶ (ಫೈಬರ್) ಹೆಚ್ಚಿರುವ ಧಾನ್ಯಗಳನ್ನು ನಿಯಮಿತವಾಗಿ ಸೇವಿಸಬೇಕು. ಅಲ್ಲದೆ, ಮಲವಿಸರ್ಜನೆಯ ಸಮಯದಲ್ಲಿ ಅತಿಯಾಗಿ ಒತ್ತಡ ಹಾಕುವುದು, ಶೌಚಾಲಯದಲ್ಲಿ 5-10 ನಿಮಿಷಕ್ಕಿಂತ ಹೆಚ್ಚು ಸಮಯ ಕುಳಿತುಕೊಳ್ಳುವುದು, ಬಂದ ಮಲವನ್ನು ತಡೆಹಿಡಿಯುವುದು ಮತ್ತು ಅತಿಯಾದ ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ವಜಾಗೊಳಿಸಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುದ್ದು ಮುಖದ ಮೋಕ್ಷಿತಾ ಪೈಗೆ ಹುಟ್ಟುಹಬ್ಬದ ಸಂಭ್ರಮ: ಲಕ್ಷ್ಮೀ ಸಿದ್ದಯ್ಯ, ಮಾನ್ಸಿ ವಿಶ್ ಹೀಗಿತ್ತು!
ಮೈಸೂರು ದಸರಾದಲ್ಲಿ ವಿನಯ್ ಗೌಡಗೆ ಮುಜುಗರ ತಂದ ಘಟನೆ; ಬೆನ್ನು ಬಿಡದ ಸರ್ಕಲ್ ಸೈಡ್!