ಎಲ್ರಿಗಿಂತ ಡಿಫರೆಂಟ್ ಆಗಿದ್ದೂ ನಿರ್ಮಲಾ ಎಲೆಮಿನೇಟ್ ಆಗಿದ್ಯಾಕೆ!

Suvarna News   | Asianet News
Published : Mar 15, 2021, 01:33 PM IST
ಎಲ್ರಿಗಿಂತ ಡಿಫರೆಂಟ್ ಆಗಿದ್ದೂ ನಿರ್ಮಲಾ ಎಲೆಮಿನೇಟ್ ಆಗಿದ್ಯಾಕೆ!

ಸಾರಾಂಶ

ಬಿಗ್‌ಬಾಸ್‌ ಸೀಸನ್ 8ನಿಂದ ಸ್ಪರ್ಧಿ ನಿರ್ಮಲಾ ಚೆನ್ನಪ್ಪ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಎಲ್ಲರಿಗಿಂತ ಡಿಫರೆಂಟ್ ಆಗಿದ್ದೂ ಅವರು ಎಲಿಮಿನೇಟ್ ಆಗೋದಕ್ಕೆ ಕಾರಣ ಏನು?  

ಬಿಗ್ ಬಾಸ್ ಸೀಸನ್ 8 ಶುರುವಾಗಿ ಆಗಲೇ ಹದಿನೈದು ದಿನಗಳು ಕಳೆದಿವೆ. ಈ ಎರಡು ವಾರಗಳ ಗ್ಯಾಪ್ ನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಕಳೆದ ಬಾರಿ ಧನುಶ್ರೀ ದೊಡ್ಡ ಮನೆಯಿಂದ ಆಚೆ ಹೋದರೆ ಈ ಬಾರಿ ನಿರ್ಮಲಾ ಚೆನ್ನಪ್ಪ ಆಚೆ ಬಂದಿದ್ದಾರೆ. ಆದರೆ ಸ್ವತಃ ಸ್ಪರ್ಧಿಗಳಿಗೂ ಇದು ಅನ್ ಎಕ್ಸಪೆಕ್ಟೆಡ್. ಜನ ಸಾಮಾನ್ಯರ ಯೋಚನೆಯೂ ತಲೆ ಕೆಳಗಾಗಿದೆ. ಯಾಕೆ ಈ ಸಲ ನಿರ್ಮಲಾ ಎಲಿಮಿನೇಟ್ ಆದರು ಅಂತ ಜನರೂ ತಲೆ ಕೆಡಿಸಿಕೊಳ್ತಿದ್ದಾರೆ. 

ಹಾಗೆ ನೋಡಿದರೆ ನಿರ್ಮಲಾಗೆ ಬಿಗ್ ಬಾಸ್ ಮನೆ ಶುರುವಿಂದಲೂ ರಾಂಗ್ ಹೊಡೆದಿದ್ದು ಹೌದು. ಎಲ್ಲಾ ಸ್ಪರ್ಧಿಗಳೂ ಒಂದು ತರ ಆದರೆ ಇವರೊಬ್ಬರದು ಬೇರೆಯದೇ ಕತೆ. ಬಿಗ್‌ಬಾಸ್ ಮನೆಗೆ ಬಂದ ನಿರ್ಮಲಾ ಸೆಲೆಬ್ರಿಟಿ ಆಗಿದ್ದರೂ ಅವರ ವರ್ತನೆಯಲ್ಲಿ, ಡ್ರೆಸಿಂಗ್ ಸ್ಟೈಲ್‌ನಲ್ಲಿ ಅದು ಕಾಣುತ್ತಿರಲಿಲ್ಲ. ಎಲ್ಲಾ ವಿಚಾರದಲ್ಲೂ ಅವರ ನಡೆ ನುಡಿ ಉಳಿದವರಿಗಿಂತ ಕಂಪ್ಲೀಟ್ ಆಗಿ ಬೇರೆ ಆಗಿತ್ತು. 

ಮನೆಯಲ್ಲಿರುವ ಎಲ್ಲರೂ ಫೇಕ್.. ಎರಡನೇ ವಾರ ಮಾತಿನ ಮಲ್ಲಿ ಹೊರಕ್ಕೆ ...

