ಜೈದೇವನನ್ನೇ ಮನೆಯಿಂದ ಹೊರಹಾಕ್ತಾಳಾ ಭೂಮಿಕಾ? ಜೈಲು ಪಾಲಾಗ್ತಾನಾ ಕುತಂತ್ರಿ? ಪೊಲೀಸರ ಎಂಟ್ರಿ!

Published : Mar 02, 2024, 05:51 PM ISTUpdated : Mar 02, 2024, 05:52 PM IST
ಜೈದೇವನನ್ನೇ ಮನೆಯಿಂದ ಹೊರಹಾಕ್ತಾಳಾ ಭೂಮಿಕಾ? ಜೈಲು ಪಾಲಾಗ್ತಾನಾ ಕುತಂತ್ರಿ? ಪೊಲೀಸರ ಎಂಟ್ರಿ!

ಸಾರಾಂಶ

ಜೈದೇವನನ್ನೇ ಮನೆಯಿಂದ ಹೊರಹಾಕ್ತಾಳಾ ಭೂಮಿಕಾ? ಪೊಲೀಸರ ಎಂಟ್ರಿಯಾಗಿದ್ದು ಜೈಲು ಪಾಲಾಗ್ತಾನಾ ಕುತಂತ್ರಿ ಜೈದೇವ?   

ಪತ್ನಿಯೆಂದರೆ ಆಕೆಯನ್ನು ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡಿರುವ ಪತಿಯಂದಿರು ಹಲವರು ಇದ್ದಾರೆ. ತಾನು ಏನು ಮಾಡಿದರೂ ಪತ್ನಿಯಾದವಳು ಬಾಯಿಮುಚ್ಚಿಕೊಂಡು ಇರಬೇಕು, ಎಷ್ಟೇ ದೌರ್ಜನ್ಯ ಎಸಗಿದರೂ ಆಕೆ ಸುಮ್ಮನೆ ಇರಬೇಕು ಎಂದು ಪತಿಯಂದಿರು ಅಂದುಕೊಳ್ಳುವುದು ಒಂದೆಡೆಯಾದರೆ, ಪತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ ಎಷ್ಟೋ ಪತ್ನಿಯರು ಅದನ್ನು ಹೊರಗೆ ಹೇಳಿಕೊಳ್ಳುವುದೇ ಇಲ್ಲ. ಇನ್ನು ತನ್ನ ಮೇಲೆ ಕ್ರೂರವಾಗಿ ದೌರ್ಜನ್ಯ ಎಸಗಿದರೂ, ಅಂಥ ಪತಿಗೆ ಶಿಕ್ಷೆಯಾದರೆ ಅದನ್ನೂ ಸಹಿಸುವುದಿಲ್ಲ. ಇದಕ್ಕೆ ತಕ್ಕಂತೆ ಕೆಲವು ಸಿನಿಮಾಗಳೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿಜ್ರಂಭಿಸುವುದು ಉಂಟು. ಅದನ್ನು ಕಂಡು ಖುಷಿಪಡುವ ದೊಡ್ಡ ವರ್ಗವೇ ಇರುವುದು ಚಿತ್ರದ ಕಲೆಕ್ಷನ್‌ ನೋಡಿದರೆ ತಿಳಿಯುತ್ತದೆ. 

ಇಂಥ ಸ್ಥಿತಿಯಲ್ಲಿ, ಮನೆಯಲ್ಲಿ ಭೂಮಿಕಾ ಅಂಥ ಒಬ್ಬಳು ಇರಬೇಕಲ್ಲವೆ? ಹೆಣ್ಣಿನ ಮೇಲೆ ಆಗುವ ದೌರ್ಜನ್ಯವನ್ನು ಸುಮ್ಮನೇ ನೋಡಿ ಕುಳಿತುಕೊಳ್ಳುವವಳಲ್ಲ ಈಕೆ. ಎಲ್ಲರನ್ನೂ ಎದುರು ಹಾಕಿಕೊಂಡು ಮನೆಯ ಕೆಲಸದಾಕೆ ಮಲ್ಲಿಗೆ ನ್ಯಾಯ ದೊರಕಿಸಿಕೊಟ್ಟ ಭೂಮಿಕಾ, ಇದೀಗ ಮಲ್ಲಿಯ ಸ್ಥಾನವನ್ನು ಆಕೆಗೆ ಕೊಡಿಸಲು ಪ್ರಯತ್ನಿಸುತ್ತಿದ್ದಾಳೆ. ಬಡ ಹೆಣ್ಣುಮಕ್ಕಳು ಎಂದರೆ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಇರುವ ವಸ್ತುಗಳು ಎಂದುಕೊಂಡಿರುವ ಜೈದೇವನಂಥವರಿಗೆ ಇದು ನುಂಗಲಾಗದ ತುತ್ತಾಗುತ್ತದೆ. 

