
ಗೊಂಬೆ ಎಂದೇ ಫೇಮಸ್ ಆಗಿರೋ ನಟಿ ನೇಹಾ ಗೌಡ ಏಳು ವರ್ಷಗಳ ಕಾಲ ಲಕ್ಷ್ಮೀ ಬಾರಮ್ಮಾ ಸೀರಿಯಲ್ನಲ್ಲಿ ಅಭಿನಯಿಸಿ ಭೇಷ್ ಎನಿಸಿಕೊಂಡವರು. ಹೆಚ್ಚಾಗಿ ಸುದೀರ್ಘ ಅವಧಿಯವರೆಗೆ ಒಂದು ಸೀರಿಯಲ್ ನಡೆದಾಗ ಪಾತ್ರಗಳು ಪದೇ ಪದೇ ಬದಲಾಗುತ್ತಲೇ ಇರುತ್ತವೆ. ಇದನ್ನು ವೀಕ್ಷಕರು ಸಹಿಸಿಕೊಳ್ಳುವುದೇ ಇಲ್ಲ. ಅದರಲ್ಲಿಯೂ ನಾಯಕ- ನಾಯಕಿಯ ಪಾತ್ರ ಬದಲಾದರಂತೂ ಮುಗಿದೇ ಹೋಯ್ತು, ವೀಕ್ಷಕರಿಗೆ ಅಡ್ಜಸ್ಟ್ ಆಗಲು ತಿಂಗಳುಗಳೇ ಬೇಕಾಗುತ್ತವೆ. ಆದರೆ ನೇಹಾ ಗೌಡ ಅವರು ವೀಕ್ಷಕರಿಗೆ ಮತ್ತಷ್ಟು ಆಪ್ತರಾಗಲು ಕಾರಣವೂ ಇದೇನೆ. ಅದೇನೆಂದರೆ ಮೊದಲಿನಿಂದಲೂ ನೇಹಾ ಅವರು ಕೊನೆಯ ಎಪಿಸೋಡ್ವರೆಗೂ ಉಳಿದುಕೊಂಡು ವೀಕ್ಷಕರಿಗೆ ಖುಷಿ ಕೊಟ್ಟಿದ್ದಾರೆ. ಇದೀಗ ತಮ್ಮ ಜೀವನದ ಹಲವು ವಿಷಯಗಳು ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಅವರು ಮಾತನಾಡಿದ್ದಾರೆ.
ಏಳು ವರ್ಷಗಳವರೆಗೆ ನಾನೊಬ್ಬಳೇ ಈ ಸೀರಿಯಲ್ನಲ್ಲಿ ಇದ್ದೆ. ಗಂಡನ ಪಾತ್ರಕ್ಕೆ ನಾಲ್ವರು ಬಂದರು, ತಂಗಿಯ ಪಾತ್ರಕ್ಕೆ ಇಬ್ಬರು ಬಂದರು. ಆದರೆ ನಾನು ಮಾತ್ರ ಸೀರಿಯಲ್ ಬಿಡಲಿಲ್ಲ ಎಂದಿದ್ದಾರೆ. ಈ ಸೀರಿಯಲ್ ನನಗೆ ಬದುಕು ಕಟ್ಟಿಕೊಟ್ಟಿದೆ. ಇಂದು ನನ್ನನ್ನು ಜನರು ಎಲ್ಲಿ ಹೋದರೂ ಪ್ರೀತಿಸುತ್ತಾರೆ, ಇಷ್ಟೊಂದು ಗುರುತಿಸುತ್ತಾರೆ ಎಂದರೆ ಅದಕ್ಕೆ ಈ ಸೀರಿಯಲ್ಲೇ ಕಾರಣ ಎಂದಿದ್ದಾರೆ. ಇದೇ ವೇಳೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಕೂಡ ಈ ಸೀರಿಯಲ್ ನೋಡಿ ತಮ್ಮನ್ನು ಅವರ ಮನೆಗೆ ಊಟಕ್ಕೆ ಕರೆದಿದ್ದನ್ನು ನಟಿ ನೆನಪಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ನಾನು ತಮಿಳು ಸೀರಿಯಲ್ನಲ್ಲಿಯೂ ನಟಿಸುತ್ತಿದ್ದೆ. ಪಾರ್ವತಮ್ಮನವರು ಕನ್ನಡದ ಲಕ್ಷ್ಮೀ ಬಾರಮ್ಮ ಮತ್ತು ನನ್ನ ತಮಿಳು ಸೀರಿಯಲ್ ನೋಡುತ್ತಿದ್ದರು. ನನ್ನ ಪಾತ್ರ ಅವರಿಗೆ ಖುಷಿ ಕೊಟ್ಟು ಊಟಕ್ಕೆ ಕರೆದಿದ್ದರು ಎಂದು ಹೇಳಿದ್ದಾರೆ.