ಆದರೆ ಟೀಮ್ ನಲ್ಲಿ ಡಿಫರೆಂಟ್ ಪರ್ಸನಾಟಿಗಳಿರಬೇಕು ಅನ್ನೋದು ಮೊದಲಿಂದಲೂ ಬಿಗ್ ಬಾಸ್ ರೂಲ್. ಒಬ್ಬರ ಥರವೇ ಇನ್ನೊಬ್ಬರು ಇದ್ದರೆ ಅವರನ್ನು ಎಲಿಮಿನೇಟ್ ಮಾಡೋದು ಅನಿವಾರ್ಯ ಅಂತ ಈ ಟೀಮ್ ನ ಮುಖ್ಯಸ್ಥರೇ ಹೇಳಿದ್ದರು. ಅವರು ಕ್ರಿಕೆಟ್ ಟೀಮ್‌ನ ಉದಾಹರಣೆ ಕೊಟ್ಟು ಇಷ್ಟು ಜನ ಬೌಲರ್ಸ್, ಇಷ್ಟು ಜನ ಬ್ಯಾಟ್ಸ್ ಮನ್, ಒಬ್ಬ ಕೀಪರ್ ಟೀಮ್‌ನಲ್ಲಿರುತ್ತಾರೆ. ಒಬ್ಬ ಕೀಪರ್ ಇರಬೇಕಾದಲ್ಲಿ ಇಬ್ಬರು ಇದ್ದರೆ ಅವರನ್ನು ಟೀಮ್‌ನಿಂದ ತೆಗೆಯೋದು ಅನಿವಾರ್ಯ ಅಂದಿದ್ದರು. ಈ ಲೆಕ್ಕಾಚಾರ ತಗೊಂಡರೆ ನಿರ್ಮಲಾ ಖಂಡಿತಾ ಭಿನ್ನ ಕಂಟೆಸ್ಟೆಂಟೇ. ಅವರ ಆಟ ಶುರುವಿನಿಂದಲೇ ಡಿಫರೆಂಟ್ ಆಗಿ ಇತ್ತು. ಇದನ್ಯಾಕೆ ಬಿಗ್ ಬಾಸ್ ಪರಿಗಣಿಸಿಲ್ಲ ಅನ್ನೋದು ಪ್ರಶ್ನೆ. 
 


ಇನ್ನೊಂದು ಅಂದ್ರೆ ಕೊನೆಯ ರೌಂಡ್‌ನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗಬಹುದು ಅಂತ ಸುದೀಪ್ ಟೀಮ್ ಮೆಂಬರ್ಸ್ ಗೆ ಕೇಳಿದಾ ಹೆಚ್ಚಿನವರು ಹೇಳಿದ್ದು ಗೀತಾ ಭಾರತಿ ಹೆಸರು. ಆಕೆಯ ಪರ್ಫಾಮೆನ್ಸ್ ಲೋ ಇದೆ ಅನ್ನೋದು ಇದಕ್ಕೆ ಅವರು ಕೊಟ್ಟ ಕಾರಣ. ಒಬ್ಬ ಸ್ಪರ್ಧಿಯೂ ನಿರ್ಮಲಾ ಹೆಸರು ಹೇಳಿಲ್ಲ. ಯಾಕೆಂದರೆ ನಿರ್ಮಲಾ ತಮ್ಮ ಭಿನ್ನ ವರ್ತನೆಯಿಂದಲೇ ಈ ಬಾರಿಯೂ ಉಳಿಯಬಹುದು ಅನ್ನುವುದು ಅವರ ಯೋಚನೆ ಆಗಿತ್ತು. 

ದಿಂಬು, ಫೀಡಿಂಗ್ ಬಾಟಲ್ಲು.. ಶುಭಾ ಪೂಂಜಾಗೆ ಇದೆಲ್ಲ ಬೇಕಿತ್ತಾ! ...

