
ಮನದಲ್ಲಿ ಪ್ರೇಯಸಿ ಕಾಡುತ್ತಿದ್ದರೆ, ಮಕ್ಕಳಿಗಾಗಿ ಅನಿವಾರ್ಯವಾಗಿ ಪತ್ನಿಯ ಜೊತೆಗೆ ಇರುವ ಅನಿವಾರ್ಯ ಈ ಪತಿಗೆ. ಇಂಥ ಸಂಸಾರ ಸರಿಯಾಗಲು ಸಾಧ್ಯವೆ? ಅಡ್ಜಸ್ಟ್‌ಮೆಂಟ್ ಮಾಡಿಕೊಂಡು ಒಲ್ಲದ ಸಂಸಾರವನ್ನು ಸರಿದೂಗಿಸಲು ಆಗುವುದೆ ಎನ್ನುವುದು ಈಗಿರುವ ಪ್ರಶ್ನೆ. ಇತ್ತ ಪ್ರೇಯಸಿಯನ್ನು ಬಿಡಲಾಗದ ಸ್ಥಿತಿ, ಅಪ್ಪ-ಅಮ್ಮ ಮತ್ತು ವಿಶೇಷವಾಗಿ ಮಕ್ಕಳ ಮೇಲಿನ ಪ್ರೀತಿ ಹಾಗೂ ಮಗನ ಜಿದ್ದಿನಿಂದ ಪತ್ನಿಯನ್ನೂ ಬಿಡಲು ಆಗದ ಸ್ಥಿತಿ. ಹಾಗಿದ್ದರೆ ಮುಂದೇನು? ಇಂಥ ಸಂಸಾರ ಎಷ್ಟು ದಿನ? ಪತಿಯ ಹೀಯಾಳಿಕೆಯನ್ನು ಸಹಿಸಿಕೊಂಡು, ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುವ ಪತ್ನಿಯ ಕಷ್ಟಕ್ಕೆ ಕೊನೆ ಎಂದು? ಅತ್ತ ಪತಿ-ಪತ್ನಿಯನ್ನು ದೂರ ಮಾಡಿ ಎರಡು ಮಕ್ಕಳ ತಂದೆಯನ್ನು ತನ್ನದಾಗಿಸಿಕೊಳ್ಳುವ ಶತಪ್ರಯತ್ನ ಮಾಡುತ್ತಿರುವ ಪ್ರೇಯಸಿ ಮುಂದೇನು ಕುತಂತ್ರ ಮಾಡಬಹುದು?
ಇವೆಲ್ಲಾ ಪ್ರಶ್ನೆಗಳನ್ನು ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಹುಟ್ಟುಹಾಕಿದೆ. ಮಗ ಗುಂಡನಿಂದಾಗಿ ಅಪ್ಪ ತಾಂಡವ್‌ಗೆ ಪತ್ನಿ ಭಾಗ್ಯಳನ್ನು ಮನೆಗೆ ಕರೆತರುವ ಅನಿವಾರ್ಯತೆ ಉಂಟಾಗಿದೆ. ಏಕೆಂದರೆ, ತಾಂಡವ್ ತನ್ನ ಅಮ್ಮನಿಗೆ ಡಿವೋರ್ಸ್ ಕೊಡಬೇಕು ಅಂತ ಮಾಡಿರೋ ವಿಷ್ಯ ಮಗ ಗುಂಡನಿಗೆ ತಿಳಿದುಬಿಟ್ಟಿದೆ. ಅದೂ ಅಲ್ಲದೇ ಅಮ್ಮನಿಗೆ ಹುಷಾರ್ ಇಲ್ಲ ಎನ್ನುವ ಕಾರಣಕ್ಕೆ ಅಜ್ಜಿ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದೂ ಸುಳ್ಳು ಎಂದು ಗೊತ್ತಾಗಿದೆ. ಅಮ್ಮ ಭಾಗ್ಯ ಶಾಲೆಗೆ ಹೋಗಿದ್ದರಿಂದ ಎಲ್ಲರೂ ಸೇರಿ ನಾಟಕವಾಡುತ್ತಿದ್ದಾರೆ, ಅಮ್ಮನನ್ನು ದೂರ ಮಾಡಿದ್ದಾರೆ ಎನ್ನುವ ಸತ್ಯ ಮಕ್ಕಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಅಪ್ಪನಿಗೆ ಪ್ರಶ್ನೆ ಮಾಡಿದ್ದಾನೆ ಗುಂಡ. ನಮಗೆ ನೀವು ಬೇಡ, ಅಮ್ಮ ಬೇಕು ಎಂದಿದ್ದಾರೆ ಮಕ್ಕಳು. ನಮ್ಮಿಬ್ಬರನ್ನು ಹಂಚಿಕೊಳ್ಳಬೇಡಿ ಎಂದಿದ್ದಾನೆ ಗುಂಡ.
