ವೈಷ್ಣವ್‌ ಲಕ್ಷ್ಮೀ ಹನಿಮೂನ್‌ನಲ್ಲಿ ಕರಡಿಯಂತೆ ಬಂದ ಕೀರ್ತಿ! ಬಿಂದಾಸ್ ಡ್ಯಾನ್ಸ್‌ ಮಾಡಿದವಳಿಗೆ ನೆಟ್ಟಿಗರ ಬೆಂಬಲ

By Bhavani Bhat  |  First Published Jan 15, 2025, 9:33 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಸಿಂಗರ್‌ ವೈಷ್ಣವ್‌ ಮತ್ತು ಲಕ್ಷ್ಮಿಯ ಹನಿಮೂನ್‌ ನಡುವೆ ಕರಡಿಯಂತೆ ಕೀರ್ತಿ ಎಂಟ್ರಿ ಆಗಿದೆ. ಆದರೆ ಈಕೆ ಆಡ್ತಿರೋ ರೀತಿಗೆ ಜನ ಬೈಯ್ಯೋ ಬದಲು ಸಪೋರ್ಟ್‌ ಮಾಡ್ತಿದ್ದಾರೆ. 
 


ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಸದ್ಯ ಕೀರ್ತಿ ಪಾತ್ರವೇ ಹೈಲೈಟ್‌. ಒಂದು ಸಲ ಈ ಪಾತ್ರವನ್ನು ಸಾಯಿಸಿ ಮತ್ತೆ ಬದುಕಿಸಿ ಇದೀಗ ತಲೆ ಕೆಟ್ಟ ಹಾಗೆ ತೋರಿಸಿ ವೀಕ್ಷಕರ ತಲೆಯನ್ನೂ ಕೆಡಿಸ್ತಿದೆ ಸೀರಿಯಲ್‌ ಟೀಮ್‌ ಅನ್ನೋದು ಈ ಸೀರಿಯಲ್ ನೋಡೋ ಮಂದಿಯ ಕಂಪ್ಲೇಂಟ್‌. ಅದಕ್ಕೆ ತಕ್ಕಂತೆ ಈ ಸೀರಿಯಲ್‌ ಸ್ಟೋರಿಯೂ ಗಾಳಿ ಬಂದಂಗೆಲ್ಲ ಹಾರಾಡ್ತಿದೆ. ಎಲ್ಲರಿಗೂ ಗೊತ್ತಾಗಿರೋ ಅಂಶ ಅಂದರೆ ಬೆಟ್ಟದ ಮೇಲಿಂದ ಬಿದ್ದಿದ್ದ ಕೀರ್ತಿ ಪವಾಡ ಸದೃಶ್ಯವಾಗಿ ಬದುಕಿ ಬಂದಿದ್ದಾಳೆ. ರಾವಣನ ಪ್ರತಿಕೃತಿಯಲ್ಲಿ ಸಿಲುಕಿದ್ದ ಲಕ್ಷ್ಮೀಯ ಪ್ರಾಣವನ್ನ ಕಾಪಾಡಿದ್ದೇ ಕೀರ್ತಿ. ‘ಮೇಲಿಂದ ಬಿದ್ದಿರುವ ಕಾರಣ ಕೀರ್ತಿಗೆ ಮೆಮರಿ ಲಾಸ್ ಆಗಿದೆ, ಹೇಳಿಕೊಟ್ಟಿದ್ದನ್ನಷ್ಟೇ ಮಾಡ್ತಾಳೆ’ ಅಂತ ವೈದ್ಯರು ಹೇಳಿದ್ದರು. ಆದರೆ, ಕೀರ್ತಿ ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾಳೆ. ಎಷ್ಟರಮಟ್ಟಿಗೆ ಅಂದ್ರೆ, ಕೀರ್ತಿ ಮೊದಲು ಹೇಗೆ ವರ್ತಿಸುತ್ತಿದ್ದಳೋ ಹಾಗೇ ವರ್ತಿಸುತ್ತಿದ್ದಾಳೆ. ಎಲ್ಲದಕ್ಕೂ ಲಚ್ಚಿನೇ ಬೇಕು ಅಂತ ಹಠ ಮಾಡ್ತಿದ್ದಾಳೆ. ಇದನ್ನೆಲ್ಲಾ ಹತ್ತಿರದಿಂದ ಗಮನಿಸುತ್ತಿರುವ ಸುಪ್ರೀತಾಗೆ ಹೊಸ ಡೌಟ್‌ ಶುರುವಾಗಿದೆ. ಕೀರ್ತಿ ನಾಟಕ ಮಾಡ್ತಿದ್ದಾಳಾ ಎಂಬ ಅನುಮಾನ ಸುಪ್ರೀತಾಗೆ ಕಾಡುತ್ತಿದೆ. ಇದನ್ನು ಅವಳು ಲಕ್ಷ್ಮಿ ಹತ್ತಿರವೂ ಹೇಳಿದ್ದಾಳೆ. ಆದರೆ ಲಕ್ಷ್ಮೀ ಅವಳನ್ನಿನ್ನೂ ಪುಟ್ಟ ಪಾಪು ಥರವೇ ನೋಡ್ತಿದ್ದಾಳೆ. 