ವಾಚ್ ಕೊಡುವುದಾಗಿ ಕರೆದು ಬಾಗಿಲು ಹಾಕಿದ... ಬಾಲ್ಯದ ಮೈನಡುಗುವ ಕರಾಳ ಘಟನೆ ನೆನೆದ ನೇಹಾ ಗೌಡ
ಆದರೆ, ದುರದೃಷ್ಟವಶಾತ್ ನನಗೆ ಅವರ ಮನೆಗೆ ಹೋಗಲು ಆಗಲೇ ಇಲ್ಲ. ಕನ್ನಡ ಮತ್ತು ತಮಿಳು ಸೀರಿಯಲ್ಗಳಲ್ಲಿ ಬಿಜಿಯಾಗಿಬಿಟ್ಟೆ. ಸಿಕ್ಕಾಪಟ್ಟೆ ಟೈಟ್ ಷೆಡ್ಯೂಲ್ ಆಗಿತ್ತು. ಬೇರೆ ಏನೂ ಮಾಡಲು ಆಗದಂಥ ಸ್ಥಿತಿ ಇತ್ತು. ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದೇ ಕಷ್ಟವಿತ್ತು. ಅದಕ್ಕಾಗಿ ಪಾರ್ವತಮ್ಮ ಅವರ ಮನೆಗೆ ಹೋಗಲು ಆಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ನೇಹಾ ಗೌಡ ಕನ್ನಡದ ಜೊತೆಗೆ, ತಮಿಳು ಮತ್ತು ಇತರ ಭಾಷೆಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 'ಸ್ವಾತಿ ಚಿನುಕುಲು', 'ಕಲ್ಯಾಣ ಪಾರಿಸು' ಹಾಗೂ 'ಪಾವಂ ಗಣೇಶನ್' ಅಲ್ಲೂ ಅಭಿನಯಿಸಿದ್ದಾರೆ. ಕನ್ನಡದ ಬಿಗ್ ಬಾಸ್‌ನ 9ನೇ ಸೀಸನ್ಗೂ ಬಂದಿದ್ದರು.
ಸದ್ಯ ನಟಿ ಅಮ್ಮನಾಗಿದ್ದು, ನಟನೆಯಿಂದ ಕೊಂಚ ದೂರ ಸರಿದಿದ್ದಾರೆ. ಬಾಲ್ಯದ ಗೆಳೆಯ. ಉದ್ಯಮಿ ಚಂದನ್ ಅವರನ್ನು 2018ರಲ್ಲಿ ಮದುವೆಯಾಗಿ ಕಳೆದ ಅಕ್ಟೋಬರ್ನಲ್ಲಿ ಮಗಳಿಗೆ ಅಮ್ಮನಾಗಿದ್ದಾರೆ. ಇವರ ಮದುವೆಯ ಬಳಿಕ ರಾಜ ರಾಣಿ ಶೋನಲ್ಲಿ ಭಾಗವಹಿಸಿ ವಿನ್ ಆಗಿದ್ದರು. ಚಂದನ್ ಅವರು, ಅಂತರಪಟ ಸೀರಿಯಲ್ನಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಮತ್ತೆ ನಟಿ ಯಾವಾಗ ಸೀರಿಯಲ್ಗೆ ಬರುತ್ತಾರೆ ಎನ್ನುವ ಕುತೂಹಲದಲ್ಲಿ ಕಾಯುತ್ತಿದ್ದಾರೆ ಅಭಿಮಾನಿಗಳು.
900 ಸಂಚಿಕೆ ಮುಗಿಸಿದ ಪುಟ್ಟಕ್ಕನ ಮಕ್ಕಳು! ಸಾವಿನ ಹೊಡೆತಕ್ಕೆ ತತ್ತರಿಸಿದ ಸೀರಿಯಲ್- ಮುಂದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.