ಸಪ್ತಸಾಗರದಾಚೆ ಎಲ್ಲೋ ಚಿತ್ರದ ಎ ಮತ್ತು ಬಿ ಸೈಡ್ ಒಂದೇ ನಿಮಿಷದಲ್ಲಿ ನೋಡಿ! ಇಲ್ಲಿದೆ ವಿಡಿಯೋ...
ಒಂದು ಕಡೆ ಮಕ್ಕಳು, ಇನ್ನೊಂದು ಕಡೆ ಶ್ರೇಷ್ಠಾ. ಅಡಕತ್ತರಿಯಲ್ಲಿ ತಾಂಡವ್ ಸಿಲುಕಿದ್ದಾನೆ. ಇದೇ ವೇಳೆ ಗುಂಡ ಅಪ್ಪನಿಗೆ ಪ್ರಾಮಿಸ್ ಮಾಡಲು ಹೇಳಿದ್ದಾನೆ. ಮಕ್ಕಳನ್ನು ಹಂಚಿಕೊಳ್ಳುವುದಿಲ್ಲ, ಅಮ್ಮ ತಮ್ಮ ಜೊತೆಯಲ್ಲಿಯೇ ಇರುತ್ತಾಳೆ ಎಂದು ಪ್ರಾಮಿಸ್ ಮಾಡುವಂತೆ ಹೇಳಿದ್ದಾನೆ. ಬೇರೆ ದಾರಿ ಕಾಣದೇ ತಾಂಡವ್ ಮಗನಿಗೆ ಪ್ರಾಮಿಸ್ ಮಾಡಿದ್ದಾನೆ. ಅಲ್ಲಿಯೇ ಇದ್ದ ಶ್ರೇಷ್ಠಾ ಇದನ್ನು ನೋಡಿ ಕಂಗಾಲಾಗಿ ಹೋಗಿದ್ದಾಳೆ. ತಾಂಡವ್‌ಗೆ ಈಗ ಭಾಗ್ಯಳನ್ನು ಮನೆಗೆ ಕರೆತರುವುದು ಅನಿವಾರ್ಯವಾಗಿದೆ. ಅತ್ತ ಶ್ರೇಷ್ಠಾಳನ್ನೂ ಬಿಡುವಂತಿಲ್ಲ. ಇದೀಗ ಇಟ್ಟುಕೊಂಡವಳಾ? ಕಟ್ಟಿಕೊಂಡವಳಾ ಎನ್ನುವ ಸ್ಥಿತಿ ತಾಂಡವ್ದು.
ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಗುಂಡ, ಅಪ್ಪ ಅಮ್ಮ ಇಬ್ಬರೂ ಸೇರಿ ತನಗೆ ಜೋಕಾಲಿ ಆಡಿಸಬೇಕು ಎಂದಿದ್ದಾನೆ. ಮಗನ ಹಟಕ್ಕೆ ಬಿದ್ದು ತಾಂಡವ್ ಒಪ್ಪಿಕೊಂಡಿದ್ದಾನೆ. ಮನಸ್ಸಿನಲ್ಲಿ ಶ್ರೇಷ್ಠಾ ಏನು ಅಂದುಕೊಳ್ಳುತ್ತಾಳೋ ಎನ್ನುವ ನೋವು. ಇತ್ತ ಮಗನ ಒತ್ತಾಯಕ್ಕೆ ಮಣಿದು ಪತಿ, ಹೀಗೆ ನಡೆದುಕೊಳ್ಳುತ್ತಿದ್ದು, ತನ್ನ ಭವಿಷ್ಯ ಏನು ಎನ್ನುವ ಚಿಂತೆ ಪತ್ನಿ ಭಾಗ್ಯಳದ್ದು. ತಮ್ಮ ಸಂಸಾರ ಸರಿ ಆಗುವ ಯಾವುದೇ ಸೂಚನೆ ಆಕೆಗೆ ಕಾಣುತ್ತಿಲ್ಲ. ಮುಂದೇನು ಎನ್ನುವ ಪ್ರಶ್ನೆ ಈಗ ವೀಕ್ಷಕರದ್ದು.
ಸೀತಾರಾಮ ಲವ್ ಸ್ಟೋರಿ ಶೂಟಿಂಗ್ ಹೇಗಿತ್ತು? ಸುಂದರ ಕ್ಷಣಗಳ ವಿಡಿಯೋ ರಿಲೀಸ್ ಮಾಡಿದ ವಾಹಿನಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.