ಇನ್ನೊಂದು ಕಡೆ ಲಕ್ಷ್ಮೀ ಪರ್ಸನಲ್‌ ಲೈಫ್‌ ಕೊಂಚ ರೊಮ್ಯಾಂಟಿಕ್‌ ಆಗಿ ಕಳೆಕಟ್ಟೋ ಥರ ಇದೆ. ಅಷ್ಟರಲ್ಲೇ ಈ ಕೀರ್ತಿ ಬಂದು ಎಲ್ಲವನ್ನೂ ಹಾಳು ಮಾಡಿ ಹಾಕಿದ್ದಾಳೆ. ಇದು ಹೀರೋ ವೈಷ್ಣವ್‌ಗೆ ಸಿಕ್ಕಾಪಟ್ಟೆ ಫ್ರರ್ಸ್ಟೇಶನ್‌ ಅನಿಸುತ್ತಿದೆ. ಕೀರ್ತಿ ಬಹಳ ಇನ್ನೋಸೆಂಟ್‌ ಅಂತ ಲಕ್ಷ್ಮೀ ಹೇಳಿದ್ರೂ ಈ ವೈಷ್ಣವ್‌ ಅದನ್ನು ನಂಬೋ ಸ್ಥಿತಿಯಲ್ಲಿ ಇಲ್ಲ. ಜೊತೆಗೆ ನಿಜಕ್ಕೂ ಈ ಕೀರ್ತಿ ಏನು ಅನ್ನೋದು ಅವಳು ಮರುಜೀವ ಪಡೆದು ಬಂದ ದಿನದಿಂದಲೂ ವೀಕ್ಷಕರಿಗೆ ಪ್ರಶ್ನಾರ್ಥಕ ಚಿಹ್ನೆಯೆ ಆಗಿಬಿಟ್ಟಿದೆ. ಹೀಗಿರುವಾಗ ಅವಳು ವೈಷ್ಣವ್ ಮತ್ತು ಲಕ್ಷ್ಮೀ ನಡುವೆ ದೊಡ್ಡ ಬಂಡೆ ಹಾಗೆ ನಿಂತಿದ್ದಾಳೆ. ಅವರಿಬ್ಬರೂ ಇವಳಿಂದ ತಪ್ಪಿಸಿಕೊಂಡು ಎತ್ತ ಹೋದರೂ ಅವಳು ಇವರ ಹಿಂದೆ ಬೆಂಬಿಡದ ಬೇತಾಳನ ಹಾಗೆ ಬಂದಿದ್ದಾಳೆ.

Tap to resize

Latest Videos

ಅಮೃತಧಾರೆಯ ಜೀವ ಪಾತ್ರಧಾರಿ ಚೇಂಜ್‌! ಶಶಿ ಹೆಗಡೆ ರೀಲ್ಸ್‌ ಮಾಡ್ತಾ ಸೀರಿಯಲ್‌ನೇ ಮರ್ತುಬಿಟ್ರಾ?