ಆದರೆ ನಿರ್ಮಲಾಗೆ ನಿಜಕ್ಕೂ ರಾಂಗ್ ಆಗಿರೋದು ಜನರ ಓಟಿಂಗ್. ಆರಂಭದಿಂದಲೂ ನೆಗೆಟಿವ್ ವಿಚಾರಕ್ಕೇ ಮನೆಯಲ್ಲಿ ಚರ್ಚೆಯಲ್ಲಿದ್ದವರು ನಿರ್ಮಲಾ. ಅವರ ವರ್ತನೆ ಮನೆಯವರಿಗೆ ಮಾತ್ರವಲ್ಲ, ನೋಡುತ್ತಿದ್ದ ವೀಕ್ಷಕರಿಗೂ ಅಸಹಜ ಅನಿಸಿದೆ. ಹೀಗಾಗಿ ಅವರಿಗೆ ನೆಗೆಟಿವ್ ಓಟಿಂಗ್ ಹೆಚ್ಚು ಬಿದ್ದಿದೆ. 
ಇನ್ನೊಂದು ಕಾರಣ ಯಾರು ಫೇಕ್, ಯಾರು ರಿಯಲ್ ಅನ್ನುವ ಟಾಸ್ಕ್ ನಲ್ಲಿ ಅತೀ ಹೆಚ್ಚು ಜನ ನಿರ್ಮಲಾಗೆ ಫೇಕ್ ಅಂತ ರಾಂಗ್ ಟಿಕ್ ಹಾಕಿದ್ರು. ಇದಕ್ಕೆ ಹೆಚ್ಚಿನವರು ನೀಡಿದ ಕಾರಣ, ನಿರ್ಮಲಾ ರಿಯಲ್ ಆಗಿ ಇರಲಿಲ್ಲ. ಅವರು ಬೇಕೆಂದೇ ಅಸಹಜ ವರ್ತನೆ ತೋರುತ್ತಿದ್ದಾರೆ ಅಂತ. ತಾವೇನು ಅಲ್ಲವೋ ಅದು ತಾವು ಅಂತ ತೋರಿಸೋ ಕಸರತ್ತು ಮಾಡುವವರ ಚಟುವಟಿಕೆಗಳಲ್ಲಿ ಅಸಹಜತೆ ಎದ್ದು ಕಾಣುತ್ತೆ. ನಿರ್ಮಲಾ ವರ್ತನೆಯಲ್ಲೂ ಇದು ಎದ್ದು ಕಾಣುತ್ತಿತ್ತು. ಸೋ, ಫೇಕ್ ಕಂಟೆಸ್ಟೆಂಟ್‌ ಅನ್ನು ಹೆಚ್ಚು ದಿನ ಇಟ್ಟುಕೊಳ್ಳೋದು ಸೂಕ್ತ ಅಂತ ಬಿಗ್‌ ಬಾಸ್ಗೆ ಅನಿಸಿರಬಹುದು. 

ನೀವು ಬಿಗ್‌ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಜೊತೆಗೆ ಹೊಂದಿಕೊಂಡು ಹೋಗೋದೂ ಈ ಸ್ಪರ್ಧೆಯಲ್ಲಿ ಬಹಳ ಮುಖ್ಯ ಅನಿಸುತ್ತೆ. ಆದರೆ ನಿರ್ಮಲಾರಿಂದ ಇದು ಸಾಧ್ಯವೇ ಆಗಿರಲಿಲ್ಲ. ಹೀಗಿರುವುದೇ ತನ್ನನ್ನು ಮನೆಯಲ್ಲಿ ಹೆಚ್ಚು ದಿನ ಉಳಿಸಬಹುದು ಅಂತ ಅವರಿಗೆ ಅನಿಸಿರಬಹುದು. ಆದರೆ ಅದಿಲ್ಲಿ ಅವರಿಗೆ ನೆಗೆಟಿವ್ ಆಗಿಯೇ ಹೊಡೆಯಿತು. 

ಕೊನೆಯಲ್ಲಿ ನಿರ್ಮಲಾ ತಾನು ಮನೆಯಲ್ಲಿ ಯಾಕೆ ಉಳಿದುಕೊಳ್ಳಬೇಕು ಅನ್ನೋದಕ್ಕೆ ಸಮರ್ಥವಾದ ಕಾರಣ ನೀಡಲು ವಿಫಲವಾದರು. ಉಳಿದೆಲ್ಲ ಸ್ಫರ್ಧಿಗಳನ್ನು ಪ್ರೋತ್ಸಾಹಿಸುತ್ತೇನೆ ಅನ್ನುವ ರೀತಿಯ ಅವರ ಮಾತುಗಳು ಕೊಂಚ ಅಹಂನಿಂದ ಕೂಡಿದವರು ಅನ್ನೋ ಥರ ಇತ್ತು. 

ಈ ಎಲ್ಲ ಕಾರಣಕ್ಕೆ ನಿರ್ಮಲಾ ಚೆನ್ನಪ್ಪ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. 
"
ಬಿಗ್‌ಬಾಸ್‌ ಮನೆಯ ಮೊದಲ ಕಂಟೆಸ್ಟೆಂಟ್‌ ಕಳೆದ ವಾರ ಔಟ್‌ ಆದರೆ, ಕೊನೆಯ ಕಂಟೆಸ್ಟೆಂಟ್ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ. ಲಾಸ್ಟ್‌ನಿಂದ ಎರಡನೆಯವರು ಪ್ರಶಾಂತ್ ಸಂಬರಗಿ. ನೆಕ್ಸ್ಟ್‌ ವೀಕ್‌ಗೆ ನೇರ ನಾಮಿನೇಟ್ ಆಗಿದ್ದಾರೆ. ಅವರ ಹಣೆಬರಹ ಮುಂದಿನ ವಾರ ಗೊತ್ತಾಗುತ್ತೆ. 

ಪ್ರಿಯಾಂಕಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿ ರಿಜೆಕ್ಟ್‌ ಆದ ದೀಪಿಕಾರ ಎಕ್ಸ್! ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!