1 ಮದುವೆ ಸೀನ್‌ಗೆ 2 ಕೋಟಿ ರೂ. ಖರ್ಚು ಮಾಡಿದ್ದ ಈ ಸೀರಿಯಲ್‌ ಶುರುವಾಗಿ 16 ವರ್ಷ ಆದ್ರೂ ಮುಗೀತಿಲ್ಲ!

Published : Mar 09, 2025, 04:36 PM ISTUpdated : Mar 09, 2025, 05:00 PM IST
1 ಮದುವೆ ಸೀನ್‌ಗೆ 2 ಕೋಟಿ ರೂ. ಖರ್ಚು ಮಾಡಿದ್ದ ಈ ಸೀರಿಯಲ್‌ ಶುರುವಾಗಿ 16 ವರ್ಷ ಆದ್ರೂ ಮುಗೀತಿಲ್ಲ!

ಸಾರಾಂಶ

Yeh Rishta Kya Kehlata Hai Serial Cast: ಸೀರಿಯಲ್‌ ಎಂದಕೂಡಲೇ ಎಳೆಯುತ್ತಾರೆ ಎಂದು ದೂರು ಬರುವುದು. ಆದರೆ ಇಲ್ಲೊಂದು ಧಾರಾವಾಹಿ 4325 ಎಪಿಸೋಡ್‌ಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. 16 ವರ್ಷಗಳಿಂದ ಪ್ರಸಾರ ಆಗುತ್ತಿರುವ ಈ ಧಾರಾವಾಹಿಯಲ್ಲಿ ಬರುವ ಒಂದು ಮದುವೆಗೆ ಎರಡು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದರೆ ನಂಬ್ತೀರಾ? 

ಸೀರಿಯಲ್‌ ಎಂದತಕ್ಷಣ ಯಪ್ಪಾ.. ಎಂಥ ರಬ್ಬರ್‌ ಬ್ಯಾಂಡ್‌ ಎಳೀತಾರೆ ಅಂತ ದೂರೋದುಂಟು. ಬಹುಶಃ ಹಿಂದಿಯ ʼಯೇ ರಿಶ್ತಾ ಕ್ಯಾ ಕೆಹಲಾತಾ ಹೇʼ ಧಾರಾವಾಹಿ ನೋಡಿ ಈ ರೀತಿ ಹೇಳಿರಬಹುದು. ಹೌದು, 4325 ಎಪಿಸೋಡ್‌ಗಳನ್ನು ಪೂರೈಸಿರುವ ಈ ಧಾರಾವಾಗಿ ಮುಗಿಯುವ ಥರವೇ ಕಾಣ್ತಿಲ್ಲ.

4325 ಎಪಿಸೋಡ್‌ ಅಂದ್ರೆ ಸುಮ್ನೇನಾ? 
2009ರಿಂದ ಈ ಧಾರಾವಾಹಿ ಪ್ರಸಾರ ಆಗಿತ್ತು. ಆರಂಭದಲ್ಲಿ ಅಕ್ಷರಾ, ನೈತಿಕ್‌ ಲವ್‌ಸ್ಟೋರಿ ಕಥೆ ಹೇಳಲಾಗಿತ್ತು. ಇದಾದ ನಂತರದಲ್ಲಿ ಇವರ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಕಥೆ ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ನಿರ್ದೇಶಕರು, ಬರಹಗಾರರು ಬದಲಾದರೂ ಕೂಡ ಸೀರಿಯಲ್‌ ಮಾತ್ರ ಅಂತ್ಯವನ್ನೇ ಕಾಣ್ತಿಲ್ಲ. ಇಂದು ಒಂದು ಧಾರಾವಾಹಿ 500 ಎಪಿಸೋಡ್‌ ಪೂರೈಸಿದ್ರೆ ಅದೇ ಯಶಸ್ಸು ಎಂದು ಹೇಳುವ ಕಾಲದಲ್ಲಿರುವಾಗ ಈ ಸೀರಿಯಲ್‌ 4325 ಎಪಿಸೋಡ್‌ ಪೂರೈಸಿದೆ ಅಂದ್ರೆ ಸಣ್ಣ ವಿಷಯವೇ?

ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಧನ್ಯವಾದ ಹೇಳಿದ ಕ್ಯಾನ್ಸರ್ ಪೀಡಿತ ಹೀನಾ ಖಾನ್

ಅಜ್ಜ-ಅಜ್ಜಿ ಪಾತ್ರಧಾರಿಗಳು ಸಾಯೋದಿಲ್ವಾ? 
ಅಕ್ಷರಾ, ನೈತಿಕ್‌ ನಂತರದಲ್ಲಿ ಇವರ ಮಗಳು ನಾಯ್ರಾ, ಕಾರ್ತಿಕ್‌ ಲವ್‌ಸ್ಟೋರಿ ಶುರುವಾಗುವುದು. ಕಾರ್ತಿಕ್‌-ನಾಯ್ರಾ ಸತ್ತರೂ ಕೂಡ ಅವರ ತಂದೆ-ತಾಯಿ ಪಾತ್ರಗಳು, ಈ ಪಾತ್ರಧಾರಿಗಳು ಇನ್ನೂ ಈ ಸೀರಿಯಲ್‌ನಲ್ಲಿ ಬದುಕಿರೋದು ಮಾತ್ರ ದೊಡ್ಡ ಅಚ್ಚರಿ ಎನ್ನಬಹುದು. 