ಸೀತಾರಾಮ ಲವ್​ ಸ್ಟೋರಿ ಶೂಟಿಂಗ್​ ಹೇಗಿತ್ತು? ಸುಂದರ ಕ್ಷಣಗಳ ವಿಡಿಯೋ ರಿಲೀಸ್​ ಮಾಡಿದ ವಾಹಿನಿ...

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ ಜೈದೇವ ಮತ್ತು ಭೂಮಿಕಾ ಮುಖಾಮುಖಿಯಾಗಿದೆ. ಮಲ್ಲಿಯ ಮೇಲೆ ಕೈಮಾಡಿದ ಜೈದೇವನ ವಿರುದ್ಧ ಭೂಮಿಕಾ ಕಿಡಿಕಿಡಿಯಾಗಿದ್ದಾಳೆ. ಅತ್ತೆಯ ಎದುರಿಗೇ ಜೈದೇವನನ್ನು ಝಾಡಿಸಿದ್ದಾಳೆ. ಇಬ್ಬರಿಗೂ ಮಾತಿಗೆ ಮಾತು ಬೆಳೆದಿದೆ. ನಾನು ಅತ್ತಿಗೆ ಎನ್ನುವ ಕಾರಣ ಬಾಯಿಮುಚ್ಚಿಕೊಂಡಿದ್ದೆ, ಇನ್ನೊಂದು ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಜೈದೇವ ಹೇಳಿದರೆ ಭೂಮಿಕಾ ಸುಮ್ಮನೇ ಇರುತ್ತಾಳೆಯೆ?

ಮೈದುನ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡಿದ್ದೆ. ಪತ್ನಿಯನ್ನು ಸರಿಯಾಗಿ ನೋಡದೇ ಹೋದರೆ ಮನೆಯಲ್ಲಿ ಜಾಗವಿರುವುದಿಲ್ಲ ಎಂದಿದ್ದಾಳೆ. ಇದನ್ನು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ. ಇದೇ ವೇಳೆ ಪೊಲೀಸರ ಎಂಟ್ರಿಯಾಗಿದೆ. ಭೂಮಿಕಾಳಿಂದ ತಮಗೆ ಜೈದೇವ ವಿರುದ್ಧ ದೂರು ಬಂದಿರುವುದಾಗಿ ಹೇಳಲಾಗಿದೆ. ಇಷ್ಟೇ ಪ್ರೊಮೋ ಬಿಡುಗಡೆಯಾಗಿದೆ. ಅಸಲಿಗೆ ಭೂಮಿಕಾ ಹೆಸರು ಹೇಳಿ ಬೇರೆಯವರು ದೂರು ಕೊಟ್ಟಂತಿದೆ. ಭೂಮಿಕಾ ವಿರುದ್ಧ ತಂತ್ರ ಮಾಡಲಾಗಿದೆ. ಈ ಮೂಲಕ ಪತಿ-ಪತ್ನಿಯನ್ನು ದೂರ ಮಾಡಲು ನೋಡಲಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಇದೀಗ ಭೂಮಿಕಾ ವಿರುದ್ಧ ಮನೆಯಲ್ಲಿ ಏನಾಗಲಿದೆ ಎನ್ನುವುದು ಕೌತುಕ. 

ಪಕ್ಕದಲ್ಲಿ ಪತ್ನಿ, ಮನದಲ್ಲಿ ಪ್ರೇಯಸಿ: ಅಡ್ಜೆಸ್ಟ್‌ಮೆಂಟ್‌ ಸಂಸಾರ ಸರಿಯಾಗಲು ಸಾಧ್ಯವೆ? ಹೆಂಡ್ತಿಯ ಪಾಡೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?