ಬಿಗ್ಬಾಸ್ 11 ಇನ್ನೂ ಫಿನಾಲೆ ಹಂತಕ್ಕೆ ಬಂದಿಲ್ಲ. ವಿನ್ನರ್ ಯಾರಾಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇರುವ ನಡುವೆಯೇ ವಿಕಿಪಿಡಿಯಾ ವಿನ್ನರ್ ಹೆಸರನ್ನು ಘೋಷಿಸಿಬಿಟ್ಟಿದೆ!
ಬಿಗ್ಬಾಸ್ ವಿನ್ನರ್ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಫಿನಾಲೆಗೆ ಹೋಗಬಹುದು ಎಂದು ಲೆಕ್ಕಾಚಾರ ಹಾಕಿ ಕುಳಿತಿದ್ದ, ಫೈರ್ ಬ್ರಾಂಡ್' ಎಂದೇ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಹೊರಕ್ಕೆ ಬಂದಿದ್ದಾರೆ. ಇದರ ನಡುವೆಯೇ, ವಿನ್ನರ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಹನುಮಂತುಗೆ ಫಿನಾಲೆಗೆ ನೇರವಾಗಿ ಟಿಕೆಟ್ ಸಿಕ್ಕಿದೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನುಮಂತ ಅಂತಮವಾಗಿ ಫಿನಾಲೆ ಘಟ್ಟಕ್ಕೆ ಬಂದಿದ್ದಾರೆ. ರಜತ್, ತ್ರಿವಿಕ್ರಮ್, ಭವ್ಯಾ ಗೌಡ ಅವರಿಗೆ ಶಾಕ್ ಆಗಿದ್ದು, ಫಿನಾಲೆ ಟಿಕೆಟ್ ಮಿಸ್ ಆಗಿದೆ. ಅಷ್ಟಕ್ಕೂ ಹನುಮಂತ ಅವರ ಮೇಲೆ ಎಲ್ಲರಿಗೂ ಪ್ರೀತಿ ತುಸು ಹೆಚ್ಚೇ ಎಂದು ಹೇಳಬಹುದು. ಇವರು ಮುಗ್ಧತೆಯ ಮುಖವಾಡ ಹಾಕಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಮೀಮ್ಸ್ಗಳು ಹರಿದಾಡುತ್ತಿದ್ದರೂ, ಬಡವ ಎಂದುಕೊಂಡು ವಿದೇಶಗಳಿಗೆ ಸುತ್ತಾಡಿದ್ದಾರೆ ಎಂಬೆಲ್ಲಾ ಆಪಾದನೆ ಹೊತ್ತಿಕೊಂಡಿದ್ದರೂ, ಇವರನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ.
ಇದು ಹೊರಗಿನವರ ಮಾತಾದರೆ, ಬಿಗ್ಬಾಸ್ ಮನೆಯಲ್ಲಿಯೂ ಎಲ್ಲರಿಗೂ ಇವರು ಎಂದರೆ ಅಚ್ಚು ಮೆಚ್ಚು. ಉಳಿದ ಸ್ಪರ್ಧಿಗಳ ಜೊತೆ ಪ್ರೀತಿ-ವಿಶ್ವಾಸದಿಂದಲೇ ಇದ್ದಾರೆ. ಇದು ಮಾತ್ರವಲ್ಲದೇ, ಇವರು ಬಹುತೇಕ ಟಾಸ್ಕ್ಗಳನ್ನು ಬೇಗ ಬೇಗ ಮುಗಿಸಿದವರು. ಕೊನೆಯಲ್ಲಿ ಕೇವಲ 2 ನಿಮಿಷ 27 ಸೆಕೆಂಡ್ಗಳಲ್ಲಿ ವಿನ್ ಆಗಿದ್ದಾರೆ. ಇವರ ಈ ವಿಜಯೋತ್ಸಾಹವನ್ನು ಸಿನಿ ತಾರೆಯರಾದ ಶರಣ್ ಮತ್ತು ಅದಿತಿ ಪ್ರಭುದೇವ ಆಚರಿಸಿದ್ದು, ಫಿನಾಲೆಯ ಟಿಕೆಟ್ ನೀಡಿದರು.
ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರಗೆ ವಂಚನೆ ಪ್ರಕರಣದಲ್ಲಿ ಮತ್ತೆ ಸಂಕಷ್ಟ!
ಆದರೆ ಇವೆಲ್ಲದರ ನಡುವೆಯೇ, ವಿಕಿಪಿಡಿಯಾದಲ್ಲಿ ಬಿಗ್ಬಾಸ್-11ರ ವಿಜೇತರ ಹೆಸರು ಪ್ರಕಟವಾಗಿದ್ದು, ಅದರಲ್ಲಿ ಹನುಮಂತ ಎಂದೇ ಘೋಷಿಸಲಾಗಿಬಿಟ್ಟಿದೆ. ಏನೇ ವಿಷಯ ಇರಲಿ, ಯಾವುದೇ ಡೌಟ್ ಇರಲಿ, ಸಾಮಾನ್ಯವಾಗಿ ಎಲ್ಲರೂ ಮೊದಲು ಗೂಗಲ್, ವಿಕಿಪಿಡಿಯಾ ಚೆಕ್ ಮಾಡುತ್ತಾರೆ. ಆದರೆ, ಬಿಗ್ಬಾಸ್ ನೋಡದೇ ಇರುವವರು, ಸುಮ್ಮನೇ ಕುತೂಹಲದಿಂದ ಇದನ್ನು ನೋಡಿದಾಗ ಹನುಮಂತನೇ ವಿಜೇತ ಎಂದುಕೊಂಡುಬಿಟ್ಟಿದ್ದಾರೆ. ಇನ್ನು ಬಿಗ್ಬಾಸ್ ಪ್ರಿಯರಂತೂ ಮೊದಲೇ ಅನೌನ್ಸ್ ಆಗಿರುವುದನ್ನು ನೋಡಿ ಶಾಕ್ಗೆ ಒಳಗಾಗಿದ್ದಾರೆ. ಹನುಮಂತು ಅಭಿಮಾನಿಗಳಿಗೆ ಕೇಳುವುದೇ ಬೇಡ, ಖುಷಿಯೋ ಖುಷಿ. ಹನುಮಂತನೇ ವಿನ್ನರ್ ಎಂದು ಬಹುತೇಕ ಮಂದಿ ಅಂದುಕೊಂಡಿರುವ ನಡುವೆಯೇ ಇದು ಅನೌನ್ಸ್ ಆಗಿದೆ.
ಆದರೆ, ಈ ಸುದ್ದಿ ವೈರಲ್ ಆಗುತ್ತಲೇ, ವಿಕಿಪಿಡಿಯಾ ಎಚ್ಚೆತ್ತುಕೊಂಡಿದೆ. ಇದೀಗ, TBA ಅಂದ್ರೆ "to be announced" ಅಂದರೆ ಇನ್ನೂ ಘೋಷಣೆಯಾಗಬೇಕಿದೆಯಷ್ಟೇ ಎಂದು ಕರೆಕ್ಷನ್ ಮಾಡಿಕೊಂಡಿದೆ. ಆದರೆ ಹಳೆಯ ಸ್ಕ್ರೀನ್ಷಾಟ್ ವೈರಲ್ ಆಗುತ್ತಿದ್ದು, ಇದೇ ನಿಜವಾಗಲಿ ಎಂದು ಹನುಮಂತನ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್; ಕೊನೆಯ ಮಾತುಗಳು ಏನಾಗಿತ್ತು ನೋಡಿ!