ವೈಷ್ಣವ್‌ ತನ್ನ ಪತ್ನಿ ಲಕ್ಷ್ಮೀ ಜೊತೆ ರೊಮ್ಯಾಂಟಿಕ್‌ ಆಗಿ ಇರಬೇಕು ಅಂತ ಬಹಳ ಆಸೆಯಿಂದ ಏನೇನೆಲ್ಲ ಅರೇಂಜ್‌ಮೆಂಟ್ಸ್‌ ಮಾಡಿದ್ದಾನೆ. ಡ್ರೀಮಿ ಡ್ರೀಮಿ ಮ್ಯೂಸಿಕಲ್‌ ವರ್ಲ್ಡ್‌ ಅನ್ನೇ ನಿರ್ಮಿಸಿದ್ದಾನೆ. ಇನ್ನೇನು ಅವರಿಬ್ಬರೂ ಜೊತೆಗೆ ಆ ಹಾಡಿಗೆ ಹೆಜ್ಜೆ ಹಾಕಬೇಕು ಅಂತಾದಾಗ ಹಾಡು ಬದಲಾಗಿದೆ. ಕೀರ್ತಿ ಬಿಂದಾಸ್ ಆಗಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾಳೆ. ಇದನ್ನೆಲ್ಲ ನೋಡಿ ಕೀರ್ತಿಗೆ ಏನಾಗಿದೆ? ಅನ್ನೋ ಮಿಲಿಯನ್‌ ಡಾಲರ್ ಕೊಶ್ಚನ್‌ ಇನ್ನಷ್ಟು ದೊಡ್ಡದಾಗಿ ಕಾಣಿಸಿಕೊಂಡಿದೆ.

ಭಾಗ್ಯಲಕ್ಷ್ಮೀ ಸೀರಿಯಲ್​ ಅಮ್ಮ- ಮಗಳು ಭಾಗ್ಯಾ-ತನ್ವಿ ಭರ್ಜರಿ ರೀಲ್ಸ್​ಗೆ ಅಭಿಮಾನಿಗಳು ಫಿದಾ

ಅದಕ್ಕಿಂತ ಮಜಾ ಅಂದರೆ ಈ ಕೀರ್ತಿ ಸೀರಿಯಲ್‌ ವೀಕ್ಷಕರ ಫೇವರಿಟ್‌ ಆಗಿರೋದು. ಆಕೆ ನೋಡುವವರನ್ನು ಯಾವ ಲೆವೆಲ್‌ಗೆ ಮೋಡಿ ಮಾಡಿದ್ದಾಳೆ ಅಂದರೆ ತನ್ನ ಮತ್ತು ಹೆಂಡ್ತಿ ಸುಂದರ ಕ್ಷಣವನ್ನ ಹಾಳು ಮಾಡಿದ ಸಿಟ್ಟಿಗೆ ವೈಷ್ಣವ್‌ ಕೀರ್ತಿಗೆ ಹೊಡೆದರೆ ಎಲ್ಲರೂ ವೈಷ್ಣವ್‌ಗೆ ಬಾಯಿಗೆ ಬಂದ ಹಾಗೆ ಬೈತಿದ್ದಾರೆ. ಸೋ  ಹೀರೋ ಹೀರೋಯಿನ್‌ ನಡುವೆ ಯಾರು ಬಂದರೂ ಸಹಿಸದ ಫ್ಯಾನ್ಸ್‌ ಕರಡಿ ಥರ ಬಂದಿರೋ ಕೀರ್ತಿ ಪರ್ವಾಗಿ ನಿಂತಿದ್ದಾರೆ ಅಂದರೆ ಇದಕ್ಕೆ ಏನ್ ಹೇಳೋದು ಅಂತ ಒಂದಿಷ್ಟು ಜನ ತಲೆಕೆಟ್ಟು ಕೂತಿದ್ದಾರೆ. ಕೀರ್ತಿ ಪಾತ್ರದಲ್ಲಿ ಬಹಳ ಕ್ಯೂಟ್ ಆಂಡ್ ಅದ್ಭುತವಾಗಿ ನಟಿಸಿರೋದು ತನ್ವಿ ರಾವ್.
 

click me!