ಈಗ ಯಾವ ರೀತಿ ಕತೆ ಸಾಗುತ್ತಿದೆ? 
ನಾಯ್ರಾ ಮಗಳು ಅಕ್ಷರಾ, ಅಭಿಮನ್ಯು ಲವ್‌ಸ್ಟೋರಿ ಶುರುವಾಗುವುದು. ಈ ಜೋಡಿಯ ಮಕ್ಕಳ ಕುರಿತು ಈಗ ಕಥೆ ಸಾಗುತ್ತಿದೆ. ಬಳಿಕ ಅರ್ಮಾನ್‌, ಅಭಿರಾ, ರೂಹಿ ಕಥೆ ಸಾಗುತ್ತಿದೆ. ಕಳೆದ ಮೂರು ಸೀಸನ್‌ಗಳಿಂದ ಮುಖ್ಯ ಪಾತ್ರಧಾರಿಗಳು ಬದಲಾಗುತ್ತಿದ್ದಾರೆ, ಆದರೆ ಕಾರ್ತಿಕ್‌ ಅಪ್ಪ-ಅಮ್ಮನ ಪಾತ್ರಗಳು ಮಾತ್ರ ಹಾಗೆ ಇರೋದು ಮಾತ್ರ ನಂಬಲು ಅಸಾಧ್ಯ. ಈ ಧಾರಾವಾಹಿ ಟಿಆರ್‌ಪಿಯಲ್ಲಿಯೂ ಕೂಡ ಕಮಾಲ್‌ ಮಾಡುತ್ತಿರೋದರಿಂದ ಒಂದಷ್ಟು ಸಮಯ ಪೀಳಿಗೆಯ ಕಥೆ ಹೇಳಲಾಗುತ್ತಿದೆ. ಹೀಗೆ ಧಾರಾವಾಹಿ ಕತೆ ಸಾಗುತ್ತಿದೆ. ಈ ಸೀರಿಯಲ್‌ ಕಲಾವಿದರ ಜನಪ್ರಿಯತೆ ಹೆಚ್ಚಿದೆ. ಅದರಲ್ಲಿಯೂ ಆರಂಭದಲ್ಲಿ ಹೀನಾ ಖಾನ್‌ ಅವರು ಅಕ್ಷರಾ ಆಗಿ ಹಿಂದಿ ಕಿರುತೆರೆ ಲೋಕವನ್ನೇ ಆಳಿದ್ದರು ಎನ್ನಬಹುದು. 

2024ರಲ್ಲಿ ಅತಿಹೆಚ್ಚು ಮಂದಿ ಗೂಗಲ್‌ ಸರ್ಚ್ ಮಾಡಿದ ಜಗತ್ತಿನ ಟಾಪ್ 10 ನಟ-ನಟಿಯರಿವರು!

ದುಬಾರಿ ಮದುವೆಗೆ ಖರ್ಚು ಆಗಿದ್ದೆಷ್ಟು? 
2022ರಲ್ಲಿ ನಟಿ ಪ್ರಣಾಲಿ ರಾಥೋಡ್‌ ಅವರು ಈ ಧಾರಾವಾಹಿಯಲ್ಲಿನ ಮದುವೆಯಲ್ಲಿ 2.5 ಲಕ್ಷ ರೂಪಾಯಿಯ ಲೆಹೆಂಗಾ ಧರಿಸಿದ್ದರು. ʼಯೇ ರಿಶ್ಯಾ ಕ್ಯಾ ಕೆಹಲಾತಾ ಹೈʼ ಇತಿಹಾಸದಲ್ಲಿ ಯಾವ ನಟಿಯೂ ಇಷ್ಟು ದುಬಾರಿಯಾದ ಬಟ್ಟೆ ಧರಿಸಿರಲಿಲ್ಲ. ಇನ್ನು ಅಕ್ಷರಾ-ಅಭಿಮನ್ಯು ಕಲ್ಯಾಣವನ್ನು ಕೂಡ ತುಂಬ ಗ್ರ್ಯಾಂಡ್‌ ಆಗಿ ಮಾಡಲಾಗಿತ್ತು. ಇನ್ನು ರಾಜಸ್ಥಾನದ ಅರಮನೆಯಲ್ಲಿ ಈ ಮದುವೆ ಪ್ಲ್ಯಾನ್‌ ಮಾಡಲಾಗಿತ್ತು. ಮದುವೆ ಸೆಟ್‌, ಕಲಾವಿದರಿಗೆ ವಸತಿ ವ್ಯವಸ್ಥೆ ಎಲ್ಲವೂ ಸೇರಿ ಈ ಮದುವೆಗೆ ಎರಡು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ. 

ಈ ಧಾರಾವಾಹಿಗಳಲ್ಲಿ ಬಿರ್ಲಾ ಹಾಗೂ ಗೋಯಂಕಾ ಕುಟುಂಬದ ಕತೆಯಿದೆ. ಇವೆರಡು ಕುಟುಂಬಗಳು ಬಹಳ ಶ್ರೀಮಂತವಾಗಿವೆ. ಹೀಗಾಗಿ ಈ ಸೀರಿಯಲ್‌ನ್ನು ಬಹಳ ಅದ್ದೂರಿಯಾಗಿ ಶೂಟ್‌ ಮಾಡಲಾಗಿತ್ತು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