
ಕಿರುತೆರೆಯ ಖ್ಯಾತ ನಟಿ, ಆಕಾಶ ದೀಪ ಖ್ಯಾತಿಯ ದಿವ್ಯಾ ಶ್ರೀಧರ್ ದಾಂಪತ್ಯ ಕಲಹ ಪ್ರಕರಣಕ್ಕೆ ಕರ್ನಾಟಕ ಮಹಿಳಾ ಆಯೋಗ ಪ್ರವೇಶ ಮಾಡಿದೆ. ಕರ್ನಾಟಕ ಮೂಲದ ನಟಿ ದಿವ್ಯಾ ಶ್ರೀಧರ್‌ಗೆ ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿದ್ದು, ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅಲ್ಲದೇ ಅವರ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದಾರೆ.
ಮಹಿಳಾ ಆಯೋಗದ ಪತ್ರದಲ್ಲಿ ದಿವ್ಯಾಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ದಿವ್ಯಾ ಶ್ರೀಧರ್ ತನ್ನ ಗಂಡನಿಂದ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರಿಂದ ಅವರಿಗೆ ರಕ್ಷಣೆ ನೀಡಬೇಕು. ಗರ್ಭಿಣಿ ಅನ್ನುವುದನ್ನೂ ನೋಡದೇ ಆಕೆಯ ಪತಿ ಹೊಟ್ಟೆಗೆ ಒದ್ದಿರುವುದು ಗಂಭೀರ ಪ್ರಕರಣ ಎಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ?
ದಿವ್ಯಾ ಸದ್ಯ ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡಿಂದ ಪರಭಾಷೆಗೆ ಹಾರಿದ ನಟಿ ದಿವ್ಯಾ ಅವರಿಗೆ ಆರ್ನವ್ ಅಲಿಯಾಸ್ ಅಮ್ಜದ್ ಅವರ ಪರಿಚಯ ಆಗಿದೆ. ದಿವ್ಯಾಳನ್ನು ಪ್ರೀತಿಸಬೇಕು ಎಂದು ಅಮ್ಜದ್ ಖಾನ್ ಎಂದು ನಿಜವಾದ ಹೆಸರುನ್ನು ಹೇಳದೇ ಆರ್ನವ್ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದರು. ಬಳಿಕ ದಿವ್ಯಾ ಅವರನ್ನೇ ಮದುವೆ ಸಹ ಆದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿಯ ಅಸಲಿ ಮುಖ ಬಹಿರಂಗವಾಗಿದೆ. ದಿವ್ಯಾ ಸದ್ಯ ಮೂರು ತಿಂಗಳ ಗರ್ಭಿಣಿ. ಪತಿ ಕಿತುರುಳ ನೀಡುತ್ತಿದ್ದಾರೆ, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿ ಮತಾಂತರ ಮಾಡಿಸಿದ್ದಾರೆ, ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದಾರೆ. ಅಲ್ಲದೇ ನನಗೆ ನನ್ನ ಮಗುವಿಗೆ ಏನೇ ಆದರೂ ಅದಕ್ಕೆ ಅರ್ನವ್ ಕಾರಣ ಎಂದಿದ್ದಾರೆ.
Divya Sridhar: ಕನ್ನಡದ ನಟಿಗೆ ಕೈಕೊಟ್ಟ ತಮಿಳಿನ ಮುಸ್ಲಿಂ ನಟ: ಇದು ಸೀರಿಯಲ್ ಲವ್ ಜಿಹಾದ್?
2014ರಲ್ಲಿ ಶಕ್ತಿ ಧಾರಾವಾಹಿ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ ಅಮ್ಜದ್ ಖಾನ್ ಮೊಹಮ್ಮದ್ ಅತೀ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಪಡೆದುಕೊಂಡರು. ಈ ಸಮಯದಲ್ಲಿ ದಿವ್ಯಾಳ ಜೊತೆ ಪ್ರೀತಿಯಲ್ಲಿ ಬಿದ್ದು ಆಕೆಗೆ ಜಾತಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾರೆ. ಪೋಷಕರಿಗೆ ಪ್ರೀತಿ ವಿಚಾರ ತಿಳಿಸಬೇಕು ಅವರಿಂದ ಮದುವೆಗೆ ಅನುಮತಿ ಪಡೆಯಬೇಕು ಎಂದು 2022ರ ಫೆಬ್ರವರಿಯಲ್ಲಿ ದಿವ್ಯಾ ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಮದುವೆಯಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಮದುವೆ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದರು. ಈ ನಡುವೆ ಅರ್ನವ್ ಕಿರುತೆರೆಯ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಸತ್ಯ ಬಿಚ್ಚಿಟ್ಟಿದ್ದಾರೆ.
ಮತ್ತೊಬ್ಬಳ ಜತೆ ಅಫೇರ್; ಪತಿಯ ವಿರುದ್ಧ ದೂರು ನೀಡಿದ ಗರ್ಭಿಣಿ ನಟಿ ದಿವ್ಯಾ ಶ್ರೀಧರ್
ವಿಡಿಯೋದಲ್ಲಿ ದಿವ್ಯಾ ಹೇಳಿದ್ದೇನು?
'ನನಗೆ ಅಮ್ಜದ್ ಖಾನ್‌ಗೂ ಮದುವೆ ಆಗಿದೆ. ಆದರೆ ಎಲ್ಲೂ ಹೇಳಿಕೊಳ್ಳಬೇಡಿ ಗೌಪ್ಯವಾಗಿ ಇಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಲಾಕ್‌ಡೌನ್ ಟೈಂನಲ್ಲಿ ಅವನಿಗೆ ಏನೂ ಕಲಸ ಇರಲಿಲ್ಲ.ಕೆಲಸವಿಲ್ಲದೇ ಮನೆಯಲ್ಲಿ ಇದ್ದ, ಆಗ 30 ಲಕ್ಷ ಲೋನ್ ಕೊಡಿಸಿ 30 ಸಾವಿರದಂತೆ ಲೋನ್ ಕಟ್ಟಿದ್ದೇನೆ ಅವನಿಗೆ ಕೆಲಸವಿಲ್ಲದಿದ್ದರೂ ನಾನೇ ಸಾಕಿದ್ದೇನೆ ಮಗುವಿನ ತರಹ ಅವನಿಗೆ ಏನೂ ಆಗದಂತೆ ಜೋಪಾನವಾಗಿ ನೋಡಿಕೊಂಡಿದ್ದೀನಿ' ಎಂದು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.